ಶಾಸಕರ ಅನುಪಸ್ಥಿತಿಯ ನಡುವೆ ಬೇಳೂರು ಗೋಪಾಲಕೃಷ್ಣರವರ ಕಚೇರಿಗೆ ಭೇಟಿಕೊಟ್ಟ ಮಧು ಬಂಗಾರಪ್ಪ!

SHIVAMOGGA | SAKREBAILU ELEPHANT CAMP  Dec 2, 2023 |   ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ರವರ ನಡುವೆ ಅಸಮಾಧಾನ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಪೂರಕವೆಂಬಂತೆ ನಿನ್ನೆ ಸಾಗರ ಹಾಗೂ ಹೊಸನಗರದಲ್ಲಿ  ಸಚಿವರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಪಾಲ್ಗೊಂಡಿರಲಿಲ್ಲ. 

ಇದರ ನಡುವೆ ಮಧು ಬಂಗಾರಪ್ಪರವರ ನಡೆಯೊಂದು ಕುತೂಹಲ ಮೂಡಿಸಿದೆ. ನಿನ್ನೆ ಸಾಗರ ತಾಲ್ಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವರು, ತಮ್ಮ ಓಡಾಟದ ನಡುವೆ ಹೊಸನಗರ ತಾಲ್ಲೂಕಿನಲ್ಲಿರುವ ಬೇಳೂರು ಗೋಪಾಲಕೃಷ್ಣರವರ ಶಾಸಕರ ಕಚೇರಿಗೆ ಭೇಟಿ ನೀಡಿದ್ದರು.  

READ : ಸಕ್ರೆಬೈಲ್ ಆನೆ ಬಿಡಾರದಲ್ಲಿ ಮತ್ತೆ ಯಡವಟ್ಟು! ಮದುವೆ ಫೋಟೋ ಶೂಟ್​ ವೇಳೆ ಆನೆಯಿಂದ ಕೆಳಕ್ಕೆ ಬಿದ್ದ ಮಾವುತ! ವಿಡಿಯೋ ಹೇಳಿದ ಸತ್ಯ! JP ಸ್ಟೋರಿ

ಈ ವೇಳೆ ಅಲ್ಲಿ ಬೇಳೂರು ಗೋಪಾಲಕೃಷ್ಣರವರು ಉಪಸ್ಥಿತರಿರಲಿಲ್ಲ. ಬದಲಾಗಿ ಅವರ ಆಪ್ತರು ಕಚೇರಿಯಲ್ಲಿದ್ದರು. ಮಧು ಬಂಗಾರಪ್ಪರವರು ಕಚೇರಿಗೆ ಬರುತ್ತಲೇ ಅವರನ್ನ ಸ್ವಾಗತಿಸಿದ ಬೇಳೂರು ಗೋಪಾಲಕೃಷ್ಣರವರ ಆಪ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಸಚಿವರಿಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡಿದರು. 

 

Leave a Comment