ಹುಲಿ ಉಗುರು ಅಸಲಿಯೋ? ನಕಲಿಯೋ? ಏನಿದು ಮಸಲತ್ತು? JP ಬರೆಯುತ್ತಾರೆ

ಹುಲಿ ಉಗುರಿನ ಬಗ್ಗೆ ಜೆಪಿ ಬರೆಯುತ್ತಾರೆ!JP writes about Tiger Claw!

ಹುಲಿ ಉಗುರು ಅಸಲಿಯೋ? ನಕಲಿಯೋ? ಏನಿದು ಮಸಲತ್ತು? JP ಬರೆಯುತ್ತಾರೆ

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS

ಹುಲಿ ಉಗುರನ್ನು ಎಪ್ ಎಸ್ ಎಲ್ ಗೆ ಕಳುಹಿಸದೆ, ತಕ್ಷಣದ ನಿರ್ಧಾರಕ್ಕೆ ಬಂದು ಜಾಮೀನು ರಹಿತ ಕೇಸ್ ಹಾಕಿ ವರ್ತೂರ್ ಸಂತೋಷ್ ರನ್ನು ಜೈಲಿಗೆ ಅಟ್ಟಿದ್ದು ಯಾವ ನ್ಯಾಯ? ನೈಜ ವಸ್ತುಗಳನ್ನೆ ನಾಚಿ ನೀರಾಗುಂತೆ  ಮಾಡುತ್ತವೆ ವನ್ಯಜೀವಿ ಗಳ ಉಗುರು, ಹಲ್ಲು, ಚರ್ಮದ ದಂದೆ ಜೆಪಿ ಬರೆಯುತ್ತಾರೆ.

ಹುಲಿ ಉಗುರು..ಹುಲಿ ಉಗುರು ಎಲ್ಲಿ ನೋಡಿದ್ರೂ ಕೇಳಿದ್ರೂ..ಈಗ ಹುಲಿ ಉಗರಿನದ್ದೆ ಮಾತು. ವನ್ಯಜೀವಿ ಕಾಯ್ದೆ ಪ್ರಕಾರ ವನ್ಯಜೀವಿಗಳ ಅಂಗಾಂಗಳನ್ನು ಅಲಂಕಾರಿಕ ವಸ್ತುಗಳಾಗಿ ಬಳಸುವಂತಿಲ್ಲ. ಇದು ಪೊಲೀಸ್ ಕಾಯ್ದೆಗಿಂತಲೂ, ಕಠಿಣವಾದ ಅರಣ್ಯ ಕಾಯ್ದೆಯಾಗಿದೆ. 

ಅದರಲ್ಲೂ ಷೆಡ್ಯುಲ್ ಒನ್ ಎನಿಮಲ್ ಎನಿಸಿಕೊಳ್ಳುವ ಹುಲಿ ಸಿಂಹ ಆನೆ ಚಿರತೆಯಂತ ಪ್ರಾಣಿಗಳನ್ನು ಕೊಂದರಂತೂ ಕಥೆ ಮುಗಿದೆ ಹೋಯ್ತು. ಆತ ಜೈಲು ಸೇರೋದು ಪಕ್ಕಾ...ವನ್ಯಪ್ರಾಣಿಗಳನ್ನು ಕೊಂದ ನಂತರ ಅವುಗಳ ಹಲ್ಲು ಉಗುರು ಚರ್ಮ ಪಳೆಯುಳಿಕೆಗಳನ್ನು ಆಲಂಕಾರಿಕೆ ವಸ್ತುವಾಗಿ ಇಲ್ಲವೇ ಆಯುರ್ವೇದ ಔಷಧಿಗಾಗಿ ಬಳಸುವುದು ಘೋರ ಅಪರಾಧವಾಗಿದೆ. 

READ : ಶಿವಮೊಗ್ಗದಲ್ಲಿ ಹುಲಿ ಚರ್ಮದ ಚರ್ಚೆ ತಾರಕಕ್ಕೆ!? ಏನಿದು ವಿನಯ್ ಗುರೂಜಿ ವಿಚಾರ!?

ಆದಾಗ್ಯು ವನ್ಯಪ್ರಾಣಿಗಳಲ್ಲಿ ಹುಲಿ ಉಗುರು ಹುಲಿ ಹಲ್ಲು ಹಾಗು ಆನೆಯ ಬಾಲಕ್ಕೆ ಹೆಚ್ಚಿನ ಅಕ್ರಮ ಬೇಡಿಕೆ ಇದೆ. ಹುಲಿ ಉಗುರನ್ನು ಬಂಗಾರದ ಸರಕ್ಕೆ ಪೆಂಡೆಂಟ್ ಆಗಿ ಬಳಸಿದರೆ, ಆನೆಯ ಬಾಲವನ್ನು ಉಂಗುರಕ್ಕೆ ಬಳಸುತ್ತಾರೆ. ಇದು ವನ್ಯಜೀವಿ ರಕ್ಷಣಾ ಕಾಯ್ದೆ ಪ್ರಕಾರ ಅಪರಾಧವಾಗಿದೆ.

ಇಷ್ಟು ವರ್ಷಗಳ ಕಾಲ ಹುಲಿ ಉಗುರನ್ನು ಆನೆ ಬಾಲದ ಉಂಗುರವನ್ನು ತೊಟ್ಟು ಕತ್ತು ಕೈಗಳನ್ನು ಜಳಪಿಸುತ್ತಾ ಓಡಾಡುತ್ತಿದ್ದ ಉದ್ಯಮಿ ವ್ಯಾಪಾರಸ್ಥರು ರಾಜಕಾರಣಿಗಳು ಅರಣ್ಯ ಇಲಾಖೆ ಅಧಿಕಾರಿಗಳ ಕಣ್ಣಿಗೆ ಕಂಡರೂ, ಕಾಣದಂತಿದ್ದರು. ಮಲೆನಾಡು ಕರಾವಳಿ ಕೊಡಗು ಭಾಗಗಳಲ್ಲಿ ಈಗಲೂ ಜಿಂಕೆ ಕಡವೆ. ಕಾಡುಕೋಣದ ಕೊಂಬುಗಳನ್ನು ಅಲಂಕಾರಿಕ ವಸ್ತುವಾಗಿ ಮನೆಯಲ್ಲಿ ಬಳಸುತ್ತಾರೆ. ಇದೊಂದು ರೀತಿಯಲ್ಲಿ ಸಾಂಪ್ರಾದಾಯಿಕ ಕಲೆಯಾಗಿ ಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದೂ, ಜಾಣಮೌನಕ್ಕೆಜಾರಿದ್ದಾರೆ. 

ಇಂಡಿಯಾ ಪಾಕಿಸ್ತಾನ ಕ್ರಿಕೇಟ್ ಮ್ಯಾಚ್ ನಂತೆ ಬಿಗ್ ಬಾಸ್ ವೀಕ್ಷಿಸುವ ಜನರ ಕಣ್ಣಿಗೆ ಬಿಗ್ ಬಾಸ್ ಅಭ್ಯರ್ಥಿ ವರ್ತೂರು ಸಂತೋಷ್ ಕೊರಳಿನ ಚಿನ್ನದ ಸರ ರಾಚಿದೆ. ಸಂತೋಷ್ ಕೊರಳಿನಲ್ಲಿದ್ದ ಚಿನ್ನದ ಸರದ ಪೆಂಡೆಂಟ್ ಹುಲಿ ಉಗುರಿನಿಂದ ಮಾಡಿದ್ದು ಎಂಬುದು ವೀಕ್ಷಕರ ಮೂಸೆಯಿಂದ ಅಭಿಪ್ರಾಯ ಹೊಮ್ಮುತ್ತಲೆ ಪರ ವಿರೋಧದ ಅಲೆ ಎದ್ದಿದೆ. ಅರಣ್ಯ ಇಲಾಖೆಗೆ ಇದು ಬಿಸಿ ತುಪ್ಪವಾಗಿದೆ.

ಏಕಾಏಕಿ ಬಿಗ್ ಬಾಸ್ ಮನೆಗೆ ದಾಳಿಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ವರ್ತೂರು ಸಂತೋಷ್ ರನ್ನು ಅರೆಸ್ಟ್ ಮಾಡಿ, ಹಿಂದೆ ಮುಂದೆ ಯೋಚಿಸದೆ, ಇದು ಬುಲಿ ಉಗುರು ನಿಜ ಎಂದು ಅರಣ್ಯಾಧಿಕಾರಿಗಳು ಷರಾ ಬರೆದು ಆರೋಪಿಯನ್ನು ಜೈಲಿಗಟ್ಟಿದರು.

ಒರಿಜನಲ್ ವಸ್ತುಗಳನ್ನೇ ಮೀರಿಸುತ್ತೇ...ನಕಲಿ ವಸ್ತುಗಳು 

ಹಾಗೆ ನೋಡಿದರೆ ವನ್ಯಜೀವಿಗಳ ಹಲ್ಲು ಉಗುರು ಚರ್ಮಗಳನ್ನು ಡುಪ್ಲಿಕೇಟ್ ಮಾಡುವ ತಂಡವೇ ಎಲ್ಲೆಡೆ ಸಕ್ರೀಯವಾಗಿದೆ.. ಹುಲಿ ಉಗರೆಂದು ನಕಲಿ ಉಗುರನ್ನು ಕೊಟ್ಟು ಯಾಮಾರಿಸಿದವರು.,..ಜಿಂಕೆ ಚರ್ಮ ಹುಲಿ ಚರ್ಮ ಎಂದು ಆಡು ಕುರಿಯ ಚರ್ಮಕ್ಕೆ ಬಣ್ಣ ಬಳಿದು ಮೋಸ ಮಾಡಿದ ಜಾಲದ ಬಗ್ಗೆ ಈ ಹಿಂದೆಲ್ಲಾ ವರದಿಗಳಾಗಿವೆ.

ಅರಣ್ಯ ಇಲಾಖೆಯ ದಾಳಿಯ ವೇಳೆಯಲ್ಲೂ ವನ್ಯಜೀವಿಗಳ ಪಳೆಯುಳಿಕೆಗಳನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಅವು ನಕಲಿ ಎಂಬುದು ಹಲವು ಪ್ರಕರಣಗಳಲ್ಲಿ ಪತ್ತೆಯಾಗಿದೆ. ಪರಿಸ್ಥಿತಿ ಹೀಗಿರುವಾಗ ವರ್ತೂರು ಸಂತೋಷ್ ರ ಕೊರಳಿನಲ್ಲಿದ್ದ ಹುಲಿ ಉಗುರು ನಕಲಿಯೋ ಅಥವಾ ಅಸಲಿಯೇ ಎಂಬುದನ್ನು ಪರೀಕ್ಷಿಸುವ ಔದಾರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು .ಯಾಕೆ  ಮುಂದಾಗಿಲ್ಲ.  ಹುಲಿ ಉಗುರನ್ನು ಎಪ್.ಎಸ್ ಎಲ್ ಗೆ ಕಳುಹಿಸಿ ಅದರ ವರದಿ ಬರುವವರೆಗೂ ಅಧಿಕಾರಿಯಾದವರು ಕಾಯಬೇಕಿತ್ತು. ಏಕಾಏಕಿ ಉಗರನ್ನು ಪರೀಕ್ಷಿಸದೇ..ಇದು ಹುಲಿ ಉಗುರು ಎಂದು ಅಧಿಕಾರಿ ಖಚಿತ ಪಡಿಸಿದ ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧವೂ ವ್ಯಕ್ತವಾಗಿದೆ. ಸಂತೋಷ್ ಸರದಿಯ ನಂತರ ಈಗ ನಟ ಜಗ್ಗೇಶ್, ದರ್ಶನ್ ಸೇರಿದಂತೆ ಕೆಲ ಮಠಗಳ ಮಠಾಧೀಶರ ಬಗ್ಗೆಯೂ ತನಿಖೆ ನಡೆಸುವಂತೆ ಆಗ್ರಹಗಳು ಎಲ್ಲೆಡೆ ಕೇಳಿ ಬರುತ್ತಿದೆ. 

ವರ್ತೂರ್ ಸಂತೋಷ್ ವಿರುದ್ಧ ಪ್ರಕರಣ ದಾಖಲಿಸುವ ಮುನ್ನ ಉಗರನ್ನು ಪರೀಕ್ಷೆಗೆ ಒಳಪಡಿಸಬೇಕಿತ್ತು. ಒಂದು ವೇಳೆ ವಶಪಡಿಸಿಕೊಂಡ ಹುಲಿ ಉಗುರು ನಿಜವಾಗಿದ್ದರೆ ಪರವಾಗಿಲ್ಲ. ಅದು ಹುಲಿ ಉಗರನ್ನು ಹೋಲುವ ನಕಲಿ ವಸ್ತುವಾಗಿದ್ದರೆ. ತನಿಖಾಧಿಕಾರಿ ಬೆಲೆ ತೆತ್ತಬೇಕಾಗುತ್ತದೆ.

ಮಾತ್ರವಲ್ಲದೆ ಮಾನನಷ್ಟ ಮೊಕದ್ದಮ್ಮೆ  ದಾಖಲಾದ್ರೆ ತನಿಖಾಧಿಕಾರಿಯೇ ಜೈಲು ಸೇರಬೇಕಾಗುತ್ತದೆ. ಒರಿಜನಲ್ ವಸ್ತುಗಳನ್ನೇ ಮೀರಿಸುವಂತ ನಕಲಿ ವಸ್ತುಗಳನ್ನು ಮಾರುವ ಜಾಲಗಳು ಎಲ್ಲೆಡೆ ಸಕ್ರೀಯವಾಗಿರುವಂತ ಸಂದರ್ಭದಲ್ಲಿ ವನ್ಯಜೀವಿಗಳ ಪಳಯುಳಿಕೆಗಳನ್ನು ಪ್ಲಾಸ್ಕಿಕ್ ವಸ್ತುಗಳಿಂದಲೂ ಅಸಲಿಯ ಪಡಿಯಚ್ಚಿನಂತೆ ಚರ್ಮ, ಉಗುರು, ಕೊಂಬುಗಳನ್ನು ಉತ್ಪಾದನೆ ಮಾಡಬಹುದಾಗಿದೆ....ದನದ ಕೊಂಬನ್ನೇ ಹುಲಿ ಉಗುರನ್ನಾಗಿ ಮಾಡುತ್ತಾರೆ. ಕಾಣು ಕೋಣದ ಬಾಲದ ಕೂದಲನ್ನೇ ಆನೆಯ ಕೂದಲೆಂದು ಕೊಟ್ಟು ಮೋಸ ಮಾಡುವ ಜಾಲ ಇರುವ ಸಂದರ್ಭದಲ್ಲಿ..ಯಾವುದಕ್ಕೂ ವರ್ತೂರು ಸಂತೋಷ್ ಪ್ರಕರಣದಲ್ಲಿ ತನಿಖಾಧಿಕಾರಿ ಯಾದವರು ಕೊಂಚ ತಾಳ್ಮೆ ವಹಿಸಿ ಉಗುರುರನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಒಳಪಡಿಸಬೇಕಿತ್ತು 


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!