Accident at Agumbe Ghat | ಆಗುಂಬೆ ಘಾಟಿಯಲ್ಲಿ ಅಪಘಾತ! 12 ನೇ ತಿರುವಿನಲ್ಲಿ ಬ್ರೇಕ್​ ಫೇಲ್​ ಆದ ಖಾಸಗಿ ಬಸ್! ಕೊಪ್ಪದಿಂದ, ಉಡುಪಿಗೆ ಹೋಗ್ತಿದ್ದವರಿಗೆ ಗಾಯ!

Malenadu Today

MALENADUTODAY.COM | SHIVAMOGGA  | #KANNADANEWSWEB

Accident at Agumbe Ghat!  | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಘಾಟಿಯಲ್ಲಿ (agumbe ghat) ನಿನ್ನೆ ಸಂಜೆ ಮರಕ್ಕೆ ಬಸ್​ವೊಂದು ಡಿಕ್ಕಿ ಹೊಡೆದಿತ್ತು. ಖಾಸಗಿ ಬಸ್‌ ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ವಾಹನ ಅಪ್​ಸೆಟ್ ಆಗಿ ಅಲ್ಲಿಯೇ ನಿಂತಿತ್ತು. 

READ |ಟ್ರೆಂಡು, ಫ್ಯಾಶನ್​, ಗತ್ತು , ಗಮತ್ತು ಅಂತಾ ಇಂತಹ ಕೆಲಸ ಮಾಡದಿರಿ! ಕೋರ್ಟ್​ನಿಂದಲೇ ಬೀಳುತ್ತೆ ದಂಡ! ಭದ್ರಾವತಿ ಯುವಕ ಕಟ್ಟಬೇಕಾಯ್ತು 6500 ಪೆನಾಲ್ಟಿ!

ಪ್ರವಾಸಿಗರನ್ನು ಕರೆದೊಯ್ಯುತಿದ್ದ ಖಾಸಗಿ ಬಸ್ ಘಾಟಿಯ 12 ನೇ ತಿರುವಿನಲ್ಲಿ ಆಕ್ಸಿಡೆಂಟ್ ಆಗಿತ್ತು.  ಬ್ರೇಕ್​ ಫೇಲ್ ಆಗಿದ್ದು ತಿಳಿಯುತ್ತಲೇ ಚಾಲಕ ಬಸ್​ನ್ನ ಕಂಟ್ರೋಲ್​ಗೆ ತೆಗೆದುಕೊಳ್ಳಲು ಪ್ರಯತ್ನಿಸಿ, ಮರಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಪರಿಣಾಮ ಘಾಟಿಯಲ್ಲಿ ಇಳಿಜಾರಿಗೆ ಬಸ್ ಬೀಳುವ ಆತಂಕ ತಪ್ಪಿತ್ತು. 

READ |ಮುಳ್ಳು ಹಂದಿ ಶಿಕಾರಿಗೆ ಬಿಲದೊಳಗೆ ಹೋದ ಇಬ್ಬರು, ಅಲ್ಲಿಯೇ ಸಾವು! ಇಷ್ಟಕ್ಕೂ ನಡೆದಿದ್ದೇನು?

ಬಸ್ ನಲ್ಲಿ ಮಹಿಳೆಯರು ಮಕ್ಕಳು ಸೇರಿ 20 ಜನರಿದ್ದರು. ಇನ್ನೂ ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನ ಹೆಬ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ನಲ್ಲಿದ್ದವರೆಲ್ಲಾ ಉಡುಪಿ ಜಿಲ್ಲೆಯ  ಬ್ರಹ್ಮಾವರ ಮೂಲದವರು ಎನ್ನಲಾಗಿದ್ದು, ಕೊಪ್ಪದಲ್ಲಿ ನಡೆದ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡು ವಾಪಸ್ ಹೋಗುತ್ತಿದ್ದರು. 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

Share This Article