ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಸಿಕ್ಕ ಅನುಮಾನಸ್ಪದ ಬಾಕ್ಸ್​ ನಲ್ಲಿ ಇದ್ದಿದ್ದು NaCl | FSL ಮೂಲಗಳಲ್ಲಿ ತಿಳಿದಿದ್ದೇನು ಗೊತ್ತಾ?

SHIVAMOGGA |  Dec 10, 2023 |  ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಅನುಮಾನಸ್ಪದ ಬಾಕ್ಸ್​​ನ ಪ್ರಕರಣ ಕೊನೆಗೆ ಉಪ್ಪಿನೊಂದಿಗೆ ಅಂತ್ಯವಾಗಿತ್ತು. ಅಂದು  ಅನುಮಾನಸ್ಪದ ಬಾಕ್ಸ್​ ರೋಚಕ ಟ್ವಿಸ್ಟ್ ಪಡೆದುಕೊಂಡು ಆ ಘಟನೆ ಸಂಬಂಧ ಇಬ್ಬರು ಅರೆಸ್ಟ್ ಆಗಿದ್ದರು. ಅಲ್ಲದೆ ಅವರಿಂದ ವಂಚನೆ ಪ್ರಕರಣದ ಮತ್ತೊಂದು ದಾರಿ ಪೊಲೀಸರಿಗೆ ಗೊತ್ತಾಗಿತ್ತು. 

shivamogga railway station suspect box Malenadu Today Shivamogga

ಆದರೆ  ಮೇಡ್ ಇನ್ ಬಾಂಗ್ಲಾದೇಶ ಎಂದು ಬರೆದಿದ್ದ ಅನುಮಾಸ್ಪದ ಬಾಕ್ಸ್​ ಇಡೀ ರಾತ್ರಿ ಪೊಲೀಸರನ್ನ ಹಾಗೂ ಮಾಧ್ಯಮವರನ್ನ ಹೈರಾಣ ಮಾಡಿತ್ತು. ಮಾಮೂಲಿ ಶೋಧಕಗಳಲ್ಲಿ ಬಾಕ್ಸ್​ನಲ್ಲಿ ಏನಿದೆ ಎಂಬುದು ಗೊತ್ತಾಗದ ಕಾರಣಕ್ಕೆ ಬೆಂಗಳೂರು ನಿಂದ ಬಾಂಬ್ ನಿಷ್ಕ್ರೀಯ ದಳವನ್ನು ಕರೆಸಲಾಗಿತ್ತು. ಆದರೆ ಇನ್ನೇನು ಬಾಕ್ಸ್ ಓಪನ್ ಮಾಡಬೇಕು ಎಂಬಂತೆ ಮಳೆಯು ಸಹ ದೊಪ್ಪಂತ ಸುರಿಯುತ್ತಾ ಕಾರ್ಯಾಚರಣೆಗೆ ಅಡ್ಡಿ ಮಾಡಿತ್ತು. 

Malenadu Today Shivamogga

READ : ಸಿಡಿಯಿತು ಅನುಮಾನಸ್ಪದ ಬಾಕ್ಸ್ ನ​ ಮನಿ ರಹಸ್ಯ!? ಏನದು ಗೊತ್ತಾ? ತುಮಕೂರು-ತಿಪಟೂರು-ಶಿವಮೊಗ್ಗ!?

ಅಂತಿಮವಾಗಿ  ಬೆಂಗಳೂರಿನಿಂದ ಬಾಂಬ್​ ನಿಷ್ಕ್ರೀಯ ದಳ  ಪೆಟ್ಟಿಗೆಯ ಬೀಗವನ್ನ ಸ್ಫೋಟಿಸಿ ಬಾಕ್ಸ್​ನ್ನ ಓಪನ್ ಮಾಡಿತ್ತು. ಬಳಿಕ ಅದರೊಳಗಿರುವ ವಸ್ತುಗಳನ್ನ ಪ್ರಾಯೋಗಿಕ ಪರೀಕ್ಷೆಗೆ ಕಳುಹಿಸಲಾಗಿತ್ತು. ಅಷ್ಟರಲ್ಲಿಯೇ ಪೊಲೀಸರ ಪ್ರಾಥಮಿಕ ಹಂತದ ತನಿಖೆಯಲ್ಲಿ ಬಾಕ್ಸ್​​ನಲ್ಲಿ ಇದ್ದದ್ದು ಟೇಬಲ್ ಸಾಲ್ಟ್ ಎಂಬುದು ಗೊತ್ತಾಗಿತ್ತು.ಇದೀಗ ಎಫ್​ಎಸ್​ಎಲ್​ ಸಹ ತನ್ನ ರಿಪೋರ್ಟ್ ನೀಡಲು ಸಿದ್ಧತೆ ಮಾಡಿಕೊಂಡಿದೆ. ಎಫ್​ಎಸ್​ಎಲ್​ನ ಮೂಲಗಳ ಪ್ರಕಾರ, ಅಂದು ಸಿಕ್ಕ ಅನುಮಾನಸ್ಪದ ಬಾಕ್ಸ್​ನಲ್ಲಿ ಇರುವುದು ಎನ್​ಎಸಿಎಲ್​ ಅರ್ಥಾತ್ ಇಂಗ್ಲಿಷ್​ನಲ್ಲಿ Sodium chloride (NaCl) ಎಂಬುದು ದೃಢ ಪಟ್ಟಿದೆ. 

Malenadu Today Shivamogga

READ : ಅನುಮಾನಸ್ಪದ ಬಾಕ್ಸ್​ ಇದ್ದ ಸ್ಥಳದಲ್ಲಿ ಎರಡು ಸಲ ಸ್ಫೋಟ! ಕಾರಣವೇನು? ನಡೆದಿದ್ದೇನು?

ಸೋಡಿಯಂ ಕ್ಲೋರೈಡ್ NaCl  ಎಂದರೇ ಏನು ಗೊತ್ತಾ?

ಸೋಡಿಯಂ ಕ್ಲೋರೈಡ್ ಅನ್ನು ಸಾಮಾನ್ಯ ಭಾಷೆಯಲ್ಲಿ ಉಪ್ಪು ಅಥವಾ ಟೇಬಲ್ ಸಾಲ್ಟ್ ಎಂದು ಕರೆಯಲಾಗುತ್ತದೆ.  ಸಾಗರ ಮತ್ತು ಸಮುದ್ರದ ನೀರಿನಲ್ಲಿ ಇದು ಸಿಗುತ್ತದೆ. ಇತ್ತೀಚೆಗೆ ಬಾಕ್ಸ್​ನಲ್ಲಿ ಇರುವುದು ಉಪ್ಪು ಎನ್ನುವುದನ್ನ ಎಸ್​ಪಿ ಮಿಥುನ್ ಕುಮಾರ್ ರವರು ಹೇಳಿದರೂ ಸಹ ಆ ಬಗ್ಗೆ ಹಲವು ಸಂಶಯವುಳ್ಳ ಮಾತುಗಳು ಕೇಳಿಬಂದಿದ್ದವು. ಇದೀಗ ಎಫ್​ಎಸ್​ಎಲ್ ಮೂಲಗಳಲ್ಲಿಯೇ ಈ ಬಗ್ಗೆ ಸ್ಪಷ್ಟತೆ ಸಿಕ್ಕಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಕ್ಕೆ ಬರಬೇಕಿದೆ. 


 

Leave a Comment