SHIVAMOGGA | Jan 20, 2024 | ಸಾಮಾಜಿಕ ಜಾಲತಾಣಗಳಲ್ಲಿ ಅರಳಿದ ಪ್ರೀತಿ ವಾಸ್ತವದಲ್ಲಿ ಸುಳ್ಳಾದರೆ ಸಾವೇ ಗತಿ ಎನ್ನುತ್ತಿವೆ ಮಲೆನಾಡಿನ ಸೌಂದರ್ಯದ ಕುಡಿಗಳು.? ಒಂಟಿ ಮನೆ ಸಂಸ್ಕೃತಿಯ ಬದುಕಿಗೆ ಮೊಬೈಲ್ ಗಳು ಕೊಳ್ಳಿ ಇಡುತ್ತಿದೆಯಾ..? ಜೆಪಿ ಬರೆಯುತ್ತಾರೆ
ಪ್ರೀಯ ಓದುಗರೆ, ಮಲೆನಾಡಿನ ಸುಂದರ ಪರಿಸರದಲ್ಲಿ ಅದೆಷ್ಟು ಪ್ರೇಮಕಾವ್ಯಗಳು ಅರಳಿಲ್ಲ ನೀವೇ ಹೇಳಿ. ಇಲ್ಲಿನ ನಿಸರ್ಗ ನೋಡುತ್ತಲೇ ಕವಿ ಸಾಹಿತಿಗಳಾದವರು ಒಂದೆಡೆಯಾದರೆ ಪ್ರೀತಿ ಪ್ರೇಮಕ್ಕೆ ಹೊಸ ಭಾಷ್ಯ ಬರೆದಿದ್ದು ಮಲೆನಾಡಿನ ಪರಿಸರವಲ್ಲವೇ..ಹೀಗಾಗಿ ನಿಸರ್ಗದಲ್ಲಿ ಪ್ರೀತಿ ಕಥಾ ಹಂದರವಿರುವ ಸಾಕಷ್ಟು ಸಿನಿಮಾಗಳು ಮಲೆನಾಡಿನ ಸೌಂದರ್ಯದಲ್ಲಿ ಮೂಡಿ ಬಂದಿದೆ.
ಪ್ರೀತಿಯೇ ದೇವರು ಅನ್ನೋದಿಂದ್ರಾ ಹಿಡಿದು……….,ಪ್ರೀತಿ ಮಧುರ, ತ್ಯಾಗ ಅಮರ ಅನ್ನೋ ವರೆಗೂ..,..,ಪ್ರೀತಿ ಅಂದ್ರೆ ಹೀಗೆ..ಪ್ರೀತಿ ಅಂದ್ರೆ ಹಾಗೆ…..ಅಂತಾ ವ್ಯಾಖ್ಯಾನ ಬರೆದ ಪ್ರೇಮಿಗಳ ಸಂಖ್ಯೆ ಈ ಭೂಮಿಯಲ್ಲೇನು ಕಮ್ಮಿಯಿಲ್ಲ…ಪ್ರೀತಿ ಬಗ್ಗೆ ಏನೂ ಹೇಳಿದ್ರೂ ಕಡಿಮೆಯೇ .
ಪ್ರೀತಿ ಎರಡು ಮನಸ್ಸುಗಳ ಮದ್ಯೆ ಅರಳಿದರೂ…ಅದನ್ನು ಮೊದಲು ಪ್ರೊಪೋಸ್ ಮಾಡೋನು ಹುಡ್ಗನೇ..,ಐ ಲವ್ ಯು ಅಂತಾ ಹೇಳೋ ಧೈರ್ಯ ಹುಡುಗಿಗಿಂತ ಹುಡಗನಿಗೆ ಜಾಸ್ತಿ…ಆದರೆ ಇತ್ತಿಚ್ಚಿನ ಪ್ರೀತಿ ಪ್ರೇಮಗಳ ಬಗ್ಗೆ ಪದಪುಂಜಗಳ ಗುಜ್ಜವಿಟ್ಟು ವರ್ಣಿಸೋದಕ್ಕೆ ಸಾಧ್ಯವಿಲ್ಲ ಬಿಡಿ..ಯಾಕೆಂದ್ರೆ ಪ್ರೀತಿ ಎಂಬುದು ಕೆಲವರಿಗೆ ತೀಟೆಗೆ ಎಂಬಂತಾಗಿದೆ.
ಪ್ರೇಮಿಗಳು ಖಾಸಗಿ ಬದುಕಿನ ವಿಡಿಯೋಗಳನ್ನೇ ಚಿತ್ರಿಸಿಕೊಂಡು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ಕಾಮಕ್ಕಾಗಿ ಹರಪಪಿಸುವ ಪ್ರೇಮಿ ಆ ವಿಡಿಯೋವನ್ನೇ ಮುಂದಿಟ್ಟುಕೊಂಡು ಪ್ರೇಯಸಿಗೆ ಹಣಕ್ಕಾಗಿ ಇಲ್ಲವೇ ಸ್ನೇಹಿತರೊಂದಿಗೆ ಸಹಕರಿಸಲು ಬ್ಲಾಕ್ ಮೇಲ್ ಕೂಡ ಮಾಡುತ್ತಾನೆ..ಸೋಷಿಯಲ್ ಮಿಡಿಯಾ ಎಂಟ್ರಿಯಾದ ನಂತರ ಪ್ರೀತಿ ಕೂಡ ಆಂಡ್ರಾಯ್ಡ್ ವರ್ಷನ್ ಗೆ ಕನ್ ವರ್ಟ್ ಆಗಿದೆ. ಬೆಳಿಗ್ಗೆ ಪ್ರೀತಿಯಾದ್ರೆ ಸಂಜೆ ಅಷ್ಟೊತ್ತಿಗೆ ಸಿನಿಮಾವೇ ಮುಕ್ತಾಯವಾಗಿರುತ್ತೆ.
ಕಮ್ಯುನಿಕೇಷನ್ ಯುಗದಲ್ಲಿ ಇಂದು ಪ್ರೀತಿ ಮಾಡಬೇಕು. ಆಕೆಗೆ ಪ್ರಪೋಸ್ ಮಾಡಬೇಕೆಂದರೆ, ಕೇವಲ ಮೊಬೈಲ್ ತುದಿ ಬೆರಳಲ್ಲಿ ಒಂದು ಬಟನ್ ಒತ್ತಿದ್ರೂ. ಸಾಕು. ಮನಸ್ಸುಗಳು ಮಾತನಾಡಲು ಆರಂಭಿಸುತ್ತವೆ. ವರ್ಚುವಲ್ ಪ್ರೀತಿ ಕಾಮಗಳ ಗಳು ಆನ್ ಲೈನ್ ನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕಾಗಿ ಡೇಟಿಂಗ್ ಯ್ಯಾಪ್ ಗಳು ಲಭ್ಯವಿದೆ. ಇದು ನಗರ ಪ್ರದೇಶದ ಜನರನ್ನು ಜಾಗೃತ ಗೊಳಿಸಿದ್ರೂ, ಮಲೆನಾಡಿನ ಒಂಟಿ ಮನೆ ಸಂಸ್ಕೃತಿಯ ಮೇಲೆ ಮೊಬೈಲ್ ನೆರಳು ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ.
ಮಲೆನಾಡಿನಲ್ಲಿ ಇತ್ತಿಚ್ಚೆಗೆ ನಡೆದ ಪ್ರೀತಿ ಪ್ರೇಮ ಆತ್ಮಹತ್ಯೆಯಂತ ಘಟನೆಗಳು ಎಚ್ಚರಿಕೆಯ ಕರೆಗಂಟೆಯನ್ನು ಭಾರಿಸಿದೆ. ಮಲೆನಾಡಿನಲ್ಲಿ ಇಂದು ಕಾಲೇಜಿಗೆ ಹೋಗುವ ಪ್ರತಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಕೈಯಲ್ಲೂ ಮೊಬೈಲ್ ಗಳಿವೆ. ಎಲ್ಲರೂ ರಸ್ತೆಯಲ್ಲಿ ಸಾಗುವಾಗ ಮಾತನಾಡುತ್ತಲೇ ಹೋಗುತ್ತಿರುತ್ತಾರೆ.
ಎದುರಿಗೆ ಬಂದವರಿಗೆ ಡಿಕ್ಕಿ ಹೊಡೆದ್ರೂ ಅವರಿಗೆ ಪರಿಜ್ಞಾನ ಎಂಬುದು ಇರೋದಿಲ್ಲ. ಇಷ್ಟೊಂದು ಮಟ್ಟಕ್ಕೆ ಮಕ್ಕಳು ಮೊಬೈಲ್ ಗೆ ಅಡಿಟ್ ಆಗಿದ್ದಾರೆ ಎಂದರೆ ಪೋಷಕರಾಗಲಿ ಶಿಕ್ಷಕರಾಗಲಿ ಯಾರು ತಲೆಕೆಡಿಸಿಕೊಳ್ಳಲು ಹೋಗುತ್ತಿಲ್ಲ.
ಕೊರೊನಾ ಸಂದರ್ಭದಲ್ಲಿ ಆನ್ ಲೈನ್ ಕ್ಲಾಸ್ ಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಆಗ ಸರ್ಕಾರವೇ ಅನುಮತಿ ನೀಡಿತ್ತು. ಆಗ ಆಫ್ ಲೈನ್ ತರಗತಿಗಳು ನಡೆಯುತ್ತಿರುವ ಸಂದರ್ಭದಲ್ಲಿ ಕೂಡ ವಿದ್ಯಾರ್ಥಿಗಳು ಮೊಬೈಲ್ ಗಳನ್ನು ತರಗತಿಗೆ ತರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದವರು ಮೌನಕ್ಕೆ ಜಾರಿದ್ದಾರೆ.
