ಜಸ್ಟ್​ 2 ತಿಂಗಳಲ್ಲಿ 11 ಕ್ಲಿಕ್​, ಕಳೆದುಕೊಂಡಿದ್ದು ಒಂದುವರೆ ಕೋಟಿ! ಶಿವಮೊಗ್ಗದವರೇ ನಿಮ್ಮ ದುಡ್ಡು ಸೇಫ್​ ಆಗಿರಬೇಕಾ!? ಜೆಪಿ ಸ್ಟೋರಿ ಓದಿ!

Just 11 clicks in 2 months, lost 1.5 crores! Shimoga, should your money be safe? Read JP Story!

ಜಸ್ಟ್​  2 ತಿಂಗಳಲ್ಲಿ 11 ಕ್ಲಿಕ್​, ಕಳೆದುಕೊಂಡಿದ್ದು ಒಂದುವರೆ ಕೋಟಿ!  ಶಿವಮೊಗ್ಗದವರೇ ನಿಮ್ಮ ದುಡ್ಡು ಸೇಫ್​ ಆಗಿರಬೇಕಾ!? ಜೆಪಿ ಸ್ಟೋರಿ ಓದಿ!
JP Story

Shivamogga Mar 4, 2024  ಒಂದು ತಿಂಗಳಲ್ಲಿ ಕೋಟಿಗಟ್ಟಲೇ ಹಣ ಕಳೆದುಕೊಂಡ ಪ್ರಜ್ಞಾವಂತರು,ಹಣದಾಸೆಗೆ  ಮೊಬೈಲ್ ಲಿಂಕ್ ಕ್ಲಿಕ್ ಮಾಡಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳಬೇಡಿ. ಷೇರುಮಾರುಕಟ್ಟೆ  ಹೆಸರಲ್ಲಿ  ಹಣ ಹೂಡಿಕೆ ಮಾಡುವ ನಕಲಿ ಆಪ್ ಗಳ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಳ್ಳಬೇಡಿ.  ಏಕೆಂದರೆ ಕೇವಲ ಈ ವರ್ಷದ ಮೊದಲ ಎರಡು ತಿಂಗಳಿನಲ್ಲಿ  1,67,46,024 ರೂಪಾಯಿ ವಂಚನೆಯಾಗಿದೆ. ಹೇಗೆ ಅನ್ನೋದ್ರ ಬಗ್ಗೆ ಜೆಪಿ ಬರೆಯುತ್ತಾರೆ…. ಓವರು ಟು ಜೆಪಿ

 ಜೆಪಿ ಬರೆಯುತ್ತಾರೆ…

ಹೌದು ಬಾಸ್,,ಇತ್ತಿಚ್ಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಎಲ್ ಎಂಡ್ ಓ ಸ್ಷೇಷನ್ ಗಳಿಗಿಂತ ಅತ್ಯಂತ ಗಿಜಿಗುಡುವ ಠಾಣೆ ಎಂದರೆ ಅದು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಾಗ್ತಿದೆ.  ಪ್ರತಿನಿತ್ಯ ಇಲ್ಲಿ ಹಣ ಕಳೆದುಕೊಂಡವರ ದೊಡ್ಡ ದಂಡೇ ಸಾಲುಗಟ್ಟಿ ನಿಂತಿರುತ್ತದೆ. ಅದು ಸಾವಿರಾರು ರೂಪಾಯಿಯಲ್ಲ..ಹತ್ತು ಲಕ್ಷ ..ಹದಿನೈದು ಲಕ್ಷ ಐವತ್ತು ಲಕ್ಷ ..ಹೀಗೆ ಹಣ ಕಳೆದುಕೊಂಡವರ  ದೊಡ್ಡ ಪಟ್ಟಿಯೇ ಇದೆ.  ಅರೇ ಇವರಿಗೇನು ತಲೆಕೆಟ್ಟಿದ್ಯಾ.. ಇಷ್ತೊಂದು ಪ್ರಮಾಣದಲ್ಲಿ ಹಣ ಕಳೆದುಕೊಂಡಿದ್ದಾರಲ್ಲ ಎಂದು ಅಚ್ಚರಿಯಾಗುತ್ತದೆ.. 

ಇನ್​ ಫ್ಯಾಕ್ಟ್ ವಿದಿಯಲ್ಲ… .ಇದನ್ನು ನಂಬಲೇ ಬೇಕು. ಮೇಲಾಗಿ  ಪ್ರಜ್ಞಾವಂತರೇ ಇಂತಹ ಮೋಸದ ಬಲೆಗೆ ಸಿಲುಕಿ ಹಾಕಿಕೊಂಡಿದ್ದಾರೆ. ವೈದ್ಯರು, ಇಂಜಿನಿಯರ್ ಗಳು, ಕಾಲೇಜು ವಿದ್ಯಾರ್ಥಿಗಳು, ಉದ್ಯಮಿಗಳು, ನಿವೃತ್ತ ಅಧಿಕಾರಿಗಳಂತ ಬುದ್ದಿವಂತ ಜನರು ಹಣದ ಆಸೆಗೆ ಸಿಲುಕಿ ಮೋಸ ಹೋಗಿದ್ದಾರೆ. ಈ ರೀತಿಯ ಹತ್ತು ಹಲವು ಪ್ರಕರಣಗಳು ವರದಿಯಾಗಿದೆ. ಹಾಗಾಗಿ ಫಸ್ಟ್ ಆಫ್​ ಆಲ್​ ಹೇಳೋದು ಏನಂದರೆ, ಮೊಬೈಲ್ ಗಳಲ್ಲಿ ಬರುವ ಮೆಸೆಜ್ ಲಿಂಕ್ ಗಳನ್ನು ಒತ್ತಬೇಡಿ.

ಲಿಂಕ್​ ಕ್ಲಿಕ್ ಮಾಡಬೇಡಿ

ಮೋಸ ಮಾಡುವ ಜಾಲಕ್ಕೆ ಮೊಬೈಲ್ ಗಳೇ ರಾಜಮಾರ್ಗ. ಕೋಟ್ಯಾಂತರ ಜನರಲ್ಲಿ ಒಂದೆರೆಡು ಮಿಕಗಳಾದ್ರೂ ಸಿಕ್ಕೇ ಸಿಗುತ್ತವೆ ಎಂಬುದು ಜಾಲಕ್ಕಿರುವ ನಂಬಿಕೆ. ಆ ನಂಬಿಕೆ ಹುಸಿಯಾಗದಂತೆ ಅವರ ಜಾಲಕ್ಕೆ ಬೀಳುವವರು ಪ್ರಜ್ಞಾವಂತರೇ ಆಗಿರುತ್ತಾರೆ. 

ಆನ್ ಲೈನ್ ಲೋನ್ ನಲ್ಲಿ ಇಲ್ಲಿವರೆಗೂ ಅತಿಹೆಚ್ಚು ಮೋಸ ನಡೆಯುತ್ತಿತ್ತು. ಇದರ ಬೆನ್ನಲ್ಲೆ ಇನ್ನೊಂದು ರೀತಿಯಲ್ಲಿ ನೀವು ಇಷ್ಟು ಹಣ ಗೆದ್ದೀದ್ದೀರಿ, ಗೆದ್ದ .ಹಣ ಪಡೆಯಲು ಈ ಲಿಂಕ್ ಒತ್ತಿ ಎನ್ನುವ ದೈನಂದಿನ ಸಂದೇಶಗಳು ಮೊಬೈಲ್ ಗಳಲ್ಲಿ ಒಂದಾದ ಮೇಲೆ ಒಂದು ಮೆಸೆಜ್ ಬರುತ್ತಿರುತ್ತದೆ. ಈ ಮೆಸೆಜ್ ಗಳನ್ನು ನಿರ್ಲಕ್ಷಿಸುವುದು ಬಹಳ ಒಳ್ಳೆಯದು.

ನೀವು ಕೋಟಿ ಗೆದ್ದಿದ್ದಿರಾ..ನೀವು ಹಣ ಪಡೆಯಬೇಕಾದ್ರೆ ಈ ಲಿಂಕ್ ಕ್ಲಿಂಕ್ ಮಾಡಿ ಎನ್ನುವ ಮೆಸೆಜ್ ಬರುತ್ತದೆ ಎನ್ನುವುದಾದರೆ ಪ್ರಜ್ಞಾವಂತನಾದವನು ಯೋಚಿಸುತ್ತಾನೆ. ಆದರೆ ಇಲ್ಲಿ ಅಂತಹ ಓದಿಕೊಂಡ ಜನರೇ ಮೋಸದ ಬಲೆಯಲ್ಲಿ ಸಿಲುಕುತ್ತಿದ್ದಾರೆ. 

ಇದರ ಜೊತೆಗೆ ಇದೀಗ ಹೊಸದೊಂದು ವಹಿವಾಟು ಆರಂಭವಾಗಿದೆ ಇದೀಗ ಬೋಟ್​ ಹೆಸರಲ್ಲಿ ಷೇರು ಮಾರುಕಟ್ಟೆಯಲ್ಲಿ ನೀವು ಹಣ ಹೂಡಿದರೇ ಸಾಕು, ಅದೇ ನಿಮಗೆ ಲಾಭ ತಂದು ಕೊಡುತ್ತದೆ. ನೀವು ಇಷ್ಟು ಹಣ ಡಿಪಾಸಿಟ್ ಮಾಡಿದ್ರೆ. ನಿಮಗೆ ಇಷ್ಟು. ನೀವು ಇಷ್ಟು ಹಣ ಬರುತ್ತದೆ ಎಂಬಂತಹ ಅನಧಿಕೃತವಲ್ಲದ ಕಂಪನಿಗಳ ಹೆಸರಿನಲ್ಲಿ ಆಮೀಷ ಒಡ್ಡಲಾಗುತ್ತಿದೆ. ಇವುಗಳು ಮೋಸದ ಆರಂಭಿಕ ದಾರಿ. ಈ ರೀತಿಯಲ್ಲಿ ಶಿವಮೊಗ್ಗ ಒಂದರಲ್ಲೇ ಕಳೆದ ಎರಡು ತಿಂಗಳಿನಲ್ಲಿ ಒಂದು ಕೋಟಿಗೂ ಅಧಿಕ ದೋಖಾ ಆಗಿದೆ ಎಂದರೇ ನಂಬುತ್ತೀರಾ? ಬೇರೆ ದಾರಿಯಿಲ್ಲ ನಂಬಲೇಬೇಕು.. ಇದಕ್ಕಿಂತ ಅಚ್ಚರಿಯೆಂದರೆ ಹಣ ಕಳೆದುಕೊಂಡವರು ಇಂಜಿನಿಯರ್, ವೈದ್ಯರು, ಸಾಪ್ಟವೇರ್​ ತಜ್ಞರುಗಳು…! 

ಪೊಲೀಸರು ಉತ್ತರ ಭಾರತಕ್ಕೆ ಹೋಗಬೇಕು.

ಹಣ ಕಳೆದುಕೊಂಡವರು ಕಳೆದುಕೊಂಡ ಹಣದ ವಾಪಸಾತಿಗೆ ಪೊಲೀಸರ ಸಹಾಯಕ್ಕಾಗಿ ದೂರು ನೀಡುತ್ತಾರೆ. ಆದರೆ ಇಂತಹ ಆನ್​ಲೈನ್​ ಕ್ರೈಂನಲ್ಲಿ ಪೊಲೀಸರು ಪಡಬೇಕಾದ ದುಸ್ಸಾಹಸ ಎಷ್ಟಿದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಸಾಮಾನ್ಯವಾಗಿ ಆನ್ ಲೈನ್ ಮೋಸದ ಜಾಲದ ದಿಕ್ಕು ಉತ್ತರ ಭಾರತವೇ ಆಗಿರುತ್ತದೆ. 

ಪ್ರಕರಣಗಳನ್ನು ಭೇದಿಸಿಕೊಂಡು ಹೋಗುವ ಪೊಲೀಸರಿಗೆ  ಬಿಹಾರ ಯುಪಿ, ಜಾರ್ಖಂಡ್ ನಂತಹ ರಾಜ್ಯಗಳ ರಿಮೋಟ್ ವಿಲೇಜ್ ಗಳಿಂದ ದಂಧೆಕೋರರು ಮೋಸ ಮಾಡುವುದು ಗೊತ್ತಾಗುತ್ತದೆ. ಅಲ್ಲಿ ಅಂತಹ ಮೋಸದ ಜಾಲದ ಹಳ್ಳಿಗಳೇ ಇವೆ. ಈ ಬಗ್ಗೆ ಅಂತಾರಾಷ್ಟ್ರೀಯ ಚಾನಲ್ ಒಂದು ಈ ಹಿಂದೆ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು. ಇವತ್ತಿಗೂ ಅದರ ವರದಿ ಯೂಟ್ಯೂಬ್​​ನಲ್ಲಿ ಸಿಗುತ್ತದೆ. ದೊಡ್ಡ ರಾಕೇಟ್ ಜಾಲದಲ್ಲಿ ಕೆಲಸ ಮಾಡುವ ಇಂತಹ ಜಾಗಕ್ಕೆ ಹೋಗುವುದು ಪೊಲೀಸರ ಜೀವಕ್ಕೂ ಅಪಾಯಕಾರಿ. 

ಅಲ್ಲಿಯ ಲೋಕಲ್ ಪೊಲೀಸ್ ಸಹಾಯವಿಲ್ಲದೇ  ರಾಜ್ಯದ ಪೊಲೀಸರು ಮೋಸವೆಸಗಿದ ವ್ಯಕ್ತಿಗಳನ್ನ ಹಿಡಿಯುವುದು ತುಂಬಾನೆ ಕಷ್ಟ. ಆ ಭಾಗದ ಲೋಕಲ್ ಪೊಲೀಸರೇ ಅಂತಹ ಸ್ಥಳಗಳಿಗೆ ಹೋಗಲು ಹೆದರುತ್ತಾರೆ. ವಿತ್ ಎಕೆ 47 ನಂತಹ ವೆಪನ್ ಸಮೇತ ಹೋಗಿ ಆರೋಪಿಯನ್ನು ಕರೆ ತಂದು ಆತನಿಂದ ದುಡ್ಡು ಕಕ್ಕಿಸುವುದು ದುರ್ಲಭದ ಕೆಲಸ.  

ಅದರಲ್ಲಿ ಒಂದು ಪ್ರಕರಣ ಭೇದಿಸಲು ಪೊಲೀಸ್ ಇಲಾಖೆಯಿಂದ ಸಿಗುವ ಭತ್ಯೆಗಳ ಬಗ್ಗೆ ಗೊತ್ತಿರುವಂತದ್ದೆ. ಹೀಗಿದ್ದಾಗ ಜೀವದ ಹಂಗು ತೊರೆದು ಪೊಲೀಸರು ಯಾವುದೋ ಗೊತ್ತು ಗುರಿಯಿಲ್ಲದ ಹಳ್ಳಿಗೆ ಅಲ್ಲಿನ ಪೊಲೀಸರ ಜೊತೆಗೆ ಹೋಗಿ ಆತನನ್ನ ಹಿಡಿದು ಸ್ಥಳೀಯ ನ್ಯಾಯಾಂಗ ವ್ಯವಸ್ಥೆಯ ಮೂಲಕ ಶಿವಮೊಗ್ಗಕ್ಕೆ ಕರೆತರುತ್ತಾರೆ. ಇಷ್ಟೆಲ್ಲಾ ಹರಸಾಹಸ ಮಾಡಿದ ಹೊರತಾಗಿಯು ಕಳೆದುಕೊಂಡವರ ಪೂರ್ತಿ ಹಣ ಸಿಗುತ್ತದೆ ಎಂಬುದು ಅನುಮಾನವೇ. 

ಹಾಗೆ ಒಬ್ಬನನ್ನ ಬಂಧಿಸಿದರೆ, ಮತ್ತೊಬ್ಬ ಮತ್ತೊಂದು ಆನ್​ಲೈನ್​ ಲಿಂಕ್ ಮೂಲಕ ಪ್ರತ್ಯಕ್ಷವಾಗುತ್ತಾನೆ. ಆನ್​ಲೈನ್​ ಕಾಣುವ ಲೋಕದ ಕಟ್ಕಟ್ಟಿನ ಆಟ. ಇಲ್ಲಿ ಕ್ಲಿಕ್​ ಮಾಡಿದರೇ ಮುಗೀತು…ಮುಂದಿನದ್ದು ಗಿಚ್ಚ ಗಿಲಿ…ಗಿಲಿ… ಲೈಫು.. ಹೀಗಾಗಿ ಇದರಿಂದ ಬಚಾವ್ ಆಗೋದಕ್ಕೆ ಇರುವುದು ಒಂದೇ ದಾರಿ ಕ್ಲಿಕ್ ಮಾಡಬೇಡಿ.. ಈ ಬಗ್ಗೆ ಶಿವಮೊಗ್ಗ ಪೊಲೀಸರು ನೀಡಿರುವ ಸಂದೇಶ ನಿಮ್ಮ ಮುಂದೆ ಇಡುತ್ತಿದ್ದೇವೆ.. ಬಾಸ್, ಬ್ರೋ, ಸಿಕ್ಕಿದ್ದನ್ನ ಕ್ಲಿಕ್ ಮಾಡಬೇಡಿ ಎನ್ನಬಹುದಷ್ಟೆ ..ತಿಳದು ಕಳೆದುಕೊಂಡರೇ ,,, ದೇವಸ್ಥಾನದ ಹೋಗಿ ಚಪ್ಪಲಿ ಕಳೆದುಕೊಂಡು ಬಂದಾಗ ಗೃಹಚಾರ ಹೋಯ್ತು ಎಂದುಕೊಳ್ತೀವಲ್ಲ ಹಾಗೆ ಅಂದ್ಕೊಬೇಕು.. 

ಪೊಲೀಸರ ಮನವಿ 

2024 ನೇ ಸಾಲಿನ ದಿ:27/02/2024 ರವರಗೆ ಒಟ್ಟು 11 ಹಣ ವಂಚನೆಯ ಪ್ರಕರಣಗಳು ದಾಖಲಾಗಿರುತ್ತವೆ. ಇವುಗಳಲ್ಲಿ ಒಟ್ಟು ಮೊತ್ತ 1,67,46,024/- ರೂ ವಂಚನೆಯಾಗಿರುತ್ತೆ.  ಇವುಗಳಲ್ಲಿ ಸಾರ್ವಜನಿಕರು ಹೆಚ್ಚಿನದಾಗಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುವುದಾಗಿ ನಂಬಿ ಮೊಸ ಹೋಗಿರುತ್ತಾರೆ, ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳಾದ ಟೆಲಿಗ್ರಾಮ್, ಇನ್ಸಾ ಗ್ರಾಮ್ ಹಾಗೂ ಫೇಸ್‌ಬುಕ್‌ಗಳಲ್ಲಿ ಅನಾಮಾದೇಯ ನಂಬರ್/ ಲಿಂಕ್‌ಗಳಿಂದ ಬಂದಂತಹ ಮೇಸೆಜ್ ಗಳಿಗೆ ಯಾವುದೇ ಪ್ರತ್ಯುತ್ತರ ಮಾಡಬಾರದಾಗಿ ಸೂಚಿಸಿದೆ