ಸಾವಿರಕ್ಕೂ ಹೆಚ್ಚು ಮಂದಿ ಜೊತೆ CONGRESS ಸೇರಿದ JDS ಶ್ರೀಕಾಂತ್​ ! DKS ಬತ್ತಳಿಕೆಯಲ್ಲಿ?

M. Srikanth left JDS and joined Congress party ಎಂ.ಶ್ರೀಕಾಂತ್​ ರವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ

ಸಾವಿರಕ್ಕೂ ಹೆಚ್ಚು ಮಂದಿ ಜೊತೆ  CONGRESS ಸೇರಿದ JDS ಶ್ರೀಕಾಂತ್​ ! DKS ಬತ್ತಳಿಕೆಯಲ್ಲಿ?

KARNATAKA NEWS/ ONLINE / Malenadu today/ Oct 26, 2023 SHIVAMOGGA NEWS

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಅತ್ಯಾಪ್ತ ಎಂದೇ ಗುರುತಿಸಲ್ಪಟ್ಟಿದ್ದ, ಶಿವಮೊಗ್ಗ ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌ ನಿನ್ನೆ  ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ , ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

ಎಂ.ಶ್ರೀಕಾಂತ್ ಜೊತೆ ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ ಸೇರಿದಂತೆ ಹಲವು ಮುಖಂಡರು ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಗೊಂಡರು. ಎಂ ಶ್ರೀಕಾಂತ್ ಕಳೆದೊಂದು ತಿಂಗಳ ಹಿಂದೆಯಷ್ಟೇ ಜೆಡಿಎಸ್ ತೊರೆಯುವ ಬಗ್ಗೆ ಘೋಷಣೆ ಮಾಡಿದ್ದರು.

READ : ಜೆಡಿಎಸ್ ಶ್ರೀಕಾಂತ್ ಇನ್ಮುಂದೆ ಕಾಂಗ್ರೆಸ್ ಶ್ರೀಕಾಂತ್! ದೇವೇಗೌಡರ ಪರಮಾಪ್ತ ಸಿದ್ದರಾಮಯ್ಯ-ಡಿಕೆಶಿ ತೆಕ್ಕೆಗೆ ಸೇರುತ್ತಿರುವುದೇಕೆ?

ಇನ್ನೂ ವೇಳೆ ಮಾತನಾಡಿದ ಎಂ ಶ್ರೀಕಾಂತ್ ಜೆಡಿಎಸ್‌ ಪಕ್ಷದಲ್ಲಿದ್ದಾಗಲೂ ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೆವು, ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಪಕ್ಷದೊಂದಿಗೆ ಹೊ೦ದಾ ಣಿಕೆ ಮಾಡಿಕೊಂಡು ಅಧಿಕಾರ ನಡೆಸಿದ್ದೆವು.

ಜೆಡಿಎಸ್ ಜಿಲ್ಲಾಧ್ಯಕ್ಷನಾಗಿ ಪಕ್ಷದ ಏಳಿಗೆಗೆ ಸಾಕಷ್ಟು ಶ್ರಮ ಹಾಕಿದ್ದೇನೆ. ಆ ಪಕ್ಷವು ಸಹ ನನಗೆ ಎಲ್ಲ ವನ್ನು ಕೊಟ್ಟಿದೆ. ಇದೀಗ ಅಧಿಕಾರದ ಆಸೆಗೆ ನಾನು ಕಾಂಗ್ರೆಸ್‌ ಸೇರ್ಪಡೆಗೊಂಡಿಲ್ಲ. ಆ ರೀತಿ ಅಧಿಕಾರಕ್ಕೆ ಆಸೆಪಟ್ಟಿದ್ದರೆ 2013 ರಲ್ಲಿ ನಮ್ಮ ಪಕ್ಷದವರೇ 10 ಮಂದಿ ಪಾಲಿಕೆ ಸದಸ್ಯರಿದ್ದರು, ಅವರನ್ನು ಕರೆದುಕೊ೦ಡು ಹೋಗಿದ್ದರೆ ಕಾಂಗ್ರೆಸ್‌ನಲ್ಲಿ ನನಗೆ ಒಳ್ಳೆಯ ಸ್ಥಾನವೇ ಸಿಗುತ್ತಿತ್ತು. ಆದರೆ, ನಾನೆಂದು ಅಧಿ ಕಾರಕ್ಕೆ ಪಟ್ಟವನ್ನಲ್ಲ ಎಂದು ಪುನರುಚ್ಚರಿಸಿದರು.

READ : 26 ಕ್ಕೆ ಕಾಂಗ್ರೆಸ್​ ಸೇರಲಿರುವ ಜೆಡಿಎಸ್ ಶ್ರೀಕಾಂತ್! ದೇವೇಗೌಡರು, ಕುಮಾರಸ್ವಾಮಿ ಬಗ್ಗೆ ಹೇಳಿದ್ದೇನು?



ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇದೊಂದು ವಿಶೇಷವಾದ ಸಂದರ್ಭ, ವಿಜಯದಶಮಿ ಮರುದಿನವೇ ಜನತಾದಳದಿಂದ ಸಾವಿರಾರು ಕಾರ್ಯಕರ್ತರು. ಹಾಗೂ ನಾಯಕರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದಿದ್ದಾರೆ. 

ಎಂ.ಶ್ರೀಕಾಂತ್ ನನ್ನ ಒಳ್ಳೆಯ ಗೆಳೆಯ ಹಾಗೂ ಒಳ್ಳೆಯ ಸಂಘಟನಾಗಾರ, ನಾಯಕರನ್ನು ಸೃಷ್ಟಿ ಮಾಡುವಂತಹ ಶಕ್ತಿ ಅವರಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಅವರಂಥ ನಾಯಕ ನಮ್ಮ ಪಕ್ಷದಲ್ಲಿರಬೇಕು ಎನ್ನುವುದು ನನ್ನ ಆಶಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ, ಮಾಜಿ ಸಂಸದ ಆಯನೂರು ಮಂಜುನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಆಹಮದ್‌, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷಎಚ್‌.ಎಸ್. ಸುಂದರೇಶ್‌, ಪ್ರಮುಖರಾದ ಗೀತಾ ಶಿವರಾಜ್ ಕುಮಾರ್ ಸೇರಿದಂತೆ ಹಲವರು ಉಪಸ್ತಿತರಿದ್ದರು 


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!