ಜೆಡಿಎಸ್ ಶ್ರೀಕಾಂತ್ ಇನ್ಮುಂದೆ ಕಾಂಗ್ರೆಸ್ ಶ್ರೀಕಾಂತ್! ದೇವೇಗೌಡರ ಪರಮಾಪ್ತ ಸಿದ್ದರಾಮಯ್ಯ-ಡಿಕೆಶಿ ತೆಕ್ಕೆಗೆ ಸೇರುತ್ತಿರುವುದೇಕೆ?

JDS Srikanth of Shimoga is now joining Congressಶಿವಮೊಗ್ಗದ ಜೆಡಿಎಸ್ ಶ್ರೀಕಾಂತ್ ಇದೀಗ ಕಾಂಗ್ರೆಸ್ ಸೇರುತ್ತಿದ್ದಾರೆ

ಜೆಡಿಎಸ್ ಶ್ರೀಕಾಂತ್ ಇನ್ಮುಂದೆ ಕಾಂಗ್ರೆಸ್ ಶ್ರೀಕಾಂತ್! ದೇವೇಗೌಡರ ಪರಮಾಪ್ತ  ಸಿದ್ದರಾಮಯ್ಯ-ಡಿಕೆಶಿ ತೆಕ್ಕೆಗೆ ಸೇರುತ್ತಿರುವುದೇಕೆ?

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS 

ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಜೆಡಿಎಸ್​  ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಯಾರೇ ಪಕ್ಷ ಬಿಟ್ಟರೂ, ಪಕ್ಷ ನಿಷ್ಟರಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ತೆನೆ ಹೊರುವ ಜವಾಬ್ದಾರಿ ವಹಿಸುತ್ತಿದ್ದ ಎಂ ಶ್ರೀಕಾಂತ್ ಇದೀಗ ಕಾಂಗ್ರೆಸ್​ ಪಕ್ಷ ಸೇರುತ್ತಿದ್ದಾರೆ.  

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ. ಶ್ರೀಕಾಂತ್ ಈ ಸಂಬಂದ ಈಗಾಗಲೇ  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರನ್ನ ಭೇಟಿಯಾಗಿದ್ದರು. ಅದರ ಬೆನ್ನಲ್ಲೆ  ಬೆಂಗಳೂರಿನಲ್ಲಿ    ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.ಹೀಗೆ ಕಾಂಗ್ರೆಸ್​ನ ನಿರ್ಣಾಯಕರನ್ನು ಭೇಟಿಯಾಗಿರುವ ಶ್ರೀಕಾಂತ್ ಪಕ್ಷ ಸೇರ್ಪೆಡೆಯ ದಿನಾಂಕ ಚರ್ಚಿಸಿದ್ದಾರೆ. 

 

ಎರಡು ದಶಕಗಳಿಂದ ಜಿಲ್ಲಾ ಜೆಡಿಎಸ್‌ನ ಮುಖಂಡರಾಗಿದ್ದ ಶ್ರೀಕಾಂತ್  ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಆಪ್ತ ವಲಯದಲ್ಲಿದ್ದವರು. ಇದೀಗ ಅವರು ಕಾಂಗ್ರೆಸ್​ನ ತೆಕ್ಕೆಗೆ ಸೇರಿಕೊಳ್ಳುತ್ತಿರುವುದು ಕಾಂಗ್ರೆಸ್​ಗೆ ಲಾಭ ತಂದುಕೊಡಬಲ್ಲದು ಎಂದೇ ಹೇಳಲಾಗುತ್ತಿದೆ. ಆಂತರಿಕವಾಗಿದ್ದುಕೊಂಡೇ ಕೆಲಸ ನಿರ್ವಹಿಸುವ ಶ್ರೀಕಾಂತ್​ರವರ ತಂತ್ರಗಾರಿಕೆಗಳು ಹಲವು ಸಲ ಯಶಸ್ಸು ತಂದುಕೊಟ್ಟಿವೆ. ಅವುಗಳನ್ನು ಗಮನದಲ್ಲಿರಿಸಿಕೊಂಡೇ ಶ್ರೀಕಾಂತ್​ರವರನ್ನ ಕಾಂಗ್ರೆಸ್ ಬರಮಾಡಿಕೊಳ್ತಿದೆ. 

ಶಿವಮೊಗ್ಗ ಹಲವು ಹೋರಾಟಗಳಿಗೆ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿತ್ತು. ಈ ವೇದಿಕೆಯಲ್ಲಿ ಜೆಡಿಎಸ್ ಪರಿವಾರಕ್ಕೆ ಶಕ್ತಿ ತುಂಬಿದ್ದು ಎಂ.ಶ್ರೀಕಾಂತ್.  ದೇವೇಗೌಡರ ಅಣತಿಯಂತೆ ಶಿವಮೊಗ್ಗಕ್ಕೆ ಬಂದ ಶ್ರೀಕಾಂತ್ ಎರಡು ದಶಕಗಳ ಕಾಲ ಜೆಡಿಎಸ್ ಗೆ ಶಕ್ತಿ ತುಂಬಿದರು. ತಮ್ಮದೇ ವೈಯಕ್ತಿಕ ಹಣವನ್ನು ಖರ್ಚು ಮಾಡಿ ಹಲವು ಸಮಾವೇಶ, ಹೋರಾಟ ಪಾದಯಾತ್ರೆ ಗಳನ್ನು ಮಾಡಿ ಕಾರ್ಯಕರ್ತರನ್ನು ಹುರಿದುಂಬಿಸಿದ್ರು. ಎರಡು ಬಾರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ, ಸೋಲನ್ನು ಕಂಡಿದ್ದಾರಾದರೂ, ಜಿಲ್ಲೆಯಲ್ಲಿ ಪಕ್ಷಕ್ಕೆ ಭದ್ರ ನೆಲೆ ಒದಗಿಸಿದ್ದರು. ಈ ನೆಲೆಯ ನಡುವೆ ತಮ್ಮ ವೈಯಕ್ತಿಕ ರಾಜಕಾರಣದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸಿದ್ದ ಶ್ರೀಕಾಂತ್, ಇದೀಗ ಕಾಂಗ್ರೆಸ್​ನಲ್ಲಿ ಹೊಸ ವಿಶ್ವಾಸ ಹಾಗೂ ಭರವಸೆಗಳನ್ನು ಹೊಂದ್ದಾರೆ. 

2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್  ಮಾಜಿ ಶಾಸಕ  ಕೆ.ಬಿ ಪ್ರಸನ್ನ ಕುಮಾರ್ ಹಾಗು ಬಿಜೆಪಿಯಿಂದ ಮಾಜಿ ಶಾಸಕ ಆಯನೂರು ಮಂಜುನಾಥ್  ರನ್ನ ಪಕ್ಷಕ್ಕೆ ಸೆಳೆದು, ಚುನಾವಣೆ ತ್ರಿಕೋನ ಸ್ಪರ್ಧೆಯ ವೇದಿಕೆಯಾಗುವಂತೆ ನೋಡಿಕೊಂಡಿದ್ದರು.  ಶ್ರೀಕಾಂತ್​ರವರ ಶಕ್ತಿಯನ್ನು ಹತ್ತಿರದಿಂದ ನೋಡಿದ್ದ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಕಳೆದ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಾಗಲೇ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರು. ಆದರೆ ದೇವೇಗೌಡರ ಮೇಲಿನ ಪ್ರೀತಿಯಿಂದ ಶ್ರೀಕಾಂತ್ ಪಕ್ಷ ತೊರೆದಿರಲಿಲ್ಲ.

ಇದೀಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮತ್ತೆ ಪಕ್ಷಕ್ಕೆ ಬರುವಂತೆ ಬುಲಾವ್ ನೀಡಿದ್ದಾರೆ. ಶ್ರೀಕಾಂತ್ ಹೊರಟಿದ್ದಾರೆ. ರೈತ ಸಮಾವೇಶದಿಂದ ಹಿಡಿದು, ಶಿವಮೊಗ್ಗದಲ್ಲಿ ಹೋರಾಟದ ವೇದಿಕೆಗಳಿಗೆ ಶಕ್ತಿ ತುಂಬುತ್ತಿದ್ದ ಜಡಿಎಸ್​  ಶ್ರೀಕಾಂತ್ ಇದೀಗ ಕಾಂಗ್ರೆಸ್  ಶ್ರೀಕಾಂತ್ ಆಗುತ್ತಿದ್ದಾರೆ. ಇವರ ಹಸ್ತ ಪ್ರವೇಶದ ಲಾಭ ಆ ಪಕ್ಷಕ್ಕೆ ಸಿಗಲಿದೆ.  ಇತ್ತ ಜೆಡಿಎಸ್ ಪಕ್ಷದ ನೊಗವನ್ನು ಶಿವಮೊಗ್ಗದಲ್ಲಿ ಎಳೆಯುವ ಜವಾಬ್ದಾರಿ ಯಾರು ಹೊರುತ್ತಾರೆ ಎಂಬುದು ಸದ್ಯದ ಪ್ರಶ್ನೆ 


   

ಇನ್ನಷ್ಟು ಸುದ್ದಿಗಳು