ಶಿವಮೊಗ್ಗ ನಗರದಲ್ಲಿ ಬಿಜೆಪಿಗೆ ಆಯನೂರು ಮಂಜುನಾಥ್​ರೇ ರೆಬೆಲ್​?! ಟಿಕೆಟ್​ ಕೊಟ್ಟರೆ ಬಿಜೆಪಿಯಿಂದ, ಟಿಕೆಟ್ ಕೊಡದಿದ್ದರೆ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಸಾಧ್ಯತೆ!?

Malenadu Today

MALENADUTODAY.COM  |SHIVAMOGGA| #KANNADANEWSWEB

ಹರಕು ಬಾಯಿ ಮುಚ್ಚಬೇಕು, ಶಿವಮೊಗ್ಗದಲ್ಲಿ ಶಾಂತಿ ನೆಲೆಸಬೇಕು ಎಂಬ ಸ್ಲೋಗನ್​ವೊಂದು ಕಳೆದೆರಡು ತಿಂಗಳಿನಿಂದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ. ಈ ಸದ್ದಿನ ಹಿಂದಿರೋದು ಬಿಜೆಪಿ ಹಿರಿಯ ನಾಯಕ ಎಂಎಲ್​ಸಿ ಆಯನೂರು ಮಂಜುನಾಥ್​ರವರದ್ದು ಎಂಬುದರಲ್ಲಿ ಮತದಾರರಿಗೂ ಅನುಮಾನ ಉಳಿದಿಲ್ಲ. 

Malenadu Today

ಇದೀಗ ಆಯನೂರು ಮಂಜುನಾಥ್​ ಶಿವಮೊಗ್ಗದಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ಧಾರೆ ಎಂಬ ಸುದ್ದಿಯೊಂದು ಲಭ್ಯವಾಗಿದೆ.  ಹೌದು, ಎರಡು ವಿಧಾನಸಭಾ ಚುನಾವಣೆಯಿಂದ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್​ಗಾಗಿ ಹೈಕಮಾಂಡ್​ಗೆ ಮನವಿ ಸಲ್ಲಿಸ್ತಿದ್ದೇನೆ. ಆದರೆ ನನ್ನ ಮನವಿ ಪುರಸ್ಕೃತವಾಗಿಲ್ಲ. ಹೀಗಾಗಿ ಈ ಸಲ ಶಿವಮೊಗ್ಗ ನಗರದಿಂದು ಚುನಾವಣೆಗೆ ನಿಲ್ಲುವುದು ನಿಶ್ಚಿತ , ಟಿಕೆಟ್ ಕೊಟ್ಟರೆ ಉತ್ತಮ. ಟಿಕೆಟ್ ನೀಡದಿದ್ದರೂ ಸ್ಪರ್ಧೆ ಖಚಿತ ಎಂದು ಸುದ್ದಿಪತ್ರಿಕೆಯೊಂದಕ್ಕೆ ಹೇಳಿದ್ದಾರೆ. 

Malenadu Today

*ಶಿವಮೊಗ್ಗದಲ್ಲಿ ಸುಬುಧೇಂದ್ರ ತೀರ್ಥರ ಮೆರವಣಿಗೆ! ಬೊಮ್ಮನಕಟ್ಟೆಯಲ್ಲಿ ಗುರು ರಾಯರ ಮಠ ಸ್ಥಾಪನೆ*

ಇನ್ನೂ ಈ ಸಲದ ಚುನಾವಣಾ ಅಖಾಡದಲ್ಲಿ ಆಯನೂರು ಮಂಜುನಾಥ್ ಬಿಜೆಪಿಯಲ್ಲಿಯೇ ಸಾಕಷ್ಟು ಸಂಚಲನ ಮೂಡಿಸಿದ್ದಾರೆ. ಹೇಳುವ ಮಾತು ನಿಷ್ಟುರದಲ್ಲಿ ಆಡಿ ವಿರೋಧ ಕಟ್ಟಿಕೊಂಡರು, ಅಷ್ಟೆ ವ್ಯವಧಾನವಾಗಿ ಸಮರ್ಥಿಸಿಕೊಂಡು ಪಕ್ಷದಲ್ಲಿ ತಮ್ಮ ಸ್ಥಾನಮಾನದ ಗೌರವವನ್ನು ಉಳಿದವರಿಗೂ ವಿವರಿಸುವ ಕಲೆಯ ವ್ಯಕ್ತಿತ್ವ ಹೊಂದಿದವರು ಆಯನೂರು ಮಂಜುನಾಥ್. ಹಾಗಾಗಿ ಅವರನ್ನು ಮಾತಿನಲ್ಲಿ ಎದುರುಹಾಕಿಕೊಳ್ಳುವವರು ಕಡಿಮೆ. 

*power cut | ಮೆಸ್ಕಾಂ ಪ್ರಕಟಣೆ : ಶಿವಮೊಗ್ಗದ ಈ ಪ್ರಮುಖ ಭಾಗಗಳಲ್ಲಿ ಇವತ್ತು ವಿದ್ಯುತ್ ಇರೋದಿಲ್ಲ*

ಇತ್ತೀಚೆಗೆ ಅವರ ಸ್ಲೋಗನ್ ಹಾಗೂ ಬ್ಯಾನರ್ ರಾಜ್ಯಮಟ್ಟದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಅದರಲ್ಲಿಯು ಕೆ.ಎಸ್​.ಈಶ್ವರಪ್ಪರಿಗೆ ಟಿಕೆಟ್ ಸಿಗೋದು ಡೌಟ್ ಎನ್ನುವ ಸಂದರ್ಭದಲ್ಲಿ ಈ ನ್ಯೂಸ್​, ಬ್ರೆಕಿಂಗ್​ ನ್ಯೂಸ್ ಆಗಿತ್ತು. ಇದರ ಬೆನ್ನಲ್ಲೆ ಆಯನೂರು ಮಂಜುನಾಥ್​ ಟಿಕೆಟ್ ಕೊಟ್ಟರೆ ಬಿಜೆಪಿಯಿಂದ, ಟಿಕೆಟ್ ಕೊಡದಿದ್ದರೇ ಬಿಜೆಪಿಯಿಂದ ರೆಬೆಲ್ ಆಗಿ ಕಣಕ್ಕಿಳಿಯುವ ತೀರ್ಮಾನ ಮಾಡಿದ್ದಾರೆ. ಇದು ಚುನಾವಣ ಕದನ ಕುತೂಹಲವನ್ನು ಕೆರಳಿಸಿದೆ. 

‘READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

 

Share This Article