karnataka election 2023 / ಏಳರಲ್ಲಿ 4 ಕ್ಲಿಯರ್/ 3 ಸಸ್ಪೆನ್ಸ್! ಶಿಕಾರಿಪುರದಲ್ಲಿ ‘ವರುಣಾ’ ಹೊಂದಾಣಿಕೆನಾ? ಶಿವಮೊಗ್ಗ ನಗರ,ಗ್ರಾಮಾಂತರದಲ್ಲೇಗೆ?

Karnataka election 2023 / 4 clear in seven / 3 suspense! Who are the candidates in Shikaripura, Shivamogga Urban and Rural constituencies?

karnataka election 2023 /  ಏಳರಲ್ಲಿ 4 ಕ್ಲಿಯರ್/ 3  ಸಸ್ಪೆನ್ಸ್! ಶಿಕಾರಿಪುರದಲ್ಲಿ  ‘ವರುಣಾ’ ಹೊಂದಾಣಿಕೆನಾ?  ಶಿವಮೊಗ್ಗ ನಗರ,ಗ್ರಾಮಾಂತರದಲ್ಲೇಗೆ?
karnataka election 2023 / ಏಳರಲ್ಲಿ 4 ಕ್ಲಿಯರ್/ 3 ಸಸ್ಪೆನ್ಸ್! ಶಿಕಾರಿಪುರದಲ್ಲಿ ‘ವರುಣಾ’ ಹೊಂದಾಣಿಕೆನಾ? ಶಿವಮೊಗ್ಗ ನಗರ,ಗ್ರಾಮಾಂತರದಲ್ಲೇಗೆ?

ಶಿವಮೊಗ್ಗ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರತೊಡಗಿದೆ. ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ನಿಂದ ಕಿಮ್ಮನೆ ರತ್ನಾಕರ್ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಚಾರಗಳಲು ಗರಿಗೆದರತೊಡಗಿದೆ. ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಿಗೆ ಕಾಂಗ್ರೆಸ್ನಿಂದ ಟಿಕೆಟ್ ಘೋಷಣೆಯಾಗದಿರುವುದು ಆಕಾಂಕ್ಷಿ ಅಭ್ಯರ್ಥಿಗಳಲ್ಲಿ ನಿರಾಸೆ ಮೂಡಿಸಿದೆ. 

ಗಟ್ಟಿಯಾಯ್ತು ತೀರ್ಥಹಳ್ಳಿ ಕ್ಷೇತ್ರ

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಪಕ್ಷದಿಂದ ಯಾವ ಅಭ್ಯರ್ಥಿ ಕಣಕ್ಕಿಳಿಯುತ್ತಾರೆಂಬ ಮತದಾರರ ಕುತೂಹಲಕ್ಕೆ ಪಕ್ಷದ ವರಿಷ್ಠರು ತೆರೆ ಎಳೆದಿದ್ದಾರೆ. ಕಿಮ್ಮನೆ ರತ್ನಾಕರ್ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಟಿಕೆಟ್ ಗಾಗಿ ಕೊನೆವರೆಗೂ ತೀವ್ರ ಲಾಭಿ ನಡೆಸಿದ ಆರ್.ಎಂ ಮಂಜುನಾಥ್ ಗೌಡರು ನಮ್ಮಲ್ಲಿ ಯಾರಿಗೆ ಟಿಕೆಟ್ ನೀಡಿದ್ರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಹೇಳಿದ್ದರು. ಇದೀಗ ಕಿಮ್ಮನೆಗೆ ಸಾರಥಿಯಾಗಿ ಚುನಾವಣೆ ಪ್ರಚಾರ ಮಾಡಿ ಗೆಲ್ಲಿಸುವ ದೊಡ್ಡ ಜವಬ್ದಾರಿ ಅವರ ಹೆಗಲೇರಿದೆ.

ಕಾಂಗ್ರೆಸ್ಗೆ ಸೋಲಾದ್ರೂ..ಗೆಲುವಾದ್ರೂ,,ಅದರ ಲಾಭ ನಷ್ಟದ ಹೊರೆಯನ್ನು ಮಂಜುನಾಥ್ ಗೌಡರೇ ಹೊರಬೇಕಾಗುತ್ತದೆ. ಕಿಮ್ಮನೆ ರತ್ನಾಕರ್ ಗೆದ್ದಿದ್ದೇ ಆದಲ್ಲಿ, ಆರ್ ಎಂ. ಮಂಜುನಾಥ್ ಗೌಡರಿಗೆ ಪಕ್ಷದಲ್ಲಿ ಇಲ್ಲವೇ ಸರ್ಕಾರದಲ್ಲಿ ಉನ್ನತ ಸ್ಥಾನ ನೀಡುವ ಭರವಸೆಯನ್ನು ವರಿಷ್ಠರು ನೀಡಿದ್ದು, ಅದಕ್ಕೆ ಆರ್ ಎಂ ಎಂ ಸಮ್ಮತಿಸಿದ್ದಾರೆ ಎನ್ನಲಾಗಿದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರು ಅಭ್ಯರ್ಥಿ ಎಂಬುದು ಇನ್ನು ಅಂತಿಮವಾಗಿಲ್ಲ, ಪ್ರಬಲ ರೇಸ್ ನಲ್ಲಿರುವ ಆರಗಾ ಜ್ಞಾನೇಂದ್ರರು ಅಭ್ಯರ್ಥಿಯಾಗಿ ಕಣಕ್ಕಿಳಿದರೆ, ಕ್ಷೇತ್ರದಲ್ಲಿ ಚುನಾವಣೆ ರಂಗೇರಲಿದೆ. ಇನ್ನು ಜೆಡಿಎಸ್ ನಿಂದ ರಾಜರಾಮ್ ಯಡೂರು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತಿಂಗಳಿನಿಂದ ಕ್ಷೇತ್ರದಲ್ಲಿ ಸಂಚರಿಸುತ್ತಾ ಯುವಮತದಾರರು ಹಾಗು ಹಿರಿಯ ಸಮಾಜವಾದಿ ಮತದಾರರನ್ನು ಓಲೈಸುವ ತಂತ್ರ ಮಾಡುತ್ತಿದ್ದಾರೆ. ಇಬ್ಬರು ಹಿರಿಯ ರಾಜಕಾರಣಿಗಳ ಎದುರು ಜೆಡಿಎಸ್ ನ ಯುವ ಅಭ್ಯರ್ಥಿಗೆ ಕ್ಷೇತ್ರದ ಮತದಾರರು ಯಾವ ರೀತಿ ಸ್ಪಂಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. 

ಕಾಂಗ್ರೆಸ್ನಿಂದ ಫೈನಲ್ ಆಗದ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಕ್ಷೇತ್ರ 

ಇನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದ ಎರಡನೇ ಪಟ್ಟಿಯಲ್ಲಿ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಕ್ಷೇತ್ರ ಹಾಗು ಶಿಕಾರಿಪುರ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿಲ್ಲ. ಹೀಗಾಗಿ ತುಂಬಾ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ನಡೆಸಿದ ಕಸರತ್ತುಗಳು ಏನಾಗುತ್ತೊ ಎಂಬ ಲೆಕ್ಕಚಾರಗಳು ಗರಿಗೆದರಿವೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದಲೂ ಅಭ್ಯರ್ಥಿ ಘೋಷಣೆಯಾಗಿಲ್ಲ.

ಬಿಜೆಪಿ ಹಾಗು ಜೆಡಿಎಸ್ ನಿಂದಲೂ ಅಭ್ಯರ್ಥಿ ಹೆಸರು ಅಂತಿಮಗೊಂಡಿಲ್ಲ. ಬಿಜೆಪಿಯ ನಡೆ ನೋಡಿಕೊಂಡಿಯೇ ಕಾಂಗ್ರೆಸ್ನಿಂದ ಅಭ್ಯರ್ಥಿಯನ್ನು ಕಣಕ್ಕಳಿಸಲು ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ಟಿಕೆಟ್ ಗಾಗಿ ಅಭ್ಯರ್ಥಿಗಳು ದೆಹಲಿ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅಲ್ಲಿಯೇ ವಾರಗಟ್ಟಲೇ ಬೀಡುಬಿಟ್ಟಿರುವ ಆಕಾಂಕ್ಷಿ ಅಭ್ಯರ್ಥಿಗಳು ತಮ್ಮ ನೆಚ್ಚಿನ ನಾಯಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನ ಮಾಡುತ್ತಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಪುರುಷನ ಪಾಲಾಗುತ್ತೋ ಅಥವಾ ಮಹಿಳೆ ಪಾಲಾಗುತ್ತೋ ಎಂಬುದು ಸದ್ಯದ  ಕುತೂಹಲವಾಗಿದೆ. ಜೆಡಿಎಸ್ ನಿಂದ ಶಾರದ ಪೂರ್ಯ ನಾಯಕ್ ಒಬ್ಬರೇ ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಬಿಜೆಪಿಯಿಂದ ಗ್ರಾಮಾಂತರ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಅಂತಿಮಗೊಂಡಿಲ್ಲ. ಹೀಗಾಗಿ ಗ್ರಾಮಾಂತರ ಕ್ಷೇತ್ರದಲ್ಲಿ ಕದನ ಕುತೂಹಲ ಕೆರಳಿಸಿದೆ.

ಶಿಕಾರಿಪುರದಲ್ಲಿ ಯಾರು ಅಭ್ಯರ್ಥಿ

ಇನ್ನು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಯಾರು ಅಭ್ಯರ್ಥಿ ಎಂಬುದು ಗೌಪ್ಯವಾಗಿಯೇ ಇದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿನಿಧಿಸುವ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಯುತ್ತಾರೋ ಅಥವಾ ಹೊಂದಾಣಿಕೆ ರಾಜಕಾರಣದಲ್ಲಿ ಸೋಲುವ ಅಭ್ಯರ್ಥಿಯನ್ನು ಕಣಕ್ಕಳಿಸಲಾಗುತ್ತೋ ಎಂಬ ರಾಜಕೀಯ ಲೆಕ್ಕಚಾರಗಳು ಕ್ಷೇತ್ರದಲ್ಲಿ ಚರ್ಚೆಯಾಗತೊಡಗಿದೆ. ಇಲ್ಲಿ ಕೂಡ ಪುರುಷ ಅಭ್ಯರ್ಥಿ ಸ್ಪರ್ಧಿಸುತ್ತಾರೋ ಅಥವಾ ಮಹಿಳಾ ಅಭ್ಯರ್ಥಿ ಕಣಕ್ಕಳಿಸಲಾಗುತ್ತದೋ ಗೊತ್ತಿಲ್ಲ.

ರೇಸ್ ನಲ್ಲಿರುವ ನಾಗರಾಜ್ ಗೌಡ, ಗೋಣಿ ಮಹಂತೇಶ್, ಪುಷ್ಪರವರ ಪೈಕಿ ಯಾರಿಗೆ ಟಿಕೆಟ್ ನಿಕ್ಕಿ ಎಂಬುದನ್ನು ವರಿಷ್ಠರೇ ತೀರ್ಮಾನಿಸಲಿದ್ದಾರೆ. ವರುಣಾ ಕ್ಷೇತ್ರದಲ್ಲಿ ಬಿ.ವೈ ವಿಜಯೇಂದ್ರ ಸ್ಪರ್ಧಿಸುವುದಿಲ್ಲ, ಶಿಕಾರಿಪುರದಿಂದಲೇ ಸ್ಪರ್ದೆ ಖಚಿತ ಎಂದಿರುವ ಯಡಿಯೂರಪ್ಪನವರು ಪುತ್ರನ ಚುನಾವಣೆಯನ್ನು ಪ್ರಯೋಗಗಕ್ಕೆ ಒಡ್ಡಲು ತಯಾರಿಲ್ಲ. ಇದು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಅನುಕೂಲ ಮಾಡಿಕೊಡುವ ಒಳ ಒಪ್ಪಂದದ ತಂತ್ರದ ಭಾಗವಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ರಾಜಕೀಯ ಲೆಕ್ಕ ಹಾಗೆಯೇ ಆಗಿದ್ದಲ್ಲಿ ಶಿಕಾರಿಪುರದಲ್ಲಿ ಕಾಂಗ್ರೆಸ್ನಿಂದ ಪ್ರಬಲ ಅಭ್ಯರ್ಥಿ ಕಣಕ್ಕಳಿಸುವುದು ಅನಮಾನ ಎಂದು ಕ್ಷೇತ್ರದಲ್ಲಿ ಗುಸುಗುಸು ಚರ್ಚೆಗಳಾಗುತ್ತಿವೆ.

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 




ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 



 

MALENADUTODAY.COM/ SHIVAMOGGA / KARNATAKA WEB NEWS


HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite KS Eshwarappa, Siddaramaiah, Nomad, Congress accusation, SP Dinesh, K.B. Prasanna Kumar, R.; Prasanna Kumar, Ayanur Manjunath, Shantiya Walk, Dr. Dhananjay Sarji, Shivamogga City Assembly Constituency, Shivamogga City Constituency, Shivamogga Assembly Constituency, Eshwarappa's Campaign, Shivamogga Congress, Siddaramaiah, ಕೆಎಸ್​.ಈಶ್ವರಪ್ಪ, ಸಿದ್ದರಾಮಯ್ಯ, ಅಲೆಮಾರಿ, ಕಾಂಗ್ರೆಸ್ ಆರೋಪ, ಎಸ್​ಪಿ ದಿನೇಶ್, ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್ , ಶಾಂತಿಯ ನಡಿಗೆ, ಡಾ.ಧನಂಜಯ್ ಸರ್ಜಿ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ, ಶಿವಮೊಗ್ಗ ನಗರ ಕ್ಷೇತ್ರ, ಶಿವಮೊಗ್ಗ ವಿಧಾನಸಭೆ, ಈಶ್ವರಪ್ಪನವರ ಪ್ರಚಾರ, ಶಿವಮೊಗ್ಗ ಕಾಂಗ್ರೆಸ್​, ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ, ಶಿಕಾರಿಪುರ ಕ್ಷೇತ್ರ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ, ಶಿವಮೊಗ್ಗ ನಗರ ಕ್ಷೇತ್ರ, ವಿಧಾನಸಭಾ ಚುನಾವಣೆ, ವರುಣಾ ಕ್ಷೇತ್ರ, ಸಿದ್ದರಾಮಯ್ಯ, ವಿಜಯೇಂದ್ರ, BS Yediyurappa, Shikaripura constituency, Shivamogga Rural constituency, Shivamogga city constituency, Assembly elections, Varuna constituency, Siddaramaiah, Vijayendra,