MALENADUTODAY.COM | SHIVAMOGGA | #KANNADANEWSWEB
ಬೈಕ್ ಬಣ್ಣ, ಸೈಲೆನ್ಸರ್ ಬದಲಿಸಿದವನಿಗೆ 6500 ರೂ ದಂಡ ವಿಧಿಸಿದ ನ್ಯಾಯಾಲಯ
ಬೈಕ್‌ನ ಬಣ್ಣವನ್ನು ಬದಲಿಸಿದ್ದಷ್ಟೆ ಅಲ್ಲದೆ ಸೈಲೆನ್ಸರ್‌ನ್ನು ಆಲ್ಟರ್ ಮಾಡಿಸಿ, ಕರ್ಕಶ ಶಬ್ದ ಬರುವಂತೆ ಮಾಡಿಸಿದ್ದ ಪ್ರಕರಣ ಸಂಬಂಧ ನ್ಯಾಯಾಲಯ 6500 ರೂ. ದಂಡ ವಿಧಿಸಿದೆ. ಭದ್ರಾವತಿಯ ಯುವಕನಿಗೆ ಕಳೆದ 28-02-2023 ರಂದು ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯದ ನ್ಯಾಯಧೀಶರಾದ ಯತೀಶ್ ರವರು ಆರೋಪಿ ಗಗನ್, 25 ವರ್ಷ, ರೂ 6,500/- ದಂಡ ವಿಧಿಸಿದ್ದಾರೆ.
READ |ಮುಳ್ಳು ಹಂದಿ ಶಿಕಾರಿಗೆ ಬಿಲದೊಳಗೆ ಹೋದ ಇಬ್ಬರು, ಅಲ್ಲಿಯೇ ಸಾವು! ಇಷ್ಟಕ್ಕೂ ನಡೆದಿದ್ದೇನು?
ಭದ್ರಾವತಿಯ ಹೊಸಮನೆ ನಿವಾಸಿ ಗಗನ್ ತನ್ನ ಬೈಕ್ನ್ನ ಆಲ್ಟರ್ ಮಾಡಿಸಿದ್ದ. ಅಲ್ಲದೆ ಆರ್‌ಸಿಯಲ್ಲಿ ನಮೂದಾಗಿದ್ದ ಕಲರ್ ಚೇಂಜ್ ಮಾಡಿದ್ದ ಆತ ಕರ್ಕಶ ಶಬ್ದ ಬರುವಂತ ಸೈಲೆನ್ಸರ್ ಅಳವಡಿಸಿದ್ದ.
ಇದನ್ನ ಜಯಶ್ರೀ ಸರ್ಕಲ್ನಲ್ಲಿ ಗಮನಿಸಿದ ಪೊಲೀಸರು ಈತನನ್ನ ತಡೆದಾಗ, ಈತ ಹೆಲ್ಮೆಟ್ ಸಹ ಹಾಕಿರಲಿಲ್ಲ. ಈ ಸಂಬಂಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೋಟಾರು ವಾಹನ ಕಾಯ್ದೆ ಅಡಿ ಕೇಸ್ ದಾಖಲಿಸಿ, ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ರು. ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು 6500 ರೂ ದಂಡ ವಿಧಿಸಿದ್ದಾರೆ.
ಬೈಕ್ ಸವಾರನು ಹೆಲ್ಮೆಟ್ ಧರಿಸದೆ, ಆರ್.ಸಿ ಯಲ್ಲಿ ನಮೂದಿಸಿದ ಬಣ್ಣವನ್ನು ಬದಲಾಯಿಸಿ ಕಪ್ಪು ಬಣ್ಣವನ್ನು ಮಾಡಿಸಿ& ಹೆಚ್ಚು ಶಬ್ದ ಬರುವಂತಹ ಮಾರ್ಪಡಿಸಿದ ಸೈಲೆನ್ಸರ್ ಅನ್ನು ಅಳವಡಿಸಿದ್ದು ಪಿಎಸ್ಐ ನ್ಯೂ ಟೌನ್ ಪೊಲೀಸ್ ಠಾಣೆ ರವರು ಐ.ಎಂ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ
— SP Shivamogga (@Shivamogga_SP) March 1, 2023
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #
