KARNATAKA NEWS/ ONLINE / Malenadu today/ May 25, 2023 SHIVAMOGGA NEWS
ಎಲ್ಲಂದರಲ್ಲಿ ಇನ್ಮುಂದೆ ಕುಡಿಯುವಾಗಿ , ಮದ್ಯದಂಗಡಿಯಲ್ಲಿ ಕೌಂಟರ್ ಸಿಪ್ ಕೂಡ ಹೊಡೆಯಂಗಿಲ್ಲ. ಬಾರಿನಲ್ಲಿಯೇ ಕುಡಿಯಬೇಕು, ಇಲ್ಲವೇ ಒಳಗಡೆ ಕುಡಿಯಬೇಕು ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳ ಜೊತೆಗೆ ಮಾತನಾಡಿದ್ದು , ಜನರ ವಿರೋಧ ಇರುವ ಕಡೆ ಮದ್ಯದಂಗಡಿ ತೆರೆಯಲು ಅವಕಾಶ ಕೊಡಲ್ಲ ಅಂತಾ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ಹೇಳಿದ್ದಾರೆ.
ಸಾಗರದಲ್ಲಿ ಮಾತನಾಡಿದ ಅವರು, ತಾಲ್ಲೂಕು ಅಧಿಕಾರಿಗಳ ಜೊತೆ ಮುಂಗಾರು ಪೂರ್ವ ಕಾರ್ಯಗಳ ಬಗ್ಗೆ ಚರ್ಚಿಸದ್ದೇನೆ ಎಂದರು, ಇದೇ ವೇಳೆ ಗಾಂಜಾ, ಓಸಿಗೆ ಬೇಳೂರು ಅವಕಾಶ ನೀಡೋದಿಲ್ಲ. ಅಂತಹದ್ದು ಕಂಡು ಬಂದರೆ, ಅಧಿಕಾರಿಗಳ ವಿರುದ್ದವೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು,
ಇನ್ನೂ ನಾನೂ ಕೂಡ ಮಂತ್ರಿ ಸ್ಥಾನದ ಆಕಾಂಕ್ಷಿ, ಈ ಬಗ್ಗೆ ಬೇಡಿಕೆಯಿಟ್ಟಿದ್ದೇನೆ. ಮಧು ಬಂಗಾರಪ್ಪರವರು ಸಹ ಆಕಾಂಕ್ಷಿಯಾಗಿದ್ದಾರೆ. ಜಿಲ್ಲೆಯಲ್ಲಿ ಯಾರಿಗಾದರೂ ಒಬ್ಬರಿಗೆ ಕೊಡಲು ಸಾಧ್ಯ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ನೋಡೋಣ ಎಂದರು.
ಮುಂದೆ ಹೋಗ್ತಿದ್ದ ಕಾರಿಗೆ ಹಿಂದಿನಿಂದ ಇನ್ನೊಂದು ಕಾರು ಡಿಕ್ಕಿ! ಹೆದ್ಧಾರಿಯಲ್ಲಿ ದುಬಾರಿ ಕಾರುಗಳು ಜಖಂ!
ತೀರ್ಥಹಳ್ಳಿ/ ಮುಂದೆ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಘಟನೆ ಸಕ್ರೆಬೈಲ್ ಬಳಿಯಲ್ಲಿ ನಡೆದಿದೆ. ಶಿವಮೊಗ್ಗ-ತೀರ್ಥಹಳ್ಳಿ ಹೆದ್ಧಾರಿಯಲ್ಲಿ ನಡೆದ ಘಟನೆಯಲ್ಲಿ, ಯಾರಿಗೂ ಅಪಾಯ ಸಂಭವಿಸಿಲ್ಲ.
ಶಿವಮೊಗ್ಗದಷ್ಟೆ ಸ್ಪಾರ್ಟ್ ಆಗಿದೆ ಆ ದಂಧೆ! ಸಿಟಿಯಲ್ಲಿ ಹೇಗೆ ನಡೆಯುತ್ತಿದೆ ಗೊತ್ತಾ ಹೈಟೆಕ್ ವಹಿವಾಟು!
ಫೋರ್ಡ್ ಇಕೋ ಹಾಗೂ ಕಿಯಾ ಕಾರು ನಡುವೆ ಈ ಅಪಘಾತ ಸಂಭವಿಸಿದ್ದು, ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಆದರೆ ಡಿಕ್ಕಿಯಾದ ರಭಸಕ್ಕೆ ಎರಡು ಕಾರುಗಳ ಒಂದೊಂದು ಬದಿಗೆ ಹೋಗಿ ನಿಂತಿವೆ. ಘಟನೆ ಬೆನ್ನಲ್ಲೆ ಸ್ಥಳೀಯರು ಬಂದು ಕಾರಿನಲ್ಲಿದ್ದವರಿಗೆ ಆರೈಕೆ ಮಾಡಿದ್ಧಾರೆ
