ಮಲೆನಾಡಿಗರೇ ಎಚ್ಚರ! ಸೀನಿಯರ್ ಸಿಟಿಜನ್ ಮನೆ ಮೇಲೆ ಅರಣ್ಯ ಇಲಾಖೆ ರೇಡ್ | ಅರೆಸ್ಟ್ ತಪ್ಪಿಸಿದ ಶಾಸಕ

The forest department has conducted a raid in Tirthahalli ತೀರ್ಥಹಳ್ಳಿಯಲ್ಲಿ ಅರಣ್ಯ ಇಲಾಖೆ ವನ್ಯಜೀವಿಯ ಅಂಗಾಂಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪ ಸಂಬಂಧ ರೇಡ್ ನಡೆಸಿದೆ

ಮಲೆನಾಡಿಗರೇ ಎಚ್ಚರ! ಸೀನಿಯರ್ ಸಿಟಿಜನ್ ಮನೆ ಮೇಲೆ ಅರಣ್ಯ ಇಲಾಖೆ ರೇಡ್ | ಅರೆಸ್ಟ್ ತಪ್ಪಿಸಿದ ಶಾಸಕ

KARNATAKA NEWS/ ONLINE / Malenadu today/ Nov 1, 2023 SHIVAMOGGA NEWS

THIRTHAHALLI | ಮಲೆನಾಡಿಗರೇ ಈಗಲೇ ಎಚ್ಚೆತ್ತುಕೊಳ್ಳಿ , ಯಾರಾದರೂ ಪಿನ್ ಇಟ್ಟರೇ ನಿಮ್ಮ ಮನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಬಂದು ನಿಮ್ಮನ್ನೇ ಅರೆಸ್ಟ್ ಮಾಡಬಹುದು. ಇವತ್ತು ಇಂತಹದ್ದೊಂದು ಸಂದಿಗ್ದ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಬಸವನಗದ್ದೆಯಲ್ಲಿ ನಡೆದಿತ್ತು. 

ಮಲ್ನಾಡಿನ ಹಳೆಯ ಮನೆಗಳಲ್ಲಿ ಜಿಂಕೆ ಕೊಂಬುಗಳು , ಕಾಡುಕೋಣದ ಕೋಡುಗಳು, ಮುಖವಾಡಗಳು ಇರುವುದು ಸಾಮಾನ್ಯ ಸಂಗತಿ. ಆದರೆ ಇದೀಗ ಅರಣ್ಯ ಇಲಾಖೆ ವನ್ಯಜೀವಿಗಗಳ ಅಂಗಾಂಗದ ಬಗ್ಗೆ ಅತೀವ ಕಾಳಜಿಯನ್ನು ತೋರಿಸುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡಿಗರಿಗೆ ಸಂಕಷ್ಟ ಎದುರಾಗಿದೆ.

READ : ಹುಲಿ ಉಗುರು | ಮಲೆನಾಡು ಗಢಗಢ |ಕಿಮ್ಮನೆ ರತ್ನಾಕರ್​ & ಆರಗ ಜ್ಞಾನೇಂದ್ರರಿಂದ ಒಂದೇ ಮಾತು! 

ಇತರೇ ಮನೆಗಳಂತೆ ಇಲ್ಲಿನ ನಿವಾಸಿ ಪ್ರಸನ್ನ ಎಂಬವರ ಮನೆಯಲ್ಲಿಯು ಕಾಡು ಕೋಣದ ಕೋಡು, ಹಾಗೂ ಜಿಂಕೆ ಕೊಂಬು ಇತ್ತು. ಯಾವುದೋ ಅಜ್ಜ ಕಾಲದ ವಸ್ತುಗಳನ್ನ ಜಪ್ತು ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ಸೀನಿಯರ್ ಸಿಟಿಜನ್​ ಒಬ್ಬರನ್ನು ಅರೆಸ್ಟ್ ಮಾಡಲು ಮುಂದಾಗಿತ್ತು. 

ತಕ್ಷಣವೇ ವಿಷಯ ತಿಳಿದು ಓಡಿ ಬಂದ ಶಾಸಕ ಆರಗ ಜ್ಞಾನೇಂದ್ರರವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಮಲ್ನಾಡ್​ನಲ್ಲಿ ಇಂತವೆಲ್ಲಾ ಇದ್ದೆ ಇರುತ್ತೆ. ಜಿಂಕೆ ಕೊಂಬು ನಮ್ಮನೆಯಲ್ಲು ಇದೆ. ಅದು ಇವತ್ತಿನದಲ್ಲ, ಯಾವುದೋ ಹಳೆಯ ಕಾಲದ್ದು, ಅಗತ್ಯವಾದರೆ ವಸ್ತುಗಳನ್ನ ತೆಗೆದುಕೊಂಡು ಹೋಗಿ, ಅದನ್ನು ಕೊಡಲಿಕ್ಕೆ ಯಾವ ಅಡ್ಡಿಯು ಇಲ್ಲ ಎಂದರು. ಅದನ್ನ ಬಿಟ್ಟು ಅರೆಸ್ಟ್​ ಮಾಡುತ್ತೇವೆ ಎಂದರೇ ಸರಿಯಾದ ಕ್ರಮವಲ್ಲ ಎಂದರು.

READ : ಹುಲಿ ಉಗುರು ಅಸಲಿಯೋ? ನಕಲಿಯೋ? ಏನಿದು ಮಸಲತ್ತು? JP ಬರೆಯುತ್ತಾರೆ

ಅಲ್ಲದೆ ಸ್ಥಳದಲ್ಲಿಯೇ ಹಿರಿಯ ಅರಣ್ಯ ಅಧಿಕಾರಿಗಳನ್ನ ಫೋನ್  ಕಾಲ್​ನಲ್ಲಿ ಮಾತನಾಡಿಸಿ , ವಿವರಣೆ ನೀಡಿದರು. ಆನಂತರ ಸ್ಥಳೀಯ ಅಧಿಕಾರಿಗಳು ಅಲ್ಲಿಂದ ಪ್ರಕರಣ ಸುಖಾಂತ್ಯಗೊಳಿಸಿದರು ಎಂಬ ಮಾಹಿತಿ ಲಭ್ಯವಾಗಿದೆ. 

ವನ್ಯಜೀವಿಗಳ ಅಂಗಾಂಗಳನ್ನು ಇಟ್ಟುಕೊಳ್ಳುವುದು ಘೋರ ಅಪರಾಧವೇ. ಈ ಬಗ್ಗೆ ಮಲೆನಾಡಿಗರು ಸಹ ಜಾಗ್ರತಗೊಳ್ಳಬೇಕಿದೆ. ಸೋಶಿಯಲ್ ಮೀಡಿಯಾಗಳನ್ನ ಅನ್ವಯಿಸುತ್ತಾ ಕಾಲಕಾಲಕ್ಕೆ ಯಾವ ಕಾರ್ಯಾಚರಣೆ ಸಹ ನಡೆಯಬಲ್ಲದು. ಅಂತಹ ಸಂದರ್ಭದಲ್ಲಿ ಕಾರಣ ಹೇಳಲು ಅವಕಾಶ ಸಿಗುವುದಿಲ್ಲ.

ಈ ವಿಚಾರದಲ್ಲಿ ತೀರ್ಥಹಳ್ಳಿ ಜನಪ್ರತಿನಿಧಿಗಳ ನಿಲವು ಪಕ್ಷಾತೀತವಾಗಿ ಒಗ್ಗಟ್ಟು ತೋರುತ್ತಿದೆ. ಇತ್ತೀಚೆಗೆ ಕಾಂಗ್ರೆಸ್​ನ ಹಿರಿಯ ಮುಖಂಡ, ಇಂತಹ ವಸ್ತುಗಳನ್ನು ವಾಪಸ್ ಕೊಡಲು ಸಮಯವಾಕಾಶ ನೀಡಬೇಕು, ಇಲ್ಲವಾದರೆ ಅಮೂಲ್ಯ ವಸ್ತುಗಳು ನಾಶವಾಗುವ ಸಾಧ್ಯತೆ ಇದೆ ಎಂದು ಅರಣ್ಯ ಸಚಿವರಿಗೆ ಪತ್ರ ಬರೆದಿದ್ದರು. 

ಅಲ್ಲದೆ ಆರಗ ಜ್ಞಾನೇಂದ್ರರವರು ಕೂಡ ಇದೇ ಅಭಿಪ್ರಾಯವನ್ನ ಮಂಡಿಸಿದ್ದರು. 

ಇದರ ನಡುವೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕಾಡುಕೋಣ ಹಾಗೂ ಜಿಂಕೆ ಕೊಂಬನ್ನು ಜಪ್ತು ಮಾಡಲು ಬಂದಿತ್ತು. ಶಾಸಕರ ಮಧ್ಯಪ್ರವೇಶದಿಂದ ಪ್ರಕರಣ ಸುಖ್ಯಾಂತ್ಯಗೊಂಡಿದೆ.