ಇನ್​ಸ್ಟಾಗ್ರಾಮ್​​ನಲ್ಲಿ ವಿಡಿಯೋ ಹರಿದಾಟ | ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ Suo moto case | ಏನಿದು ಪ್ರಕರಣ!? ಜಾಗ್ರತೆ!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Oct 13, 2023 SHIVAMOGGA NEWS

ರಾಗಿಗುಡ್ಡದಲ್ಲಿ ನಡೆದ ಗಲಾಟೆ ಬಳಿಕ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿರುವ ವಿಡಿಯೋಗಳ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಗಮನ ಹರಿಸಿದೆ. ಚೂರುಪಾರು ಪ್ರಚೋಧನಕಾರಿ ಎನಿಸಿದರು ಸಹ ಈ ಸಂಬಂಧ ಕೇಸ್ ದಾಖಲಾಗುವುದು ಖಚಿತ ಎಂಬುದಕ್ಕೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ (DoddapetePolice Station) ನಲ್ಲಿ ಕೇಸ್​ವೊಂದು ದಾಖಲಾಗಿದೆ. 

ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ವಿಡಿಯೋ ಹರಿಬಿಟ್ಟ ಕಾರಣಕ್ಕೆ ವೆಲ್ಡಿಂಗ್ ಕೆಲಸ ಮಾಡುವ ವಾಸೀಂ ಅಕ್ರಮ್​ ಎಂಬವರ ವಿರುದ್ಧ ಸುಮೊಟೋ ಕೇಸ್ ದಾಖಲಾಗಿದೆ.  

ಹಿಂದೂ ಮಹಾಸಭಾ ಗಣೇಶ ವಿಸರ್ಜನಾ ಮೆರವಣಿಗೆ ಸಂಬಂಧ ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಉಗ್ರ ನರಹಸಿಂಹನ ಪ್ರತಿಕೃತಿಯನ್ನು ಸ್ಥಾಪಿಸಲಾಗಿತ್ತು. ಇದರ ವಿಡಿಯೋವನ್ನು ಬಳಸಿಕೊಂಡು  ಅಮೀರ್ ಅಹಮದ್ ಸರ್ಕಲ್ ನಲ್ಲಿ ಈದ ಮಿಲಾದ್ ಮೆರವಣಿಗೆ ಹಬ್ಬದ ಸಂಬಂಧ ನಿಲ್ಲಿಸಲಾಗಿದ್ದ  ಟಿಪ್ಸುಲ್ತಾನ್ ಭಾವಚಿತ್ರದ ದೃಶ್ಯವನ್ನು ಎಡಿಟ್ ಮಾಡಿ ಆಕ್ಷೇಪಾರ್ಹ ವಿಡಿಯೋ ರಚನೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಷೇರ್ ಮಾಡಲಾಗಿತ್ತು. ಈ ವಿಚಾರ ಸಂಬಂಧ ಇನ್​​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ವಿಡಿಯೋ ಹರಿಬಿಟ್ಟ ಆರೋಪ ಹಿನ್ನೆಲೆಯಲ್ಲಿ   IPC 1860 (U/s-505(2)) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. 


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor