ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ ವರ್ಗಾವಣೆ ಆಗ್ತಾರಾ? ಏನಿದು ವರದಿ?

Shimoga District Collector Dr. R. Selvamani will be transferred? ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ ವರ್ಗಾವಣೆ ಆಗುತ್ತಾರಾ?

ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ ವರ್ಗಾವಣೆ ಆಗ್ತಾರಾ? ಏನಿದು ವರದಿ?

KARNATAKA NEWS/ ONLINE / Malenadu today/ Oct 28, 2023 SHIVAMOGGA NEWS

SHIVAMOGGA | ಶಿವಮೊಗ್ಗ ಜಿಲ್ಲಾಧಿಕಾರಿ ವರ್ಗಾವಣೆ ಸನ್ನಿಹಿತವಾಗಿದೆಯೆ? ಇನ್ನೊಂದು ವಾರದಲ್ಲಿ ಅವರ ಟ್ರಾನ್ಸಫರ್ ಆಗುತ್ತದೆಯೆ? ಹೀಗೊಂದು ಪ್ರಶ್ನೆ ಮೂಡಲು ಕಾರಣ ಶಿವಮೊಗ್ಗ ಡಿಸಿ ಡಾ.ಆರ್​ ಸೆಲ್ವಮಣಿಯವರು ಇನ್ನೊಂದು ವಾರದಲ್ಲಿ ವರ್ಗಾವಣೆ ಆಗುವ ಸಾಧ್ಯತೆಗಳಿವೆ ಎಂದು ರಾಜ್ಯಮಟ್ಟದ ಸುದ್ದಿಪತ್ರಿಕೆ ವರದಿ ಮಾಡಿದೆ. 

ಈಗಾಗಲೇ ಕಾಂಗ್ರೆಸ್ ವಲಯದಲ್ಲಿ ಜಿಲ್ಲಾಧಿಕಾರಿಯವರ ವರ್ಗಾವಣೆಯ ಕುರಿತಾಗಿ ಮಾತುಗಳು ಕೇಳಿಬರಲಾರಂಭಿಸಿದ್ದವು. ಯಾರು ಬರುತ್ತಾರೆ ? ಎಂಬ ಚರ್ಚೆಯ ವಿಚಾರ ಮಲೆನಾಡು ಟುಡೆಯ ಕಿವಿಗೂ ಬಿದ್ದಿತ್ತು. ಇದರ ಬೆನ್ನಲ್ಲೆ ಇಂದು ಆಡಳಿತ ವಿಚಾರದ ಒಳಸುಳಿಗಳ ಬಗ್ಗೆ ಸುದ್ದಿಯೊಂದು ಪ್ರಸಾರವಾಗಿದೆ. 

READ | ಶಿವಮೊಗ್ಗದಲ್ಲಿಯೇ ಸ್ಥಳೀಯರಿಗೆ ಸಿಗುತ್ತಿಲ್ಲ ಕೆಲಸ! ಮಹತ್ವದ ಸೂಚನೆ ಕೊಟ್ಟ ಜಿಲ್ಲಾಧಿಕಾರಿ ಡಾ.ಆರ್​. ಸೆಲ್ಬಮಣಿ

ವರದಿಯಾಗಿರುವ ಸುದ್ದಿಯ ಪ್ರಕಾರ,  ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮೂಲಗಳು ಈ ಸುದ್ದಿಯನ್ನು ಖಚಿತಪಡಿಸಿದ್ದು ಡಿಸಿ ಡಾ.ಆರ್​ ಸೆಲ್ವಮಣಿ ವರ್ಗಾವಣೆಗೆ ಇನ್ನೊಂದು ವಾರದಲ್ಲಿ ಆದೇಶ ಪ್ರಕಟವಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. 

 

ಈ ಮೊದಲು ಕೋಲಾರ ಡಿಸಿಯಾಗಿದ್ದ ಡಾ. ಆರ್.ಸೆಲ್ವಮಣಿ 2022 ರ ಜನವರಿ 1ರಂದು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅನೇಕ ಯೋಜನೆಗಳಿಗೆ ಚಾಲನೆ ನೀಡಿರುವ ಅವರು ಸರಳತೆಯಿಂದಲೇ ಹೆಚ್ಚು ಸುದ್ದಿಯಾಗಿದ್ದರು. ಪ್ರತಿಯೊಬ್ಬರನ್ನ ಮಾತನಾಡಿಸಿ ಸಮಸ್ಯೆ ಆಲಿಸುತ್ತಿದ್ದ ಅವರು ಗ್ರಾಮ ಭೇಟಿಗಳ ವೇಳೆ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದರು


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!