ಮಲ್ಲಾಪುರದಲ್ಲಿ ಕಾಣಿಸಿಕೊಂಡ ಕರಡಿ! ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ! ಎಲ್ಲಿದು ಘಟನೆ?

A bear sighting has been reported in Mallapur, Shimoga districtಶಿವಮೊಗ್ಗ ಜಿಲ್ಲೆ ಮಲ್ಲಾಪುರದಲ್ಲಿ ಕರಡಿಯೊಂದು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ

ಮಲ್ಲಾಪುರದಲ್ಲಿ ಕಾಣಿಸಿಕೊಂಡ ಕರಡಿ! ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ! ಎಲ್ಲಿದು ಘಟನೆ?

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS  ಶಿವಮೊಗ್ಗದಲ್ಲಿ ವನ್ಯಜೀವಿಗಳ ಉಪಟಳ ಹೊಸದೇನಲ್ಲ. ಕಾಡಂಚಿನ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ನಡುವೆ ಸಂಘರ್ಷ ಏರ್ಪಡುತ್ತಲೇ ಇರುತ್ತವೆ. ಆನೆ, ಚಿರತೆ, ಹುಲಿ ಹೀಗೆ ವನ್ಯಜೀವಿಗಳ ಸಮಸ್ಯೆ ಕೇಳಿಬರುತ್ತಿರುವ ಶಿವಮೊಗ್ಗದಲ್ಲಿ ಇದೀಗ ಕರಡಿ ಕಾಟದ ಬಗ್ಗೆ ವರದಿಯಾಗಿದೆ. 

ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಮಲ್ಲಾಪುರ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಕೆಲವರು ಕರಡಿ ದಾಳಿ ನಡೆಸಿದೆ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ಕರಡಿ ಕಾಣಿಸಿಕೊಂಡಿತ್ತು. ಅದನ್ನು ನೋಡಿಯೇ ಜನರು ಭಯ ಬಿದ್ದು ಓಡಿದ್ದರು ಎಂದು ತಿಳಿಸಿದ್ದಾರೆ. 

ಮಲ್ಲಾಪುರದಲ್ಲಿ ಅಂಗಡಿಯೊಂದರ ಮುಂದೆ ಗ್ರಾಮಸ್ಥರು ಕುಳಿತಿದ್ದ ವೇಳೆ ಅಲ್ಲಿ ಕರಡಿ ಕಾಣಿಸಿಕೊಂಡಿದೆ. ತಕ್ಷಣವೇ ಆತಂಕಗೊಂಡ ಜನರು ಅಲ್ಲಿಂದ ಓಡಿದ್ದಾರೆ. ಬಳಿಕ ಕರಡಿ ಅಲ್ಲಿಯೇ ಇದ್ದ ಅಡಿಕೆ ತೋಟವೊಂದರಲ್ಲಿ ಮರೆಯಾಗಿ ಕಾಡು ಸೇರಿದೆ. 

ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳೀಯರ ಅಹವಾಲನ್ನು ಸಿಬ್ಬಂದಿ ಆಲಿಸಿ ಪರಿಶೀಲನೆ ನಡೆಸಿದ್ದಾರೆ.  


ಇನ್ನಷ್ಟು ಸುದ್ದಿಗಳು