Sharada puryanaik/ ಶಿವಮೊಗ್ಗ ಪತ್ರಕರ್ತರ ಪ್ರಶ್ನೆಗಳಿಗೆ ಶಾರದಾ ಪೂರ್ಯಾ ನಾಯ್ಕ್​ ಕೊಟ್ಟ ಉತ್ತರವೇನು ಗೊತ್ತಾ?

KARNATAKA NEWS/ ONLINE / Malenadu today/ SHIVAMOGGA / Apr 21, 2023


 ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆರ್. ​/  ಶಿವಮೊಗ್ಗ/ ಜನಸ್ಪಂದನೆಯೇ ರಾಜ ಕಾರಣ, ಜನರ ಪ್ರೀತಿಯ ಮುಂದೆ ಹಣ ,ಜಾತಿಯ ನಂಟು ಸಾಧ್ಯವಾಗುವುದಿಲ್ಲ. 

ಆದರೆ ಹಣವಂತರ ಮುಂದೆ ಗೆಲ್ಲುವುದು ಕೂಡ ಅಷ್ಟು ಸುಲಭವಲ್ಲ, ನನ್ನ ಕ್ಷೇತ್ರದಲ್ಲಿ ಜಾತಿ ಹಣ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ನನಗಿಲ್ಲ, 

ಜನರ ಪ್ರೀತಿಯಂತೂ ನನ್ನ ಮೇಲಿದೆ. ಅವರ ಪ್ರೀತಿಯೇ ನನ್ನನ್ನು ಈ ಬಾರಿ ಗೆಲ್ಲಿಸುತ್ತದೆ ಎಂದು ಗೆಲುವಿನ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ  (shivamogga rural assembly) ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯಾ ನಾಯ್ಕ,

ಸಂವಾದದಲ್ಲಿ ಸಮಾಲೋಚನೆ

ನಿನ್ನೆ ಶಿವಮೊಗ್ಗ  ಪ್ರೆಸ್ ಟ್ರಸ್ಟ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾರದಾ ಪೂರ್ಯಾನಾಯ್ಕ್​,  ತಮ್ಮ ಕ್ಷೇತ್ರದ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದ್ರು.  ಅಧಿಕಾರಕ್ಕೆ  ಬಂದರೆ ಶರಾವತಿ ಮುಳುಗಡೆ ಸಂತ್ರಸ್ತ ರೈತರ ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ಜೆಡಿಎಸ್​ ಒಂದೇ ದಾರಿ

ರಾಷ್ಟ್ರೀಯ ಪಕ್ಷಗಳು ದಿಕ್ಕು ತಪ್ಪುತ್ತಿರುವ ಇಂತಹ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇಂದು ಹೆಚ್ಚಾಗಿದೆ. ಪ್ರಸ್ತುತ ರಾಷ್ಟ್ರೀಯ ಪಕ್ಷಗಳು ತಮ್ಮ ಜವಾಬ್ದಾರಿಗಳನ್ನು ಮರೆತಿವೆ. 

ಜನರನ್ನು ತಲುಪುವಲ್ಲಿ ವಿಫಲವಾಗಿವೆ. ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಸಂದಿಗ್ಧ ಸಮಯದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳಬೇಕಾಗಿದೆ ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಜನರ ಬಳಿ ಹೋಗಿದ್ದು, ನಮ್ಮ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದರು.

ಬಿಎಸ್​ ಯಡಿಯೂರಪ್ಪರ ಕಾರಣಕ್ಕೆ ಸೋಲು

ಕಳೆದ ಬಾರಿ ತಮ್ಮ ಸೋಲಿಗೆ ಬರಬಹುದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾರದಾ, ಕಳೆದ ಬಾರಿ ಬಿಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿ ಎಂದು ಬಿಜೆಪಿಯಲ್ಲಿ ಬಿಂಬಿಸಲಾಗಿತ್ತು. 

ಹಾಗಾಗಿ ಬಿಜೆಪಿಗೆ ಬಿಎಸ್ ವೈ ಕಾರಣದಿಂದ ಮತ ಹಾಕಿದರು. ಆದರೆ ಈ ಬಾರಿ ಪರಿಸ್ಥಿತಿ ಹಾಗೇನೂ ಇಲ್ಲ ಜನರಿಗೆ ವಾಸ್ತವದ ಅರಿವಾಗಿದೆ. 

ಈ ಬಾರಿ ಆಡಳಿತ ಪಕ್ಷದ ವಿರೋಧದ ಅಲೆಯೂ ನನ್ನ ಸಹಾಯಕ್ಕೆ ಬರಲಿದೆ ನನ್ನ ಗೆಲುವು ಖಚಿತ ಎಂದರು.

ಪೂರ್ಯಾ ನಾಯ್ಕ್​ರ ಆದರ್ಶವೇ ನನ್ನ ಯಶಸ್ಸಿನ ಹಾದಿ

ತಮ್ಮ ಪತಿ ಪೂರ್ಯಾ ನಾಯ್ಕರ ಆದರ್ಶಗಳು ನನ್ನ ಮುಂದಿವೆ.  ಅವರ  ಜನಪ್ರಿಯತೆ ನನ್ನ ರಾಜಕಾರಣಕ್ಕೆ ತಂದಿದೆ.  ಜನರು ನನ್ನನ್ನು ಪ್ರೀತಿಯಿಂದ ಜಿ.ಪಂ ಸದಸ್ಯರಾಗಿ, ಶಾಸಕಿಯನ್ನಾಗಿ ಮಾಡಿದ್ದಾರೆ.

ಈ ಎಲ್ಲಾ ಅವಧಿಗಳಲ್ಲಿ ನನ್ನ ಕ್ಷೇತ್ರದ ಜನತೆಗೆ ನ್ಯಾಯ ಕೊಟ್ಟಿದ್ದೇನೆ ಎಂಬ ಭರವಸೆ ನನ್ನದು. ತಮ್ಮ ಕಾಲದಲ್ಲಿ ಮತ್ತು ಹೆಚ್.ಡಿ .ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆದ ಅಭಿವೃದ್ಧಿ ಗಳನ್ನು ಕ್ಷೇತ್ರದ ಜನತೆ ಮರೆತಿಲ್ಲ.  ಎಂದಿದ್ದಾರೆ 

Malenadutoday.com Social media

Tags:Kannadanewspaper, kannadanewslive, kannadanewsonline, kannadanewschannellist, kannadanewspaperlist, kannadanewsnow, kannadanewshunt, kannadanewspaperonline, kannadanewschannel, kannadanewsanchorslist, kannadanewsapp, kannadanewsarticles, malenadutoday, kannadanewsappdownload, kannadanewsall, kannadanewsshivamogga, kannadanewsnow, malenadutoday, malenadu news, malenadu express, malenadu live, #KannadaNews, #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,   #karnatakaassemblyelection2023,

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು