karnataka assembly election 2023 | ತೀರ್ಥಹಳ್ಳಿಯಲ್ಲಿ ಯಾರಿಗೆ ಸಿಗಲಿದೆ ಗೆಲುವಿನ ಹಾರ! ಏನು ಹೇಳುತ್ತೆ ಸಮೀಕ್ಷೆ? ನಿರ್ಣಾಯಕ ಯಾರು?

karnataka assembly election 2023 | Who will win in Theerthahalli? What does the survey say? Who is decisive?

karnataka assembly election 2023 | ತೀರ್ಥಹಳ್ಳಿಯಲ್ಲಿ ಯಾರಿಗೆ ಸಿಗಲಿದೆ ಗೆಲುವಿನ ಹಾರ! ಏನು ಹೇಳುತ್ತೆ ಸಮೀಕ್ಷೆ? ನಿರ್ಣಾಯಕ ಯಾರು?
karnataka assembly election 2023 | ತೀರ್ಥಹಳ್ಳಿಯಲ್ಲಿ ಯಾರಿಗೆ ಸಿಗಲಿದೆ ಗೆಲುವಿನ ಹಾರ! ಏನು ಹೇಳುತ್ತೆ ಸಮೀಕ್ಷೆ? ನಿರ್ಣಾಯಕ ಯಾರು?

ಶಿವಮೊಗ್ಗ ಜಿಲ್ಲೆಯಲ್ಲಿ ಈ ಸರ್ತಿ, ಪ್ರತಿ ವಿಧಾನಸಭಾ ಕ್ಷೇತ್ರಗಳು ಕುತೂಹಲ ಮೂಡಿಸುತ್ತಿದೆ. ಮುಖ್ಯವಾಗಿ  ಅಭ್ಯರ್ಥಿಗಳ ಆಯ್ಕೆಯ ವಿಚಾರವೇ ಸಾಕಷ್ಟು ಗೊಂದಲಗಳನ್ನು ಮೂಡಿಸುತ್ತಿದೆ. ಎಲ್ಲಾ ಪಕ್ಷಗಳಲ್ಲಿಯು ಈ ಸಮಸ್ಯೆಯು ತಲೆದೋರುತ್ತಿರುವುದು, ಸ್ಥಳೀಯ ಕಾರ್ಯಕರ್ತರಿಗೆ ಇದು ಗೊಂದಲ ಮೂಡಿಸುತ್ತಿದೆ. ಇನ್ನೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವಿಚಾರವನ್ನ ಗಮನಿಸುವುದಾದರೆ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಇನ್ನೂ ಸಹ ನಿಕ್ಕಿಯಾಗಿಲ್ಲ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಆರ್​ ಎಂ ಮಂಜುನಾಥ್ ಗೌಡರು ಒಗ್ಗಟ್ಟಾಗಿ ಓಡಾಡುತ್ತಿದ್ಧಾರೆ. ಆದರೆ, ಇವರೇ ಅಭ್ಯರ್ಥಿಯೆಂದು ಘೋಷಣೆಯಾದರೆ, ತೀರ್ಥಹಳ್ಳಿ ಕಾಂಗ್ರೆಸ್​ನಲ್ಲಿ ಇನ್ನಷ್ಟು ಕೆಲಸ ಕಾರ್ಯಗಳು ಸಲೀಸಲಾಗಿ ನಡೆಯಲಿದೆ. 

REAIKNG | ತೀರ್ಥಹಳ್ಳಿಯಲ್ಲಿ ಮಾರ್ಚ್​ನ ಮೊದಲ KFD ಕೇಸ್!

ಈ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಂದು ಹೆಜ್ಜೆ ಮುಂದಿದ್ದು, ತೀರ್ಥಹಳ್ಳಿಯಿಂದ ಆರಗ ಜ್ಞಾನೇಂದ್ರರವರೇ ಮುಂದಿನ ಅಭ್ಯರ್ಥಿಯೆಂದು ಈಗಾಗಲೇ ಹೇಳಲಾಗುತ್ತಿದೆ. ಇನ್ನೂ ಜೆಡಿಎಸ್​ನಿಂಡ ಯಡೂರು ರಾಜಾರಾಮ್​ರವರೇ ಅಭ್ಯರ್ಥಿ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಈಗಾಗಲೇ ಘೋಷಣೆಯನ್ನ ಮಾಡಿದ್ದಾರೆ. ಸದ್ಯ ಈ ಸನ್ನಿವೇಸದಲ್ಲಿ ತೀರ್ಥಹಳ್ಳಿಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ನಿಟ್ಟಿನಲ್ಲಿ lokpoll ಎಂಬ ಸಂಸ್ಥೆ ಇತ್ತೀಚೆಗೆ ನಡೆದ ಸಮೀಕ್ಷೆಯೊಂದರ ಪ್ರಕಾರ, ಸದ್ಯ ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೆಂದ್ರರವರೇ ಮುಂಚೂಣಿಯಲ್ಲಿದ್ದಾರೆ.

READ | Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು ಮಹತ್ವದ್ದು! ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಇಲ್ಲಿದೆ

ಕಲೆಹಾಕಲಾದ  ಸಮೀಕ್ಷಾ ಸ್ಯಾಂಪಲ್​ಗಳ ಅಂಕಿ ಅಂಶದ ಪ್ರಕಾರ, ಚುನಾವಣೆಯಲ್ಲಿ ಆರಗಜ್ಞಾನೇಂದ್ರರವರು ಗೆಲುವು ಸಾದಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  ಅವರ ಗೆಲುವಿನ ಸಾಧ್ಯತೆಯ ಪರ್ಸೆಂಟೇಜ್​  ಒಟ್ಟಾರೆ 35 % . ಹಾಗಂತ ಕಾಂಗ್ರೆಸ್​ ಕೂಡ ಇಲ್ಲಿ ಕಮ್ಮಿಯೇನು ಇಲ್ಲ. ಅಂಕಿಅಂಶಗಳಲ್ಲಿ ಶೇಕಡಾ 33 ಪರ್ಸೆಂಟ್ ಮಂದಿ ಕಾಂಗ್ರೆಸ್​ ಪರ ಒಲವು ತೋರಿದ್ದಾರೆ. ಇನ್ನಷ್ಟು ಮುತುವರ್ಜಿ ಹಾಗೂ ಚುರುಕು  ಪಕ್ಷದಲ್ಲಿ ಕಾಣಿಸಿದರೇ ಬಿಜೆಪಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಮೀಕ್ಷೆ ಹೇಳಿದೆ. ಇನ್ನೂ ಜೆಡಿಎಸ್​ಗೂ ಕ್ಷೇತ್ರದಲ್ಲಿ ಜನರು ಒಲವೂ ತೋರಿದ್ದು, ಸಮೀಕ್ಷೆಯಲ್ಲಿ ಶೇಕಡಾ 28 ರಷ್ಟು ಜನರು ಜೆಡಿಎಸ್​ ಅಭ್ಯರ್ಥಿ ಪರ  ಆಸಕ್ತಿ ವ್ಯಕ್ತಪಡಿಸಿದ್ದಾರೆ. 

ಇನ್ನೂ ಮುಖ್ಯವಾಗಿ ವೋಟುಗಳು ಕೇಂದ್ರಿಕೃತವಾದರೇ ಬಿಜೆಪಿಗೆ ಲಾಭ ಎಂದು ಸಮೀಕ್ಷೆ ಹೇಳುತ್ತಿದೆ. ಇದರ ಜೊತೆಯಲ್ಲಿ ಅಡಿಕೆ ವಿಚಾರದಲ್ಲಿ ಆರಗ ಜ್ಞಾನೇಂದ್ರರ ಮಾತು ಸಹ ಕ್ಷೇತ್ರದಲ್ಲಿ ಮತದಾರರ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದೆ, ಇದರಾಚೆಗೆ ಭ್ರಷ್ಟಾಚಾರ ಮತ್ತು ಪಿಎಸ್​ಐ ಹಗರಣಗಳು ಸಹ ಕ್ಷೇತ್ರದಲ್ಲಿ ಪರೋಕ್ಷವಾಗಿ ಪರಿಣಾಮ ಬೀರಬಹುದು ಎನ್ನುತ್ತಿದೆ ಸಮೀಕ್ಷೆ

ಸೂಚನೆ : ಈ ವರದಿಯು Lokpoll  ಸಂಸ್ಥೆ ಟ್ವಿಟ್ಟರ್​ನಲ್ಲಿ ಪ್ರಕಟಿಸಿದ ವರದಿಯಾಗರುತ್ತಿದಷ್ಟೆ..

READ | ಹಾನಗಲ್​ ಮಾರ್ಗದಲ್ಲಿ ಆಕ್ಸಿಡೆಂಟ್! ಆನವಟ್ಟಿಯಲ್ಲಿ ಟಿಟಿ ಡಿಕ್ಕಿ ಬೈಕ್ ಸವಾರ ಸಾವು! ಯುವಕನ ಧಾರುಣ ಅಂತ್ಯ

READ | ದುಡ್ಡು ಮಾಡುವುದು ಹೇಗೆ ಎಂದು GOOGLE ನಲ್ಲಿ ಸರ್ಚ್​ ಮಾಡಿದಾಗ! ಕಳೆದುಕೊಂಡಿದ್ದು ಎರಡು ಕಾಲು ಲಕ್ಷ! ಚಿಕ್ಕಮಗಳೂರು ಹುಡುಗನಿಗೆ ಶಿವಮೊಗ್ಗದಲ್ಲಿ ದೋಖಾ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga shivamogga,cyber crime, shivamogga today news,shimogga,shivamogga airport video #shivamogga Accidentkyasanur forest disease karnataka assembly election 2023,karnataka election 2023,karnataka assembly election,karnataka elections 2023,karnataka election,karnataka assembly elections,karnataka elections,karnataka assembly elections 2023,karnataka news,karnataka election news,karnataka,karnataka politics,election survey karnataka 2023,karnataka vidhan sabha election 2023,karnataka election 2023 public opinion,2023 election,karnataka latest news,2023 assembly election