ಷೇರು ಮಾರುಕಟ್ಟೆಯಲ್ಲಿ ಗ್ಯಾಪ್‌ ಅಪ್!‌ ಆರ್ಥಿಕ ವರ್ಷದ ಕೊನೆವಾರದಲ್ಲಿ ಹೇಗಿತ್ತು ಆಟ?

Gap up in the stock market! How was the game in the last week of the financial year?

ಷೇರು ಮಾರುಕಟ್ಟೆಯಲ್ಲಿ ಗ್ಯಾಪ್‌ ಅಪ್!‌ ಆರ್ಥಿಕ ವರ್ಷದ ಕೊನೆವಾರದಲ್ಲಿ ಹೇಗಿತ್ತು ಆಟ?
Gap up, stock market

Shivamogga  Mar 28, 2024 ಭಾರತೀಯ ಷೇರು ಮಾರುಕಟ್ಟೆ ಇಡೀ ವಿಶ್ವದ ಗಮನವನ್ನ ಸದಾ ತನ್ನ ನಿಗಾದಲ್ಲಿ ಇಟ್ಟುಕೊಳ್ಳುತ್ತದೆ. ಅದರಲ್ಲಿಯು ಈ ವಾರ ಆರ್ಥಿಕ ಸಾಲಿನ ಕೊನೆವಾರವಾಗಿದ್ದು ಷೇರು ಪೇಟೆಯ ವಹಿವಾಟಿನ ಮೇಲ ಸಾಕಷ್ಟು ಕುತೂಹಲ ಮೂಡಿತ್ತು. ನಿರೀಕ್ಷೆಯಂತೆ ಮಾರುಕಟ್ಟೆಯ ಸೂಚ್ಯಂಕಗಳು ಮೇಲೆ ಹೋಗಿದ್ದರೂ ಸಹ ಕೊನೆಯ ಕ್ಷಣಗಳ ವಹಿವಾಟಿನಲ್ಲಿ ಮತ್ತೆ ಕೆಳಮುಖವಾಗಿ ಚಲಿಸಿತ್ತು. 

ಷೇರು ಮಾರುಕಟ್ಟೆಯಲ್ಲಿ ಇಂಡೆಕ್ಸ್‌ಗಳು ಭಾರತದ ಷೇರು ಮಾರುಕಟ್ಟೆಯು ಯಾವ ದಿಕ್ಕಿನಡೆಗೆ ಸಾಗುತ್ತಿದೆ ಎಂಬುದನ್ನ ತೋರಿಸುವ ರೇಖಾಚಿತ್ರ. ಸನ್ಸೆಕ್ಸ್‌, ನಿ‍ಫ್ಟಿ, ಬ್ಯಾಂಕ್‌ನಿಫ್ಟಿ, ಷೇರು ಮಾರುಕಟ್ಟೆಯ ಮೂರು ಮುಖ್ಯ ಇಂಡೆಕ್ಸ್‌ಗಳು. ಇವತ್ತು ಈ ಮೂರರ ಪೈಕಿ ಬ್ಯಾಂಕ್‌ನಿ‍ಫ್ಟಿ ಬಾಲೆನ್ಸೀವ್‌ ಮೂಡ್‌ನಲ್ಲಿದ್ದರೇ, ಸನ್ಸೆಕ್ಸ್‌ ಹಾಗೂ ನಿಫ್ಟಿ ಈ ಹಿಂದಿನ ಗರಿಷ್ಟ ಅಂಕಿಯ ಗಡಿಯನ್ನು ಹೆಚ್ಚು ಕಮ್ಮಿ ತಲುಪಿ ವಾಪಸ್‌ ಆಗಿವೆ. ಆದಾಗ್ಯು ದಿನನಿತ್ಯದ ವಹಿವಾಟು ಗ್ರೀನ್‌ ಕ್ಯಾಂಡಲ್‌ ಆಗಿದ್ದು ಅಂದರೆ, ಲಾಭದ ಸೂಚನೆಯನ್ನು ನೀಡಿದೆ. 

ಸನ್ಸೆಕ್ಸ್‌ ಗ್ಯಾಪ್‌ ಅಪ್‌ನೊಂದಿಗೆ ಓಪನ್‌ ಆಗಿದ್ದು 1200 ಅಂಕಗಳಷ್ಟು ಏರಿಕೆ ಕಂಡಿತ್ತು. ಆನಂತರ ಏಳುನೂರು ಅಂಕಗಳಷ್ಟು ಕುಸಿತ ಕಂಡಿದೆ. ಬ್ಯಾಂಕ್‌ ನಿಫ್ಟಿ ಸಹ ಆರು ನೂರು ಅಂಕಗಳಷ್ಟು ಏರಿಕೆ ಕಂಡಿತ್ತು. ಮೂರು ಗಂಟೆಯ ಹೊತ್ತಿಗೆ ಸುಮಾರು ಮೂನ್ನೂರು ಅಂಕಗಳಷ್ಟು ಕುಸಿತ ಕಂಡಿದೆ. ಇನ್ನೂ ನಿಫ್ಟಿ ಗ್ಯಾಪ್‌ ಅಪ್‌ನೊಂದಿಗೆ ಓಪನ್‌ ಆಗಿ 390 ಪಾಯಿಂಟ್‌ಗಳ ಏರಿಕೆ ಕಂಡು ಹಿಂದಿನ ಗರಿಷ್ಟ 22500 ದ ಸಮೀಪ ತಲುಪಿ ವಾಪಸ್‌ ಆಗಿದೆ.