ಹುಲಿ ಉಗುರು | ಮಲೆನಾಡು ಗಢಗಢ |ಕಿಮ್ಮನೆ ರತ್ನಾಕರ್​ & ಆರಗ ಜ್ಞಾನೇಂದ್ರರಿಂದ ಒಂದೇ ಮಾತು!

Kimmane Ratnakar, Araga Gyanendra spoke about tiger claw ಹುಲಿ ಉಗುರು ಸಂಬಂಧ ಕಿಮ್ಮನೆ ರತ್ನಾಕರ್, ಆರಗ ಜ್ಞಾನೇಂದ್ರ ಮಾತನಾಡಿದ್ದಾರೆ

ಹುಲಿ ಉಗುರು | ಮಲೆನಾಡು ಗಢಗಢ  |ಕಿಮ್ಮನೆ ರತ್ನಾಕರ್​ & ಆರಗ ಜ್ಞಾನೇಂದ್ರರಿಂದ ಒಂದೇ ಮಾತು!

KARNATAKA NEWS/ ONLINE / Malenadu today/ Oct 28, 2023 SHIVAMOGGA NEWS

THIRTHAHALLI | ಹುಲಿ ಉಗುರಿನ ನಡುವೆಯೇ ಎದ್ದ ನವಿಲು ಗರಿಯ ವಿಚಾರ ಅಲ್ಲಿಯೇ ತಣ್ಣಗಾಯ್ತು. ಆದರೆ ಹುಲಿ ಉಗುರು ಸಮಾಚಾರ ಮಾತ್ರ ತಣ್ಣಗಾಗುವ ಸಾಧ್ಯತೆ ಕಾಣುತ್ತಿಲ್ಲ. ಮೇಲಾಗಿ ಇದು ಮಲೆನಾಡಲ್ಲಿಯೇ ಒಂಥರಾ ನಡುಕ ಹುಟ್ಟುವಂತೆ ಮಾಡಿದೆ. ಎಂತೆಂಥದ್ದು ಹುಡುಕ್ತಾರೋ ಎಂಬಂತಹ ಒಂಟಿ ಮನೆಗಳ ಮಾತು ಪೇಟೆಯವರಿಗೆ ಕೇಳುತ್ತಿದೆ. 

ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ತೀರ್ಥಹಳ್ಳಿಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದೆ. ಒಂದು ಕಡೆ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಈ ಬಗ್ಗೆ ಖಾರವಾಗಿ ಮಾತನಾಡಿದರೆ, ಇನ್ನೊಂದೆಡೆ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್, ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 

ಏನಿದೆ ಪತ್ರದಲ್ಲಿ 

ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆರವರು

ಗೌರವಾನ್ವಿತ ಅರಣ್ಯ ಜೀವಿ ಪರಿಸ್ಥಿತಿ ಹಾಗೂ ಪರಿಸರ ಸಚಿವರು ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು



ವಿಷಯ : ಅರಣ್ಯ ಕಾಯ್ದೆಗೆ ಸಂಬಂಧಪಟ್ಟಂತ ಹುಲಿ ಉಗುರು ಸಮಸ್ಯೆಗೆ ಸಂಬಂಧಿಸಿದಂತೆ 

ಈ ದೇಶದಲ್ಲಿ ಮತ್ತು ನಮ್ಮ ನಾಡಿನಲ್ಲಿ ಅನೇಕ ಅನುಪಯುಕ್ತ ಕಾಯ್ದೆಗಳು ಜನಮಾನಸಕ್ಕೆ ಬಾರದೇ ಜೀವಂತವಿದೆ, ಅವುಗಳನ್ನು ಪುನರ್ ಪರಿಶೀಲಿಸಿ ವರ್ತಮಾನಕ್ಕೆ ಅಗತ್ಯತೆಗೆ ಪೂರಕ ತಿದ್ದುಪಡಿ ಅಥವಾ ರದ್ದು ಪಡಿಸುವ ಪ್ರಯತ್ನ ನಡೆಯಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.

 "Ignorance of law ISno EXCUSE" (ಕಾನೂನಿನ ಅಜ್ಞಾನ ಕ್ಷಮಾರ್ಹವಲ್ಲ,) ಆದರೆ ಅದಕ್ಕೆ ಪೂರಕ ತಿದ್ದುಪಡಿ ಅಗತ್ಯ  ತಮ್ಮಲ್ಲಿ ನಾನು ವಿನಂತಿಸುವುದೇನೆಂದರೆ, 'ಹುಲಿ ಉಗುರು ಮತ್ತು ಇತರ ಪ್ರಾಣಿಗಳಿಗೆ ಸಂಬಂಧಪಟ್ಟಂತೆ ಕಾನೂನು ಬಾಹಿರವಾಗಿ (ಕಾಯ್ದೆಗೆ ವಿರುದ್ಧವಾಗಿ) ವಸ್ತುಗಳನ್ನು ಸಂಗ್ರಹಿಸಿದ್ದಾರೆ. 

ಅವುಗಳಿಗೆ ಸಂಬಂಧಪಟ್ಟಂತೆ ತಾತ್ಕಾಲಿಕವಾಗಿ ಸಾಗ್ರೀವಾಜ್ಞೆ ಮಾಡಿ, ಸಾರ್ವಜನಿಕರಿಗೆ ಕಾಲಾವಕಾಶ ನೀಡಿ ಸಂಗ್ರಹಿಸಿದ ವಸ್ತುಗಳನ್ನು ಸರ್ಕಾರಕ್ಕೆ ಹಸ್ತಾಂತರ ಮಾಡುವ ಅವಕಾಶ ಮಾಡಿದರೆ, ಸರ್ಕಾರಕ್ಕೂ ಒಳ್ಳೆಯದು ಸಾರ್ವಜನಿಕರಿಗೂ ಒಳ್ಳೆಯದೆ, ಇಲ್ಲದೆ ಇದ್ದರೆ ಆಕ್ರಮವಾಗಿ ಸಂಗ್ರಹಿಸಿದ ವಸ್ತುಗಳು, ಕಾನೂನು ಕಾಯ್ದೆಗೆ ಹೆದರಿ ಕಸದ ಪಾಲಾಗುತ್ತದೆ. ತುರ್ತು ಕ್ರಮ ಅಗತ್ಯವೆಂದು ಭಾವಿಸುತ್ತೇನೆ. 

ಹೀಗೆ ಕಿಮ್ಮನೆ ರತ್ನಾಕರ್​ ಸರ್ಕಾರದ ಸಚಿವರಿಗೆ ಪತ್ರ ಬರೆದಿದ್ದಾರೆ. ಇನ್ನೊಂದೆಡೆ ಅರಣ್ಯ ಇಲಾಖೆಯ ಕ್ರಮದ ಬಗ್ಗೆ ಮಾತನಾಡಿರುವ ಮಾಜಿ ಗೃಹಸಚಿವರು ಅರಣ್ಯ ಇಲಾಖೆ ಇದ್ದಕ್ಕಿದ್ದಂತೆ ಎಚ್ಚರಗೊಂಡಂತಿದೆ ಎಂದು ವ್ಯಂಗ್ಯವಾಡಿದ್ದಾರೆ. 

READ | ಎಲ್ಲಿದೆ ಮೋದಿ ಗ್ಯಾರಂಟಿ!? ಶಿವಮೊಗ್ಗದಲ್ಲಿ ಕಿಮ್ಮನೆ ರತ್ನಾಕರ್​ ನೇತೃತವದಲ್ಲಿ ಕಾಂಗ್ರೆಸ್ ಸತ್ಯಾಗ್ರಹ!

ಏನು ಹೇಳಿದ್ರು ಜ್ಞಾನೇಂದ್ರ!? 

ಅರಣ್ಯ ಇಲಾಖೆ ಇದ್ದಕ್ಕಿದ್ದಂತೆ ಎಚ್ಚರಗೊಂಡು ರಾತ್ರೋರಾತ್ರಿ ಹುಲಿ ಉಗುರಿನ ಸರ ಹಾಕಿದವರನ್ನು, ಜಿಂಕೆ, ಕೋಣದಕೊಂಬುಗಳ ಪುರಾತನ ಪಾರಂಪರಿಕ ಸಂಗ್ರಹ ಹೊಂದಿದವರನ್ನು ಬಂಧಿಸಿ ಜೈಲಿಗೆ ತಳ್ಳುತ್ತಿರುವುದು, ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾನದಂಡ ಮಾಡಿಕೊಂಡು ಬಲಾಡ್ಯರನ್ನು ಬಿಟ್ಟು ಸಾಮಾನ್ಯ ಜನರನ್ನು ಜೈಲಿಗೆ ಕಳುಹಿಸುತ್ತಿರುವುದು ನ್ಯಾಯ ಸಮ್ಮತವಲ್ಲ.

ಈ ಸಂದರ್ಭದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಮೊದಲಿಗೆ ವನ್ಯ ಜೀವಿ ಕಾಯ್ದೆಯ ಕುರಿತಾಗಿ ಜನ ಸಾಮಾನ್ಯರಿಗೆ, ಗ್ರಾಮೀಣ ಭಾಗದ ವಾಸಿಗಳಿಗೆ ಅರಿವು ಮೂಡಿಸಬೇಕು. ಆನಂತರ ನಿಗದಿತ ಕಾಲಾವಕಾಶ ಕೊಟ್ಟು ಜನರ ಬಳಿ ಪರಂಪರಾಗತವಾಗಿ ಬಂದ ವನ್ಯ ಜೀವಿಗಳ ಮೃತ ದೇಹದ ಭಾಗಗಳನ್ನು, ಅಲಂಕಾರಿಕ ಸಾಮಾಗ್ರಿಗಳನ್ನು ಸಂಬಂಧಪಟ್ಟ ಇಲಾಖೆಗೆ ಒಪ್ಪಿಸಲು ಸೂಚಿಸಬೇಕು. 

ರಾಜ್ಯದ ಬಹಳಷ್ಟು ಜನರಿಗೆ ವನ್ಯಜೀವಿ ಕಾಯ್ದೆಗಳ ಅರಿವು ಇಲ್ಲ. ಅರಣ್ಯ ಇಲಾಖೆ ಅಧಿಕಾರಿಗಳೇ ಹುಲಿ ಉಗುರು ಧರಿಸಿದ ಮಾಹಿತಿಗಳು ಹೊರ ಬರುತ್ತಿವೆ. ಹೀಗಿರುವಾಗ ಗ್ರಾಮೀಣ ಜನರಿಗೆ ಮಾಹಿತಿ ಕೊರತೆ ಇದ್ದೇ ಇರುತ್ತದೆ ಎಂದಿದ್ದಾರೆ. 


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!