ಬೀದಿ ದೀಪ ಅಳವಡಿಸುವಾಗ ಕರೆಂಟ್​ ಶಾಕ್! ಓರ್ವ ಸಾವು, ಇನ್ನೊಬ್ಬರಿಗೆ ತೀವ್ರ ಪೆಟ್ಟು!

A person died due to electric shock while installing a street lightಬೀದಿ ದೀಪವನ್ನು ಅಳವಡಿಸುವಾಗ ವಿದ್ಯುತ್ ಶಾಕ್ ಹೊಡೆದು ಓರ್ವ ಸಾವನ್ನಪ್ಪಿದ್ಧಾನೆ

ಬೀದಿ ದೀಪ ಅಳವಡಿಸುವಾಗ ಕರೆಂಟ್​ ಶಾಕ್! ಓರ್ವ ಸಾವು, ಇನ್ನೊಬ್ಬರಿಗೆ ತೀವ್ರ ಪೆಟ್ಟು!

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS  

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು, ಹುಂಚ ಗ್ರಾಮಪಂಚಾಯ್ತಿಯಲ್ಲಿ ಬರುವ ಆನೆಗದ್ದೆಯಲ್ಲಿ ವಿದ್ಯುತ್ ತಂತಿ ತಗುಲಿ ಓರ್ವ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ನಡೆದಿದ್ದೇನು?

ನಿನ್ನೆ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಮೃತರನ್ನು ನಾರಾಯಣ ಎಸ್​ಸಿ  ಎಂದು ಗುರುತಿಸಲಾಗಿದೆ. ಆನೆಗದ್ದೆಯಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬದಲ್ಲಿ ಬೀದಿ ದೀಪ ಅಳವಡಿಸುವ  ಕೆಲಸ ನಡೆಯುತ್ತಿತ್ತು. ಈ ವೇಳೆ ಏಣಿ ಹಾಕಿಕೊಂಡು ಕಂಬದಲ್ಲಿ ದೀಪ ಅಳವಡಿಸುತ್ತಿದ್ದಾಗ ಏಣಿ ಜಾರಿದೆ. ಅಲ್ಲದೆ ವಿದ್ಯುತ್​ ತಂತಿಗೆ ಏಣಿ ತಾಗಿದೆ. ಪರಿಣಾಮ ಕರೆಂಟ್ ಹೊಡೆದು ನಾರಾಯಣರವರು ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಈ ವೇಳೆ ಏಣಿ ಹಿಡಿದುಕೊಂಡಿದ್ದ ಇನ್ನೊಬ್ಬರ ಕೈಗಳು ಸುಟ್ಟುಹೋಗಿವೆ. 
 

ನಾರಾಯಣ್​ರವರು ಒಂದು ವರ್ಷದಿಂದ ನೀರು ಗಂಟಿಯಾಗಿ ಕೆಲಸ ಮಾಡುತ್ತಿದ್ದವರು. ಅಲ್ಲದೆ ಗ್ರಾಮ  ಪಂಚಾಯಿತಿ ಸೂಚನೆಯಂತೆ ಕರೆಂಟ್ ಕಂಬಗಳಿಗೆ ಬೀದಿ ದೀಪ ಅಳವಡಿಸುತ್ತಿದ್ದರು. ಅವರಿಗೆ ಶ್ರೀದರ್​ ಎಂಬವರು ಸಹಾಯಕರಾಗಿದ್ದರು. ಇಬ್ಬರು  ಇಲ್ಲಿನ ಜಂಬಿ ರಸ್ತೆ ಹೊಸನೀರಿನ ಟ್ಯಾಂಕ್ ಹತ್ತಿರವಿರುವ ವಿದ್ಯುತ್ ಕಂಬಕ್ಕೆ 18 ಎತ್ತರದ ಏಣಿ ಬಳಸಿ ವಿದ್ಯುತ್ ದೀಪ ಅಳವಡಿಸಲು ಮುಂದಾಗಿದ್ದಾರೆ. ಈ ವೇಳೆ ಕಬ್ಬಿಣದ ಏಣಿ ತುಸು ಜಾರಿ , ಎಲೆಕ್ಟ್ರಿಕ್ ವಯರ್​ಗೆ ತಾಗಿದೆ. ಪರಿಣಾಮ ವಿದ್ಯುತ್ ಪ್ರವಹಿಸಿ ಎಣಿ ಹತ್ತಿದ್ದ ನಾರಾಯಣ್ ವಿದ್ಯತ್ ಶಾಕ್​ಗೆ ಒಳಗಾಗಿದ್ದಾರೆ.  ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.  


ಇನ್ನಷ್ಟು ಸುದ್ದಿಗಳು