ಕರಡಿ, ಗೂಳಿ ನಂಬಿ 52 ಲಕ್ಷ ಹಾಕಿದ ವ್ಯಕ್ತಿ! ದುಡ್ಡಿನ ಮಾಲೀಕ ನೀನಲ್ಲ ಎಂದು ಅಕೌಂಟ್​ ಕ್ಲೋಸ್ ಮಾಡಿದ ಇಂಟರ್​ನೆಟ್ ​

man in Shivamogga lost Rs 52 lakh after believing in fake stock market advertisements

ಕರಡಿ, ಗೂಳಿ ನಂಬಿ 52 ಲಕ್ಷ ಹಾಕಿದ ವ್ಯಕ್ತಿ! ದುಡ್ಡಿನ ಮಾಲೀಕ ನೀನಲ್ಲ ಎಂದು ಅಕೌಂಟ್​ ಕ್ಲೋಸ್ ಮಾಡಿದ ಇಂಟರ್​ನೆಟ್ ​
stock market advertisements

Shivamogga Mar 5, 2024   ಇಲ್ಲ ಸಲ್ಲದ ಆನ್​​ಲೈನ್ ಕ್ಲಿಕ್ ಮಾಡಿದರೇ ಏನಾಗುತ್ತದೆ ಎಂಬುದಕ್ಕೆ ಪ್ರಕರಣವೊಂದು ಸಾಕ್ಷಿಯಾಗಿದೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ. ಜಸ್ಟ್​ 2 ತಿಂಗಳಲ್ಲಿ 11 ಕ್ಲಿಕ್​, ಕಳೆದುಕೊಂಡಿದ್ದು ಒಂದುವರೆ ಕೋಟಿ! ಶಿವಮೊಗ್ಗದವರೇ ನಿಮ್ಮ ದುಡ್ಡು ಸೇಫ್​ ಆಗಿರಬೇಕಾ!? ಜೆಪಿ ಸ್ಟೋರಿ ಓದಿ!   ಎಂಬ ಸ್ಟೋರಿಯನ್ನು ಮಲೆನಾಡು ಟುಡೆ ಯಲ್ಲಿ ಓದಿರುತ್ತೀರಾ! ಓದದಿದ್ದರೇ ಲಿಂಕ್ ಕ್ಲಿಕ್ ಮಾಡಿ ಓದಿ. ಸದ್ಯ ಇವತ್ತಿನ ವರದಿ ಅದರದ್ದೆ ಒಂದು ಭಾಗವಾಗಿದೆ. 

ಶಿವಮೊಗ್ಗ: ನಗರದ ಉದ್ಯಮಿಯೊಬ್ಬರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಎಂಬ ಜಾಹಿರಾತು ಲಿಂಕ್ ಕ್ಲಿಕ್ ಮಾಡಿ ಬರೋಬ್ಬರಿ 52 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.  

ಸೋಶಿಯಲ್ ಮೀಡಿಯಾ instagram ನಲ್ಲಿ ಬಂದ ಜಾಹೀರಾತು ಗಮನಿಸಿದ ಉದ್ಯಮಿ ಹಣ ಹೂಡಿಕೆ ಮಾಡಿದ್ದರು. ಇನ್‌ ಸ್ಟಾಗ್ರಾಂನಲ್ಲಿದ್ದ ಲಿಂಕ್ಗೆ ಜಾಯಿನ್ ಆಗಿ ವಾಟ್ಸ್ಯಾಪ್​ ಗ್ರೂಪ್​ಗೆ ಜಾಯಿನ್ ಆಗಿದ್ದಾರೆ. ಅಲ್ಲಿನ ಆ್ಯಪ್ ಒಂದನ್ನ ಡೌನ್​ ಲೋಡ್ ಮಾಡಿಕೊಂಡು ಅದಕ್ಕೆ  ಹಂತ ಹಂತವಾಗಿ 52.60 ಲಕ್ಷ ರೂ. ಹೂಡಿಕೆ ಮಾಡಿದ್ದರು. ಆ ಬಳಿಕ ಲಾಭದ ಹಣವನ್ನ ಆ್ಯಪ್​ನಿಂದ ತಮ್ಮ ಅಕೌಂಟ್​ಗೆ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಾಗದೇ ಹೋದಾಗ, ಅದು ಮೋಸದ ಜಾಲವೆಂದು ಗೊತ್ತಾಗಿದೆ. ಸದ್ಯ ಈ ಸಂಬಂಧ ಸಿಇಎನ್ ಠಾಣೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.