Haratalu halappa / ಮಧು ಬಂಗಾರಪ್ಪ ,ಕುಮಾರ್​ ಬಂಗಾರಪ್ಪ ಒಂದಾಗಲಿ ಎಂದ ಹರತಾಳು ಹಾಲಪ್ಪ

Malenadu Today

SHIVAMOGGA | SAGARA|  Dec 10, 2023 |    ಸಚಿವ ಮಧು ಬಂಗಾರಪ್ಪ ಹಾಗೂ ಮಾಜಿ ಶಾಸಕ ಕುಮಾರ್ ಬಂಗಾರಪ್ಪರವರು ಒಂದಾಗಬೇಕು ಎಂದು ಬಿಜೆಪಿ ಮಾಜಿ ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ 

ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ

ಇಬ್ಬರು ಸಹ ಒಂದಾಗಬೇಕು ಎಂದು ನಿನ್ನೆ ಸಾಗರದಲ್ಲಿ ಮಾತನಾಡ್ತಾ ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದ್ದಾರೆ. ನಾವೆಲ್ಲರೂ ಬಂಗಾರಪ್ಪನವರ ಗರಡಿಯಲ್ಲಿ ಬೆಳೆದು ಬಂದವರು. ನನಗೂ ಕುಮಾರ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ  ಒಂದಾದರೆ ಸಂತೋಷವಿದೆ ಎಂದಿದ್ದಾರೆ. 

READ : ಶಾಸಕರ ಅನುಪಸ್ಥಿತಿಯ ನಡುವೆ ಬೇಳೂರು ಗೋಪಾಲಕೃಷ್ಣರವರ ಕಚೇರಿಗೆ ಭೇಟಿಕೊಟ್ಟ ಮಧು ಬಂಗಾರಪ್ಪ!

ಹರತಾಳು ಹಾಲಪ್ಪ

ಕಟ್ಟಾ ಬಿಜೆಪಿಗನಾಗಿ ಈ ಮಾತನ್ನು ಹೇಳಲು ಬಯಸುವುದಿಲ್ಲ. ಆದರೆ ಒಬ್ಬ ಈಡಿಗನಾಗಿ ಹಾಗೇನಾದರೂ ಅವರಿಬ್ಬರೂ ಮತ್ತೆ ಒಗ್ಗೂಡಿದರೆ ಖುಷಿಯ ವಿಚಾರ ಎಂದ ಅವರು, ಹೆಚ್.​ಡಿ.ದೇವೇಗೌಡರ ಮಕ್ಕಳು ಅಣ್ಣ-ತಮ್ಮ ಒಟ್ಟಾಗಿ ಒಬ್ಬರಿಗೊಬ್ಬರು ಬೆಂಬಲವಾಗಿ ಇದ್ದಾರೆ. ಅದೇ ರೀತಿ ಯಡಿಯೂರಪ್ಪನವರ ಮಕ್ಕಳೂ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ. ಮಾಜಿ ಸಿಎಂ ಬಂಗಾರಪ್ಪನವರ ಪುತ್ರರೂ ಕೂಡ ಹೊಂದಾಣಿಕೆಯಿಂದ ಇರಬೇಕು ಎಂಬುದೇ ಸಮಾಜದ, ಬಂಧುಬಾಂಧವರ ಇಚ್ಛೆ ಎಂದಿದ್ದಾರೆ.   


 

Share This Article