ಸಕ್ರೆಬೈಲ್ ಆನೆ ಬಿಡಾರದಲ್ಲಿ ಮತ್ತೆ ಯಡವಟ್ಟು! ಮದುವೆ ಫೋಟೋ ಶೂಟ್​ ವೇಳೆ ಆನೆಯಿಂದ ಕೆಳಕ್ಕೆ ಬಿದ್ದ ಮಾವುತ! ವಿಡಿಯೋ ಹೇಳಿದ ಸತ್ಯ! JP ಸ್ಟೋರಿ

A mahout fell from the elephant at the Sakrebail elephant camp. He has been admitted to The Meggan Hospital in Shivamogga

ಸಕ್ರೆಬೈಲ್ ಆನೆ ಬಿಡಾರದಲ್ಲಿ ಮತ್ತೆ ಯಡವಟ್ಟು! ಮದುವೆ ಫೋಟೋ ಶೂಟ್​ ವೇಳೆ ಆನೆಯಿಂದ ಕೆಳಕ್ಕೆ ಬಿದ್ದ ಮಾವುತ! ವಿಡಿಯೋ ಹೇಳಿದ ಸತ್ಯ! JP ಸ್ಟೋರಿ

SHIVAMOGGA | SAKREBAILU ELEPHANT CAMP  Dec 2, 2023 |  ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ ವೇಳೆ ಎಡವಟ್ಟು | ಆನೆಯಿಂದ ಕೆಳಗೆ ಬಿದ್ದ ಮಾವುತ.| .ಬಿಡಾರಗಳಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ ಗಳಿಗೆ ಅವಕಾಶ ಇದೆಯಾ? ..ಜೆಪಿ ಬರೆಯುತ್ತಾರೆ

ಜೆಪಿ ಬರೆಯುತ್ತಾರೆ

ರಾಜ್ಯದ ಪ್ರತಿಷ್ಠಿತ ಸಕ್ರೆಬೈಲು ಆನೆ ಬಿಡಾರ ಇತ್ತಿಚ್ಚಿನ ದಿನಗಳಲ್ಲಿ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿದೆ. ಬಾನುಮತಿ ಬಾಲ ಕಟ್ ಮಾಡಿದ ಸುದ್ದಿ ಮಾದ್ಯಮಗಳಲ್ಲಿ ಪ್ರಕಟವಾದ ನಂತರ ಬಿಡಾರದಲ್ಲಿ ನಡೆಯುವ ಯಾವೊಂದು ಘಟನಾವಳಿಗಳನ್ನುಮಾದ್ಯಮಗಳಿಗೆ ಸೋರಿಕೆಯಾಗದಂತೆ ಅಧಿಕಾರಿ ಸಿಬ್ಬಂದಿಗಳು ಮುಚ್ಚಿಡುತ್ತಿದ್ದಾರೆ ಅಥವಾ ಹಾಗೆ ಅನಿಸುತ್ತಿದೆ .

ಇಂತಹ ಕಠಿಣ ಸಂದರ್ಭದಲ್ಲಿಯೇ ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರವಾಸಿಗರು ಇರುವ ಸಂದರ್ಭದಲ್ಲಿಯೇ ಯಡವಟ್ಟೊಂದು ನಡೆದು ಹೋಗಿದ್ದು, ಆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

READ : ಚಿಕ್ಕಮಗಳೂರು ಆನೆ ಸಕ್ರೆಬೈಲ್ ಆನೆ ಬಿಡಾರಕ್ಕೆ ಬಂದಾಗ ನಡೀತು ಮನಕಲಕುವ ಈ ಘಟನೆ!

ಸಕ್ರೆಬೈಲ್ ಆನೆ ಬಿಡಾರ 

 

ನಿನ್ನೆ ಬಿಡಾರದಲ್ಲಿ ನವಜೋಡಿಗಳ ವೆಡ್ಡಿಂಗ್ ಶೂಟಿಂಗ್ ವೇಳೆ ಈ ಅಚಾತುರ್ಯ ನಡೆದಿದೆ ಕುಂತಿ ಆನೆ ಮುಂಬಂದಿಯಲ್ಲಿ ನವ ಜೋಡಿಗಳು ಹೋಗುವ ದೃಶ್ಯದ ವೇಳೆ ದ್ರುವ ಆನೆ ಮರಿ ಏಕಾಏಕಿ ತಾಯಿ ಕುಂತಿ ಬಳಿ ಬಂದಿದೆ. ಆಗ ತಕ್ಷಣ ಕುಂತಿ ತಿರುಗಿದಾಗ ಆಯತಪ್ಪಿ ಮಾವುತ ಸಂಶುದ್ದಿನ್ ಕೆಳಗೆ ಬಿದ್ದಿದ್ದಾನೆ. 

ಆನೆ ಮೇಲಿಂದ ಬಿದ್ದ ಮಾವುತ

ಬಿದ್ದ ಸಂಶುದ್ದೀನ್ ಮತ್ತೆ ಏಳಲೇ ಇಲ್ಲ.ಕೈಗೆ ಹಾಗು ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಆಗ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ದೃಶ್ಯವನ್ನು ಬಿಡಾರಕ್ಕೆ ಬಂದಿದ್ದ ಪ್ರವಾಸಿಗರೊಬ್ಬರೂ ಸಂಪೂರ್ಣ ಚಿತ್ರೀಕರಿಸಿ ಸೋಶಿಯಲ್ ಮಿಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. 

ಸಹ ಸಿಬ್ಬಂದಿ ಇದ್ದಿದ್ದರೆ ತಪ್ಪುತ್ತಿತ್ತೇ ಎಡವಟ್ಟು?

ಹೀಗೊಂದು ಪ್ರಶ್ನೆ ಸಹ ಈ ಘಟನೆಯಲ್ಲಿ ಥಳಕು ಹಾಕಿಕೊಂಡಿದೆ. ಮಾವುತ ಸಂಶುದ್ದೀನ್ ಗೆ ಸಹಸಿಬ್ಬಂದಿಯಂತಿರುವ ಕಾವಾಡಿ ಇಲ್ಲ. ಕುಂತಿ ತಾಯಿ ಆನೆಗೆ ಒಬತ್ತು ತಿಂಗಳ ಮರಿಯಾನೆ ದೃವ ಜೊತೆಗಿದೆ. ತಾಯಿ ಹಾಗು ಮರಿಯನ್ನು ಒಬ್ಬನೇ ಸಿಬ್ಬಂದಿ ನೋಡಿಕೊಳ್ಳುವುದು ಹಾಗು ಆನೆ ನಿಯಂತ್ರಿಸುವುದು ಕಷ್ಟು. ಆನೆಯ ಮೇಲೆ ಒಬ್ಬರಿದ್ದರೆ. ಕೆಳಗೆ ಮತ್ತೊಬ್ಬ ಸಿಬ್ಬಂದಿಯಿದ್ದರೆ..ಕ್ಲಿಷ್ಟಕರ ಸಂದರ್ಭದಲ್ಲಿ ಪರಿಸ್ಥತಿ ನಿಯಂತ್ರಿಸಬಹುದು. ಇದರ ಜೊತೆ ತಾಯಿ ಹಾಗು ಮರಿಗೆ ಒಬ್ಬನೇ ಮಾವುತ ಇದ್ರೆ..ಪರಿಸ್ಥಿತಿ ಹೇಗಾಗ ಬೇಡ. ತಾಯಿ ಆನೆ ಮೇಲೆ ಮಾವುತ ಸಂಶುದ್ದೀನ್ ಇದ್ದ ಸಂದರ್ಭದಲ್ಲಿಯೇ ಮರಿಯಾನೆ ದೃವ ಚಂಗನೇ ತಾಯಿ ಬಳಿ ಓಡೋಡಿ ಬರುವಾಗ ಎಡವಟ್ಟು ಆಗಿದೆ. ಮರಿಯಾನೆಯನ್ನಾದ್ರೂ ಕಟ್ಟಿ ಹಾಕವ ,ಸೂಕ್ಷ್ಮ ಪ್ರಜ್ಞೆ ಇದ್ದಿದ್ದರೆ ಈ ಘಟನೆ ಬೆಳಕಿಗೆ ಬರುತ್ತಿರಲಿಲ್ಲ.

ಮದುವೆ ಶೂಟ್ ವೇಳೆ ಯಡವಟ್ಟು/ ಸಕ್ರೆಬೈಲು ಆನೆ ಬಿಡಾರದಲ್ಲಿ ವೆಡ್ಡಿಂಗ್ ಶೂಟಿಂಗ್ ಗೆ ಅವಕಾಶ ಇದೆಯಾ? 

ಸಕ್ರೆಬೈಲು ಬಿಡಾರದಲ್ಲಿ ನೆನ್ನೆ ಘಟನೆ ಏನೆ ನಡೆದಿರಬಹುದು. ಆದರೆ ಪ್ರಶ್ನೆ ಉದ್ಭವವಾಗುವುದು ಇಲ್ಲಿಂದಲೇ..ನಿಜಕ್ಕೂ ಸರ್ಕಾರದ ನಿಯಮಾವಳಿ ಪ್ರಕಾಕ ಕ್ಯಾಂಪ್ ಗಳಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ ಗಳಿಗೆ ಅವಕಾಶ ಇದೆಯಾ ಎಂಬುದು. ಸಿನಿಮಾಗಳಿಗಾದ್ರೆ ಕಾನೂನು ನಿಯಮದಂತೆ ಇಂತಿಷ್ಠು ಹಣ ಕಟ್ಟಿಸಿಕೊಂಡು, ಶೂಟಿಂಗ್ ಗೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ವೆಡ್ಡಿಂಗ್ ಶೂಟಿಂಗ್ ಗಳಿಗೆ ಬಿಡಾರ ಬಳಕೆಯಾದ್ರೆ...ಪರಿಸ್ಥತಿ ಊಹಿಸಿಕೊಳ್ಳುವದಕ್ಕೂ ಸಾಧ್ಯವಿಲ್ಲ. ದಿನಂಪ್ರತಿ ಶೂಟಿಂಗ್ ಗಳು ನಡೆಯುತ್ತಲೇ ಇರುತ್ತವೆ. 

READ : ಶಿವಮೊಗ್ಗದಲ್ಲಿಯೇ ಭಯಹುಟ್ಟಿಸ್ತಿವೆ ಕಾಡಾನೆಗಳು! ಇದ್ದ ಊರಿನ ಸಮಸ್ಯೆಗೆ ಆಗದ ಸಕ್ರೆಬೈಲ್ ಆನೆಗಳು!? ಕಾರಣವೇನು?

ಇತ್ತ ಕಾಡಿಗೆ ಹೋಗಿ ಬಂದ ಬಿಡಾರದ ಸಾಕಾನೆಗಳು ಆಹಾರ ಸೇವಿಸಿ ಮತ್ತೆ ಕಾಡನ್ನು ಪ್ರವೇಶಿಸಬೇಕಾದ ಸಂದರ್ಭದಲ್ಲಿ ಹಣದ ಆಸೆಗೆ ಸಿಬ್ಬಂದಿಗಳು ಮಾಡುವ ಎಡವಟ್ಟು ಎಂತಹ ಅನಾಹುತವನ್ನು ಸೃಷ್ಟಿಸಬಲ್ಲದು. . ಹಾಗಿ ನೋಡಿದರೆ ಸರ್ಕಾರದ ನಿಯಮದ ಪ್ರಕಾರ ಬಿಡಾರಗಳಲ್ಲಿ ವೆಡ್ಡಿಂಗ್ ಶೂಟಿಂಗ್ ಗೆ ಅನುಮತಿ ಇಲ್ಲ. ಹಾಗಾದ್ರೆ ಇಲ್ಲಿ ಕಾನೂನನ್ನು ಉಲ್ಲಂಘಿಸಿದವರು ಯಾರು..ಅವರ ವಿರುದ್ಧ ಕ್ರಮ ಇಲ್ಲವೆ...ಬಾನುಮತಿ ಆನೆ ಬಾಲಕ್ಕೆ ಪೆಟ್ಟು ಬಿದ್ದ ಪ್ರಕರಣದಲ್ಲಿ ಅಮಾಯಕ ಕಾವಾಡಿ ಮೊಹಮ್ಮದ್ ನ್ನು ಅಮಾನತ್ತಿನಲ್ಲಿಟ್ಟ ಅಧಿಕಾರಿಗಳು, ಈಗ ವೆಡ್ಡಿಂಗ್​​ ಪ್ರಕರಣದಲ್ಲಾದ ಯವಟ್ಟಿಗೆ ಯಾರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

ಆಯುಷ್ಮಾನ್ ಸಿನಿಮಾದ ಶೂಟಿಂಗ್ ವೇಳೆ ತಗಾದೆ.

ಹೌದು ಹಾಗೆ ನೋಡಿದ್ರೆ ಈ ಹಿಂದೆ ಸಕ್ರೆಬೈಲು ಆನೆ ಬಿಡಾರದಲ್ಲಿ ಕಾನೂನಿನ ನಿಯಮಾವಳಿ ಪ್ರಕಾರವೇ ಸರ್ಕಾರಕ್ಕೆ ಇಪ್ಪತ್ತು ಸಾವಿರ ಹಣ ಪಾವತಿಸಿ ಕೇವಲ ಹತ್ತು ಸೆಕೆಂಡ್ ಗಳ ವಿಡಿಯೋ ಚಿತ್ರೀಕರಣಕ್ಕೆ ಚಿತ್ರತಂಡ ಅನುಮತಿ ಪಡೆದಿತ್ತು. ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ಆನೆಯ ಮೇಲೆ  ಹತ್ತಿ ಕೂತಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. 

ಆನೆ ಶಿವಣ್ಣನ ಮೇಲೆ ನೀರು ಚಿಮ್ಮಿಸುವ ದೃಷ್ಟಕ್ಕೆ ಅವಕಾಶ ಪಡೆಯಲಾಗಿತ್ತು. ಜಂಗಲ್ ರೆಸಾರ್ಟ್ ಬಳಿಯ ಜಾಗದಲ್ಲಿ ಶಿವಣ್ಣನಿಗೆ ಆನೆಯ ಮೇಲೆ ಕೂರಿಸಿದ್ದರು. ಇದನ್ನೇ ಪ್ರಾಣಿ ಪ್ರೀಯರು ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದರು. ಕಾನೂನಿನ ಚೌಕಟ್ಟಿನಲ್ಲಿಯೇ ಅನುಮತಿ ಪಡೆದು ಶೂಟಿಂಗ್ ಮಾಡುವ ಸಂದರ್ಭದಲ್ಲಿಯೇ ವಿವಾದಗಳು ಎದುರಾಗುತ್ತವೇ ಎನ್ನುವುದಾದರೆ..ಯಾವ ಅನುಮತಿಯನ್ನು ಪಡೆಯದೇ...ವೆಡ್ಡಿಂಗ್ ಶೂಟಿಂಗ್ ಮಾಡಿದ್ದವರ ವಿರುದ್ಧ ಕ್ರಮ ಏಕೆ ಕೈಗೊಳ್ಳುವುದಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.