ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮಲ್ನಾಡ್ ​ನ ಕಲೆ ಪ್ರದರ್ಶಿಸಲಿರುವ ನಮ್ಮೂರು ವಿದ್ಯಾರ್ಥಿನಿಯರು!

Students from Riponpet to showcase Malnad's art at Republic Day celebrations in Delhi

ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮಲ್ನಾಡ್ ​ನ  ಕಲೆ ಪ್ರದರ್ಶಿಸಲಿರುವ ನಮ್ಮೂರು ವಿದ್ಯಾರ್ಥಿನಿಯರು!
Students from Riponpet to showcase Malnads art at Republic Day celebrations in Delhi

SHIVAMOGGA  |  Jan 25, 2024  |  ದೆಹಲಿಯ ಕೆಂಪುಕೋಟೆಯಲ್ಲಿ ನಾಳೆ ಅಂದರೆ ಜನವರಿ  26 ರಂದು ನಡೆಯಲಿರುವ ಗಣರಾಜ್ಯೋತ್ಸವ ಧ್ವಜರೋಹಣ ಕಾರ್ಯಕ್ರಮದಲ್ಲಿ ನಮ್ಮೂರು ಹುಡುಗಿಯರು ಪಾಲ್ಗೊಳ್ಳಲಿದ್ಧಾರೆ. ಅಲ್ಲದೆ ಮಲ್ನಾಡ್​ನ ಸಂಸ್ಕೃತಿಯನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಲಿದ್ದಾರೆ. ಮಲ್ನಾಡ್​ನ ಜನಪದಕ್ಕೆ ಸಾಕ್ಷಿಯಾಗಿರುವ ಡೊಳ್ಳು ಕುಣಿತವನ್ನು ದೆಹಲಿಯಲ್ಲಿ ಈ ವಿದ್ಯಾರ್ಥಿನಿಯರು ಪ್ರದರ್ಶಿಸಲಿದ್ದಾರೆ. 

ರಿಪ್ಪನ್​ಪೇಟೆಯ ವಿದ್ಯಾರ್ಥಿನಿಯರು

ಹೌದು,  ಕರ್ತವ್ಯ ಪಥದಲ್ಲಿ ನಡೆಯಲಿರುವ  ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ  ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ನಿಯರಾದ ವಿದ್ಯಾ ಆರ್. ರಾಧಿಕಾ, ಲಾವಣ್ಯ,  ಅಂಕಿತರವರು ಪಾಲ್ಗೊಳ್ಳಲಿದ್ದಾರೆ. 

ಮಲ್ನಾಡ್​ನಲ್ಲಿ ಡೊಳ್ಳು ಕುಣಿತದಲ್ಲಿ ವಿಶೇಷ ಆಯಾಮಗಳನ್ನು ಬಳಸಲಾಗುತ್ತದೆ. ಪುರುಷ ಪ್ರಧಾನವಾಗಿದ್ದ ಡೊಳ್ಳು ಕುಣಿತದ ಶೈಲಿಯಲ್ಲಿ ಮಲ್ನಾಡ್​ನ ಹೆಣ್ಣುಮಕ್ಕಳು ಸಹ ತಾವೆನು ಕಡಿಮೆಯಿಲ್ಲ ಎಂಬಂತೆ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಿಪ್ಪನ್​ಪೇಟೆಯ ವಿದ್ಯಾರ್ಥಿನಿಯರಿಗೆ ಟಾಕಪ್ಪ ಬಿ ಕಣ್ಣೂರು ಮತ್ತು ಪುಷ್ಪಲತಾ ಇವರು ಮಾರ್ಗದರ್ಶನ ನೀಡಿದ್ದಾರೆ. 

ಇನ್ನೂ ಸಾಗರ ಯೂತ್ ಫೋರ್ಸ್ ಅಸೋಸಿಯೇಷನ್ ವತಿಯಿಂದ ಇವರು ದೆಹಲಿಗೆ ತೆರಳುತ್ತಿದ್ದ ಅಲ್ಲಿ ಡೊಳ್ಳುಕುಣಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಇನ್ನೂ ವಿದ್ಯಾರ್ಥಿನಿಯರು ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಶಾಸಕರಾದ ಗೋಪಾಲ ಕೃಷ್ಣ ಬೇಳೂರು. ಕಾಲೇಜಿನ ಪ್ರಾಚಾರ್ಯ ಪ್ರೊ.ಚಂದ್ರಶೇಖರ್, ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.