ಕಂತೆ ಕಂತೆ ದುಡ್ಡು, ತೊಲಗಟ್ಲೆ ಬಂಗಾರ ದಾರೀಲೆ ಸಿಕ್ಕಿತು/ ಅದೃಷ್ಟದ ನಿದಿಗೆ ಆಸೆ ಪಡೆದ ಕಾವೇರಿ ಮಾಡಿದ್ದೇನು ಓದಿ/

Malenadu Today

ಆಕೆ ಎಂದಿನಂತೆ ಮನೆಕೆಲಸಕ್ಕೆ ಅಂತಾ ಆರು ಗಂಟೆಗೆ ಹೊರಟು ತನ್ನ ಮನೆ ಬಿಟ್ಟಿದ್ದಳು, ಅಲ್ಲಿದ ತೀರ್ಥಹಳ್ಳಿ ರಸ್ತೆಯಲ್ಲಿ ಹೋಗುವಾಗ ಆಕೆಕೊಂದು  ಬ್ಯಾಗ್​ ಸಿಕ್ಕಿದೆ. ಏಕೋ ಏನೋ ನೋಡುವ ಹಾಗಾಗಿ, ಅದನ್ನ ಎತ್ತಿಕೊಂಡಿದ್ದಾಳೆ, ಅದರೊಳಗೆ ಹಣಕಿದರೆ, ಕಂಡಿದ್ದು, ತೊಲಗಟ್ಲೇ ಬಂಗಾರ ಮತ್ತು ಕಂತೆ ಕಂತೆ ಹಣ,  

ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?

ಬೆಳೆಗ್ಗೆದ್ದು ಯಾರ ಮುಖ ನೋಡಿದ್ನೋ ಕುಬೇರ ನಿದಿ ಸಿಕ್ಕಂತಾಯ್ತು ಅಂತಾ ಇನ್ಯಾರಾದರೂ ಯೋಚಿಸ್ತಿದ್ರು, ಆದರೆ ಹಾಗೆ ಯೋಚಿಸಲಿಲ್ಲ, ಯಾರ್ ಬಿಳಿಸ್ಕೋಂಡು ಹೋದ್ರೋ ಏನೋ? ಏನ್ ವ್ಯಥೆ ಪಡ್ತಿದ್ದಾರೋ ಏನೋ ಎಂದು ಗೊಣಗಿದಳು. ಅಲ್ಲದೆ ಬಂದ್ ಕೇಳಿದ್ರೆ ಕೊಟ್ರಾತು ಅಂದ್ಕೊಂದು ಮನೆ ಕೆಲಸಕ್ಕೆ ಹೋದಳು. 

ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್​ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ

ಸುಮಾರು ಮುಕ್ಕಾಲು ಗಂಟೆಯಲ್ಲಿ ಕೆಲಸ ಮುಗಿಸಿ ಅದೇ ದಾರಿಯಲ್ಲಿ ಆಕೆ ಬರುತ್ತಿದಾಗ, ಅಲ್ಲಿದ್ದವರೆಲ್ಲಾ ಸೇರಿಕೊಂಡು ಬ್ಯಾಗ್​ ಬಿದ್ದ ಸ್ಥಳದಲ್ಲಿ ಏನೋ ಹುಡುಕುತ್ತಿದ್ರು, ಅಕ್ಕಪಕ್ಕದವರನ್ನ ವಿಚಾರಿಸ್ತಿದ್ರು. ಈಕೆಗೆ ಇವರು ಹುಡುಕ್ತಿರೋದು ತನ್ನಲ್ಲಿರುವ ವಸ್ತುವೆಂದು ಗೊತ್ತಾಗಿತ್ತು. ಆದರೆ , ಸೇರಬೇಕಾದವರಿಗೆ ಸೇರಬೇಕಾದ್ದು ಸೇರಬೇಕು ಎಂದುಕೊಂಡು, ಅದರ ಮಾಲೀಕರ ಹುಡುಕಾಟದಲ್ಲಿದ್ದಳು. 

ತುರ್ತು ಸುದ್ದಿ/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದಲ್ಲಿ 15 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಅಷ್ಟೊತ್ತಿಗೆ ಒಂದಿಬ್ಬರು ಬಂದು ಅಮ್ಮ ಇಲ್ಲಿ ಬ್ಯಾಗ್​ ಏನಾದರೂ ಸಿಕ್ತಾ, ಚಿನ್ನ ದುಡ್ಡು ಇತ್ತು ಕಣ್ರಿ ಎಂದು ಕೇಳಿದ್ದಾರೆ, ಅದಕ್ಕೆ ಮಹಿಳೆ ಹೌದು ಸಿಕ್ಕಿದೆ, ಇಲ್ಲಿದೆ ನೋಡಿ ಎಂದು ವಾಪಸ್ ನೀಡಿದ್ಧಾರೆ. ಬಡ ಮಹಿಳೆಯ ಪ್ರಾಮಾಣಿಕತೆಯನ್ನು ಕಂಡು, ಚಿನ್ನ ಹಾಗೂ ಹಣದ ಮಾಲೀಕರು ಧನ್ಯವಾದ ಹೇಳಿದ್ಧಾರೆ. 

ಇದನ್ನು ಓದಿ : ಹಿಂದೂ ಹರ್ಷನ ಮನೆಗೆ ತೆರಳಿ ಸಾಂತ್ವನ ಹೇಳಿದ ಸಾದ್ವಿ ಪ್ರಗ್ಯಾ ಸಿಂಗ್​/ ದತ್ತ ಪೀಠಕ್ಕೂ ಭೇಟಿ!?

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಗಬಡಿ ಬಸ್​ಸ್ಟಾಂಡ್ ಬಳಿ ಇವತ್ತು ಬೆಳಗ್ಗೆ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ರಾಮು ಎಂಬವರ ಪತ್ನಿ ಕಾವೇರಿ ಎಂಬವರು ಮನೆ ಕೆಲಸಕ್ಕೆ ಹೋಗುವಾಗ ಅವರಿಗೆ ಚಿನ್ನ ಮತ್ತು ಒಡವೆ ಇದ್ದ ಬ್ಯಾಗ್ ಸಿಕ್ಕಿದೆ. ಅವರಿಗೆ ಅದು ಸಿಗುವುದಕ್ಕೂ ಮೊದಲು ಕಾರಿನಲ್ಲಿ ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದವರು, ಗಬಡಿ ಬಳಿ ನಿಲ್ಲಿಸಿದ್ದಾರೆ.

ಇದನ್ನು ಸಹ ಓದಿ : ಶಿವಮೊಗ್ಗದಲ್ಲಿ ದಾಖಲಾಯ್ತು ಕೊರೊನಾ ಪಾಸಿಟಿವ್ ಕೇಸ್​

ವಾಮಿಟ್​ ಆಗುತ್ತಿದ್ದರಿಂದ ಕಾರು ನಿಲ್ಲಿಸಿ ರಸ್ತೆ ಬದಿಯಲ್ಲಿ ವಾಂತಿ ಮಾಡಿದ್ಧಾರೆ. ಈ ಸಂದರ್ಭದಲ್ಲಿ ಅವರ ಬಳಿಯಲ್ಲಿದ್ದ ಬ್ಯಾಗ್ ಬಿದ್ದಿದ್ದು, ಗಮನಕ್ಕೆ ಬಂದಿರಲಿಲ್ಲ. ಅಲ್ಲಿಂದ ಸುದಾರಿಸಿಕೊಂಡು ಆ ಕುಟುಂಬ ಶಿವಮೊಗ್ಗದ ಕಡೆಗೆ ಹೊರಟಿದೆ. ಸುಮಾರು ಅರ್ಧ ಗಂಟೆ ಪ್ರಯಾಣದ ನಂತರ ಬ್ಯಾಗ್​ ಇಲ್ಲದಿರುವುದು ಗೊತ್ತಾಗಿ ವಾಪಸ್ ಬಂದಿದ್ಧಾರೆ. 

ಸದ್ಯಕ್ಕೆ ಬ್ಯಾಗ್​ ಕಾವೇರಿ ಕೈಗೆ ಸಿಕ್ಕಿತ್ತು. ಹಾಗಾಗಿ, ಕಾರಿನಲ್ಲಿ ಬಂದವರ ಹಣ , ಒಡವೆ ಸೇಫ್ ಆಗಿ ಅವರ ಕೈಸೇರಿದೆ, ತಮ್ಮ ಕಣ್ತಪ್ಪಿನಿಂದಾದ ಘಟನೆಯಲ್ಲಿ ಪ್ರಾಮಾಣಿಕತೆ ಮೆರೆದ ಕಾವೇರಿಗೆ ಐನೂರು ರೂಪಾಯಿ ಕೊಟ್ಟು ಆ ಕುಟುಂಬ ಮತ್ತೆ ಶಿವಮೊಗ್ಗದ ಕಡೆಗೆ ಪ್ರಯಾಣ ಬೆಳಸಿದೆ.

ವರದಿ: ಮಂಜುನಾಥ್ ಜಿಆರ್

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article