ತೀರ್ಥಹಳ್ಳಿ ಬೆಂಕಿ ಕೇಸ್ PART2/ ಈಗವನೂ ಇಲ್ಲ! / ಆತ ಕಂಡಂತೆಯೇ ನಡೆಯುತ್ತಾ ತನಿಖೆ? /

Malenadu Today

KARNATAKA NEWS/ ONLINE / Malenadu today/ Oct 11, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದ  ಸಜೀವ ದಹನ ಪ್ರಕರಣದಲ್ಲಿ  ಬದುಕುಳಿದಿದ್ದ ರಾಘವೇಂದ್ರರವರ ಕೊನೆ ಭರತ್ ಕೂಡ ನಿನ್ನೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ  ಸಾವನ್ನಪ್ಪಿದ್ದಾನೆ. 

Malenadu Today

ತಿರ್ಥಹಳ್ಳಿ ತಾಲ್ಲೂಕು ಅರಳಸುರಳಿ ಸಮೀಪದ ಮನೆಯೊಂದರಲ್ಲಿ ಮೂವರು ದಹನವಾದ ಪ್ರಕರಣ ನಿಗೂಢ ಎನಿಸಿತ್ತು. ಈ ಮಧ್ಯೆ. ದಹನಗೊಂಡವರ ಪೈಕಿ ತಂದೆ ತಾಯಿ ಮೊದಲೇ ಸಾವನ್ನಪ್ಪಿದ್ದರು, ಆನಂತರ ಅವರ ದಹನವಾಗಿದೆ ಎಂಬ ವಿಚಾರ ತಜ್ಞ ಮೂಲಗಳಿಂದ ಮಲೆನಾಡು ಟುಡೆಗೆ ತಿಳಿದುಬಂದಿತ್ತು.

Malenadu Today

ಶ್ರೀರಾಮ ಹಾಗೂ ಭರತ ಇಬ್ಬರು ಸಜೀವ ದಹನಗೊಂಡಿದ್ದರು. ಅದರಲ್ಲಿ ಭರತ ಉರಿ ತಾಳಲಾರದೇ ಹೊರಕ್ಕೆ ಬಂದಿದ್ದ. ಆತನನ್ನು ಮೊದಲು ತೀರ್ಥಹಳ್ಳಿ, ನಂತರ ಶಿವಮೊಗ್ಗ ತದನಂತರ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ನಿನ್ನೆ ಸಂಜೆ ಅಲ್ಲಿ ಆತ ಸಾವನ್ನಪ್ಪಿದ್ದಾನೆ. 

ಘಟನೆಯ ಪ್ರತ್ಯಕ್ಷ ದರ್ಶಿಯು ಆಗಿರುವ ಭರತ ನೀಡಿರುವ ಹೇಳಿಕೆಯೇ ಪ್ರಕರಣದಲ್ಲಿ  ಪ್ರಮುಖ ಸಾಕ್ಷ್ಯವಾಗಲಿದೆ. ಈ ನಿಟ್ಟಿನಲ್ಲಿ ಪೊಲೀಸರ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಕತೂಹಲ ಮೂಡಿಸ್ತಿದೆ. ಅಲ್ಲದೆ  ಪ್ರಕರಣದಲ್ಲಿ ಕೆಲವೊಂದು ವಿಚಾರ ಗೌಪ್ಯವಾಗಿರುವುದು ಸಹ ಅನುಮಾನಗಳಿಗೆ ಕಾರಣವಾಗಿದೆ.  

ನಿಜಕ್ಕೂ ತೀರ್ಥಹಳ್ಳಿಯಲ್ಲಿ ಅರಳಸುರಳಿಯ ಆ ಮನೆಯಲ್ಲಿ ನಡೆದಿದ್ದೇನು? ತಂದೆತಾಯಿಯ ಸಾವು ಹೇಗಾಯ್ತು, ಶ್ರೀರಾಮ-ಭರತ ಎಲ್ಲರೂ ಬೆಂಕಿಗೆ ಬಿದ್ದರೇ? ಪ್ರಶ್ನೆಗಳಿಗೆ ನ್ಯಾಯಯುತ ತನಿಖೆಯೆ ಉತ್ತರ ನೀಡುವ ಪಾತ್ರವನ್ನು ನಿಭಾಯಿಸಬೇಕಿದೆ ಶಿವಮೊಗ್ಗ ಪೊಲೀಸ್​ ಇಲಾಖೆ.. 

 


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

Share This Article