ಈಶ್ವರಪ್ಪನವರ ಚುನಾವಣಾ ರಾಜಕಾರಣ ನಿವೃತ್ತಿ ಗೆ ಬಿಜೆಪಿ ಹೈಕಮಾಂಡ್ ನಾ ಸೂಚನೆಯಾ? ಜಗದೀಶ್ ಶೆಟ್ಟರ್​ ನೀಡಿದ ಸುಳಿವೇನು? ಇದು ಬಿಜೆಪಿ ರಾಜಕಾರಣ

Malenadu Today

MALENADUTODAY.COM/ SHIVAMOGGA / KARNATAKA WEB NEWS

ಚುನಾವಣಾ ರಾಜಕಾರಣಕ್ಕೆ ಕೆ.ಎಸ್​.ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಸಂಬಂಧ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಇನ್ನಷ್ಟು ಸಂಘಟನಾ ಶಕ್ತಿಯನ್ನು ತುಂಬಬೇಕು ಎಂದು ಈ ನಿರ್ಣಯವನ್ನು ಕೈಗೊಂಡಿದ್ದೇನೆ ಎಂದಿದ್ದಾರೆ. ಆದರೆ, ಇದು ಕೆ.ಎಸ್​.ಈಶ್ವರಪ್ಪನವರ ತೀರ್ಮಾನ ಅಲ್ಲ ಬಿಜೆಪಿ ಹೈಕಮಾಂಡ್​ನ ಸೂಚನೆ ಎಂಬಂತಹ ವಾದಕ್ಕೆ ಇದೀಗ ಸಾಕಷ್ಟು ಪುಷ್ಟಿ ಸಿಗುತ್ತಿದೆ. 

ಪೂರಕವೆಂಬಂತೆ, ತಮಗೂ ಹೈಕಮಾಂಡ್​ನಿಂದ ಕರೆಬಂದಿದ್ದು ನಿಜ, ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಸೂಚಿಸಿದರು, ಆದರೆ ಹಿರಿಯರಾದ ತಮ್ಮನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ. ಅವರಂತೆಯೆ ಈಶ್ವರಪ್ಪನವರಿಗೂ ಕರೆ ಬಂದಿದೆ ಎಂದು ರಾಷ್ಟ್ರೀಯ ಮಾದ್ಯಮಗಳು ಸುದ್ದಿ ಮಾಡುತ್ತಿವೆ. 

Read / ಆರ್​ಎಂ ಮಂಜುನಾಥ್​ ಗೌಡರ ‘ಕೈ’  ಕಿಮ್ಮನೆ  ಗೆಲುವಿನ ಜವಾಬ್ದಾರಿ! ತೀರ್ಥಹಳ್ಳಿಯಲ್ಲಿ ಹೊಸ ಆಟ ಆರಂಭ/ ಏನಂದ್ರು ನಾಯಕರು?

ಕೇವಲ ಈಶ್ವರಪ್ಪನವರಷ್ಟೆ ಅಲ್ಲದೆ, ಬಿಸಿ ನಾಗೇಶ್ ಹಾಗೂ ವಿಶ್ವೇಶ್ವರ ಹೆಗೆಡೆ ಕಾಗೇರಿ ಸೇರಿದಂತೆ ಹಲವರು ನಾಯಕರಿಗೆ ಹೈಕಮಾಂಡ್ ಕೋಕ್ ನೀಡುತ್ತಿದೆ ಎನ್ನಲಾಗುತ್ತಿದೆ. ಇದೇ ವಿಚಾರ ಸಂಬಂಧ ಬಿಎಸ್​ ಯಡಿಯೂರಪ್ಪನವರ ಜೊತೆಗೂ ನಾನು ಚರ್ಚಿಸಿದ್ದೆ ಎಂದು ಕೆ.ಎಸ್​.ಈಶ್ವರಪ್ಪನವರು ಹೇಳಿದ್ದರು. ಆದರೆ ಹೈಕಮಾಂಡ್​ನವರ ಸೂಚನೆ ಮೇರೆಗೆ ಈ ನಿರ್ಧಾರ ಪ್ರಕಟಿಸಿದರಾ ಎಂಬುದು ಇದೀಗ ಪ್ರಶ್ನೆಯಾಗಿದೆ. 

ಚುನಾವಣೆಯಲ್ಲಿ ಹಿರಿಯ ನಾಯಕರು ಗೆದ್ದರೂ ಸಹ ಮುಂದಿನ ಚುನಾವಣೆಗೆ ಹೊಸ ಅಭ್ಯರ್ಥಿಗಳನ್ನು ಹುಡಕಬೇಕಾಗುತ್ತದೆ. ಹಾಗಾಗಿ ಅಂತಹ ಅಭ್ಯರ್ಥಿಗಳನ್ನು ಈಗಿನಿಂದಲೇ ಕಣಕ್ಕಿಳಿಸುವುದು ಉತ್ತಮ ಎಂಬುದು ಹೈಕಮಾಂಡ್​ನ ಅಭಿಪ್ರಾಯವಾಗಿದೆ. ಅಲ್ಲದೆ, ಈ ನಿಟ್ಟಿನಲ್ಲಿ ಹಿರಿಯ ನಾಯಕರ ವಿರುದ್ಧವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಸಹ ಅಂತಹ ನಾಯಕರು ತಮ್ಮ ವಿರೋಧಿಗಳನ್ನು ಸೋಲಿಸುವ ಪ್ರಯತ್ನ ಮಾಡಬಹುದು. ಹಾಗಾಗಿ ಹಿರಿಯ ನಾಯಕರನ್ನು ಸ್ವಯಂ ನಿವೃತ್ತಿಗೊಳಿಸಿ ಅವರ ಮೂಲಕವೇ ಹೊಸ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಬಿಜೆಪಿ ಹೈಕಮಾಂಡ್ ತಂತ್ರ ರೂಪಿಸಿದೆ ಎನ್ನಲಾಗುತ್ತಿದೆ. 

Read / Shivamogga airport  ನಲ್ಲಿಯು ನೀತಿ ಸಂಹಿತೆ ಉಲ್ಲಂಘನೆ/ ಬಿಜೆಪಿ ಚಿಹ್ನೆ ಮುಚ್ಚಿ ಎಂದು ಚುನಾವಣಾ ಆಯೋಗಕ್ಕೆ ದೂರು

ಇದೇ ತಂತ್ರಗಾರಿಕೆಗೆ ಪೂರಕವಾಗಿ ಹೈಕಮಾಂಡ್ ಒತ್ತಾಯದಿಂದಲೇ ಕೆ.ಎಸ್​.ಈಶ್ವರಪ್ಪನವರು ಚುನಾವಣಾ ರಾಜಕಾರಣದ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಎರಡು ದಿನಗಳ ಹಿಂದೆ ಅಭ್ಯರ್ಥಿಯಾಗಿ ತಮ್ಮ ಹೆಸರು ಕೇಂದ್ರದ ನಾಯಕರನ್ನ ತಲುಪಿದೆ ಎಂದಿದ್ದ ಕೆ.ಎಸ್​.ಈಶ್ವರಪ್ಪನವರು ಎರಡೇ ದಿನದ ಅಂತರದಲ್ಲಿ ನಿವೃತ್ತಿ ಘೋಷಿಸಿರುವುದು ಅವರ ಅಭಿಮಾನಿಗಳಲ್ಲಿಯು ಸಹ ನೋವು ತಂದಿದೆ. 

ಇದನ್ನು ಸಹ ಓದಿ

Read /ಶಿವಮೊಗ್ಗ ಸಿಟಿಯಲ್ಲಿ Made in Bangalore  ಗನ್​ ತೋರಿಸ್ತಾ ಹಾರಾಡ್ತಿದ್ದವ ಈತನ ಕಥೆ ಏನಾಯ್ತು ಗೊತ್ತಾ?

Read /ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್​/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ​ ಟೀಂ/  ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?

Read / ಶಿವಮೊಗ್ಗದ ಚೆಕ್​ಪೋಸ್ಟ್​ಗಳಲ್ಲಿ ಕಾಂಚಾಣ ಸಂಚಾರ/ ಒಂದೇ ದಿನ ಪೊಲೀಸರಿಗೆ  ಸಿಕ್ಕ ಕ್ಯಾಶ್​ ಎಷ್ಟು ಗೊತ್ತಾ? 

Read / ಆರ್​ಎಂ ಮಂಜುನಾಥ್​ ಗೌಡರ ‘ಕೈ’  ಕಿಮ್ಮನೆ  ಗೆಲುವಿನ ಜವಾಬ್ದಾರಿ! ತೀರ್ಥಹಳ್ಳಿಯಲ್ಲಿ ಹೊಸ ಆಟ ಆರಂಭ/ ಏನಂದ್ರು ನಾಯಕರು? 

Read / ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ 

Read / CASE OF HANDI ANNI /  ಚೀಲೂರು ಡಬ್ಬಲ್ ಅಟ್ಯಾಕ್​, ದಾವಣಗೆರೆ ಎಸ್​ಪಿ  ಹೇಳಿದರು ನಡೆದ  ಸತ್ಯ ಘಟನೆ!

Read / Shivamogga airport  ನಲ್ಲಿಯು ನೀತಿ ಸಂಹಿತೆ ಉಲ್ಲಂಘನೆ/ ಬಿಜೆಪಿ ಚಿಹ್ನೆ ಮುಚ್ಚಿ ಎಂದು ಚುನಾವಣಾ ಆಯೋಗಕ್ಕೆ ದೂರು 

Read / ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು? 

Read/ ತಾರಾತಿಗಡಿ ವ್ಯಹಿವಾಟು ನಡೆಯುತ್ತಿದ್ಯಾ?  ಆ್ಯಪ್​ನಲ್ಲಿ ಕಂಪ್ಲೆಂಟ್ ಮಾಡಿ ಸೈಲೆಂಟ್ ಆಗ್ಬಿಡಿ! ಚುನಾವಣಾ ಅಕ್ರಮ ತಡೆಯುವ  ಸಿವಿಜಿಲ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  

Share This Article