ಭದ್ರಾವತಿಯಲ್ಲಿ ದುಷ್ಕರ್ಮಿಗಳಿಂದ ಬಿಜೆಪಿ ಕಾರ್ಯಕರ್ತನ ಕಾರು ಪೀಸ್​ ಪೀಸ್! Facebook Post ಕಾರಣನಾ?

Malenadu Today

SHIVAMOGGA |  Dec 10, 2023 |  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಲ್ಲಿ ಹಾಡ ಹಗಲೇ ವ್ಯಕ್ತಿಯೊಬ್ಬರ ಕಾರನ್ನ ಜಖಂಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. 

ಬಿಜೆಪಿ ಕಾರ್ಯಕರ್ತನ ಕಾರು ಪೀಸ್ ಪೀಸ್ 

ಭದ್ರಾವತಿ ನ್ಯೂಟೌನ್​ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಬಿಜೆಪಿ ಯುವ‌ ಮೋರ್ಚಾ ಕಾರ್ಯಕರ್ತ ಗೋಕುಲ ಕೃಷ್ಣ ಎಂಬವರ ಕಾರನ್ನು ಜಖಂಗೊಳಿಸಲಾಗಿದೆ. ಮತ್ತು ಈ ದೃಶ್ಯ ಸಿಸಿ ಕ್ಯಾಮರಾದಲ್ಲಿಯು ಸೆರೆಯಾಗಿದೆ. ನಿನ್ನೆ ಒಂಬತ್ತೆ ತಾರೀಖು ಎರಡು ಗಂಟೆ ಸುಮಾರಿ ಮುಖ ಕವರ್ ಮಾಡುವ ಜರ್ಖೀನ್ ಧರಿಸಿ ಬಂದ ಮೂವರು ದುಷ್ಕರ್ಮಿಗಳು ಲಟ್ಟಾ ಬಳಸಿ ಕಾರಿನ ಗಾಜುಗಳನ್ನ ಪುಡಿ ಮಾಡುತ್ತಾರೆ. ಅಲ್ಲದೆ ಹಲವು ಸಲ ಕಾರಿಗೆ ಹೊಡೆದು ಜಖಂಗೊಳಿಸುತ್ತಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ. 

READ : Haratalu halappa / ಮಧು ಬಂಗಾರಪ್ಪ ,ಕುಮಾರ್​ ಬಂಗಾರಪ್ಪ ಒಂದಾಗಲಿ ಎಂದ ಹರತಾಳು ಹಾಲಪ್ಪ

ಫೇಸ್​ಬುಕ್​ ಪೋಸ್ಟ್​

ಇನ್ನೂ ಗೋಕುಲ್​ರವರು ಬರೆದುಕೊಂಡ ಫೇಸ್​ ಬುಕ್ ಪೋಸ್ಟ್​ ನ ಹಿನ್ನೆಲೆಯಲ್ಲಿ ಇಂತಹದ್ದೊಂದು ಕೃತ್ಯ ನಡೆದಿದೆ ಎಂದು ಆರೋಪಿಸಲಾಗುತ್ತಿದೆ. ಗೋಕುಲ್​ರವರು ಭದ್ರಾವತಿಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್​ ದಂಧೆ ಬಗ್ಗೆ ಪ್ರಸ್ತಾಪಿಸಿ ಅದರ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಅವರ ಮಗನ ಬಗ್ಗೆ ಆರೋಪಿಸಿ ಫೇಸ್​ಬುಕ್ ಪೋಸ್ಟ್ ಹಾಕಿದ್ದರು

ಭದ್ರಾವತಿ ನ್ಯೂಟೌನ್​ ಪೊಲೀಸ್ ಸ್ಟೇಷನ್

.ಈ ಪೋಸ್ಟ್ ಹಿನ್ನೆಲೆಯಲ್ಲಿಯೇ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ದೂರಲಾಗುತ್ತಿದೆ. ಈ ಬಗ್ಗೆ  ಭದ್ರಾವತಿ ನ್ಯೂಟೌನ್​ ಪೊಲೀಸ್ ಸ್ಟೇಷನ್​ನ ಪೊಲೀಸರು ತನಿಖೆ ನಡೆಸಿ ಸ್ಪಷ್ಟತೆ ನೀಡಬೇಕಿದೆ. 


 

Share This Article