ಅರಣ್ಯ ರಕ್ಷಣೆಯ ಹೊಣೆ ಹೊತ್ತು ಹುತಾತ್ಮರಾದವರಲ್ಲಿ ಬಹುತೇಕ ಸಿಬ್ಬಂದಿಗಳೆಲ್ಲಾ ಕೆಳ ಹಂತದವರೇ JP Story

Karnataka Forest mystery stories

ಅರಣ್ಯ ರಕ್ಷಣೆಯ ಹೊಣೆ ಹೊತ್ತು ಹುತಾತ್ಮರಾದವರಲ್ಲಿ ಬಹುತೇಕ ಸಿಬ್ಬಂದಿಗಳೆಲ್ಲಾ ಕೆಳ ಹಂತದವರೇ  JP Story
Karnataka Forest mystery stories

Malenadu today news report  | ಸೆಪ್ಟಂಬರ್ 11, ರಾಷ್ಚ್ರೀಯ ಅರಣ್ಯ ಹುತಾತ್ಮರ ದಿನಾಚರಣೆ. ಅರಣ್ಯ ಇಲಾಖೆ ಈ ದಿನವನ್ನು ಒಂದು ಪ್ರೋಟೋಕಾಲ್ ರೀತಿಯಲ್ಲಿ ಹುತಾತ್ಮರನ್ನು ನೆನೆದು, ಅವರ ಆತ್ಮಕ್ಕೆ ಶಾಂತಿ ಕೋರುತ್ತದೆ. ಅರಣ್ಯ ರಕ್ಷಣೆಯ ಮಹತ್ವ ಹಾಗು ಹುತಾತ್ಮರ ಶೌರ್ಯವನ್ನು ಸ್ಮರಿಸುತ್ತೆ. ಪ್ರತೀ ವರ್ಷ ಈ ದಿನ ಬಂದಾಗಲೆಲ್ಲಾ…ಹುತಾತ್ಮರಾದ ಅರಣ್ಯ ಸಿಬ್ಬಂದಿ ಮತ್ತು ಕೆಳ ಹಂತದ ಅಧಿಕಾರಿಗಳ ಕುಟುಂಬ ತಮ್ಮರನ್ನು ನೆನೆದು ಕಣ್ಣೀರು ಹಾಕುತ್ತದೆ.

ಅರಣ್ಯ ರಕ್ಷಣೆಯ ಹೊಣೆ ಹೊತ್ತು ಹುತಾತ್ಮರಾದವರಲ್ಲಿ ಬಹುತೇಕ ಸಿಬ್ಬಂದಿಗಳೆಲ್ಲಾ ಕೆಳ ಹಂತದವರೇ!

13-08-1966 ರಿಂದ 02-05-2021 ರವರೆಗಿನವರೆಗೆ ರಾಜ್ಯದಲ್ಲಿ 53 ಮಂದಿ ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯದಲ್ಲಿದ್ದಾಗ ಅರಣ್ಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದಾರೆ. ಅರಣ್ಯ ರಕ್ಷಣೆ ಮತ್ತು ವನ್ಯಜೀವಿ ರಕ್ಷಣೆಗಾಗಿ ತಮ್ಮ ಜೀವ ಪಣಕ್ಕಿಟ್ಟು ದಟ್ಟ ಕಾಡಿನಲ್ಲಿ ಪೋಚರ್ಸ್ ಮತ್ತು ಸ್ಮಗ್ಲರ್ ಗಳ ಜೊತೆ ಹೋರಾಡಬೇಕಾದ ಅನಿವಾರ್ಯತೆ ಇಂದು ವಾಚರ್ಸ್, ಗಾರ್ಡ್ ಪಾರೆಸ್ಟರ್ ಮತ್ತು ರೆಂಜರ್ ಗಳಿಗಿದೆ.

ಅಂಕಿ ಅಂಶಗಳು ಏನು ಹೇಳುತ್ತವೆ

ಅದರಲ್ಲೂ ಅಂಕಿಅಂಶಗಳನ್ನು ಗಮನಿಸಿದರೆ 1966 ರಿಂದ 2021 ರವರೆಗೆ ಅರಣ್ಯದಲ್ಲಿ ಕರ್ತವ್ಯದಲ್ಲಿದ್ದಾಗ ಮರಗಳ್ಳರ ದಾಳಿಗೆ, ಪೋಚರ್ಸ್ ಗಳ ದಾಳಿಗೆ, ವನ್ಯಜೀವಿಗಳಿಗೆ ತುತ್ತಾಗಿ ಪ್ರಾಣಬಿಟ್ಟವರಲ್ಲಿ ಅರಣ್ಯ ವೀಕ್ಷಕರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರಲ್ಲಿ ಹಂಗಾಮಿ ಅರಣ್ಯ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಹುದ್ದೆ ಚಿಕ್ಕದಾದರೂ,ಜವಾಬ್ದಾರಿ ಹೆಚ್ಚಿರುತ್ತದೆ.

ಕಾಡಿನ ಕೊನೆ ಕೊಂಡಿಯಾಗಿ ಕೆಲಸ ಮಾಡುವ ಅರಣ್ಯ ವೀಕ್ಷಕ ಕಾಡಿನೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾನೆ.ಈತನೇ ನಿಜವಾದ ಕಾಡಿನ ರಾಜ. ಕಾಡಿನ ಸರಹದ್ದುಗಳೆಲ್ಲಾ ಇವನಿಗೆ ಚಿರಪರಿಚಿತ. ಯಾವ ವನ್ಯಪ್ರಾಣಿ ಎಷ್ಟು ಹೊತ್ತಿಗೆ ಯಾವ ಹಳ್ಳಕೊಳ್ಳದಲ್ಲಿ ನೀರು ಕುಡಿಯಲು ಬರುತ್ತವೆ. ಯಾವ ಕಳ್ಳರು ಸರಹದ್ದನ್ನು ಪ್ರವೇಶಿಸಿದ್ದಾರೆಂಬ ಸಂಪೂರ್ಣ ಮಾಹಿತಿ ವಾಚರ್​ಗೆ 

ವಾಚರ್ಸ್​ಗೆ ಬೇಕಿದೆ ಹೆಚ್ಚಿನ ರಕ್ಷಣೆ

ವಿಪರ್ಯಾಸ ಎಂದರೆ ಹುತಾತ್ಮರಾದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಚರ್ಸ್ ಗಳಿದ್ದಾರೆ. ಅವರ ಬದುಕಿಗೆ ಭದ್ರ ಭುನಾದಿ ಹಾಕಬೇಕಾಗಿರುವ ಐ.ಎಫ್.ಎಸ್ ಅಧಿಕಾರಿಗಳು ಈವರೆಗೂ ಅವರ ನೋವುಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿಲ್ಲ. ಸಿಸಿಎಫ್, ಎಪಿಸಿಸಿಎಪ್ ಪಿಸಿಸಿಎಫ್(ಅರಣ್ಯ ಪಡೆ) ಈ ಅಧಿಕಾರಿಗಳೆಲ್ಲಾ ಬೆಂಗಳೂರಿನ ಅರಣ್ಯ ಭವನಕ್ಕೆ ಸೀಮಿತ ಎಂಬಂತಾಗಿದ್ದಾರೆ.

ಹೇಳಿಕೊಳ್ಳುವುದಕ್ಕೆ ಇವರು ಅರಣ್ಯ ಸಂರಕ್ಷಣಾಧಿಕಾರಿಗಳು ಎಂಬ ನಾಮಾಂಕಿತ ಹೊಂದಿದಂತಿದೆ. ಅರಣ್ಯ ಹುತಾತ್ಮರ ದಿನದಂದು, ಕಾಡು ಕಾಯುವ ತಳಹಂತದ ಸಿಬ್ಬಂದಿಗಳಿಗೆ ಏನೆಲ್ಲಾ ಸವಲತ್ತುಗಳನ್ನು ನೀಡಿದ್ದೇವೆ ಎಂಬ ಆತ್ಮ ವಿಮರ್ಷೆಯನ್ನು ಈ ಅಧಿಕಾರಿಗಳು ಮಾಡಿಕೊಂಡರೆ ಸಾಕು.\

ಈವರೆಗೂ ಇಬ್ಬರು ಐಎಫ್ಎಸ್ ಅಧಿಕಾರಿಗಳು ಹುತಾತ್ಮ

1966 ರಿಂದ 2021 ರವರೆಗೆ ರಾಜ್ಯದಲ್ಲಿ ಹಿರಿಯ ಮಟ್ಟದ ಇಬ್ಬರು ಡಿಸಿಎಫ್ ಗಳು ಹುತಾತ್ಮರಾಗಿದ್ದಾರೆ. 10-11-1991 ರಂದು ಚಾಮರಾಜ ನಗರದ ಡಿಸಿಎಫ್ ಪಿ.ಶ್ರೀನಿವಾಸ್ ವೀರಪ್ಪನ್ ಸಂಚಿಗೆ ಭೀಕರವಾಗಿ ಕೊಲೆಯಾಗುತ್ತಾರೆ. ರುಂಡಮುಂಡವನ್ನೇ ಬೇರ್ಪಡಿಸಿ, ಜನರಲ್ಲಿ ಭೀತಿ ಹುಟ್ಟಿಸಿದ್ದ ವೀರಪ್ಪನ್. ಈ ಸಾವು ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು.

ಇದಾದ ನಂತರ 03-03-2018 ರಂದು ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ನಲ್ಲಿ ಸಿಎಫ್ ಮಣಿಕಂಠನ್ ಕಾಡಾನೆ ದಾಳಿಗೆ ಬಲಿಯಾಗುತ್ತಾರೆ. ಈವರೆಗೆ 19 ಅರಣ್ಯ ರಕ್ಷಕರು, 19 ಅರಣ್ಯ ರಕ್ಷಕರು(ಹಂಗಾಮಿ ಸೇರಿ) ಆರು ವನಪಾಲಕರು, ನಾಲ್ಕು ಮಂದಿ ರೇಂಜರ್ಸ್ , ಒಬ್ಬರು ಎಸಿಎಪ್, ಒಬ್ಬರು ಸಹಾಯಕ ಪಶುವೈದ್ಯ ನಿರ್ದೇಶಕರು, ಹುತಾತ್ಮರಾಗಿದ್ದಾರೆ.

ಕಾಡು ಕಾಡುವ ನಾಯಕರು!

ಅರಣ್ಯ ಇಲಾಖೆಯ ಹುಲಿ ಯೋಜನೆ, ಆನೆ ಯೋಜನೆ, ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯ, ಆನೆ ಶಿಬಿರಗಳಲ್ಲಿ ಕೆಲಸ ನಿರ್ವಹಿಸುವ ಕೊನೆಹಂತದ ಸಿಬ್ಬಂದಿಗಳು ಇಂದಿಗೂ ಕನಿಷ್ಠ ಬದುಕು ರೂಪಿಸಿಕೊಳ್ಳೋದಕ್ಕೆ ಸಾಧ್ಯವಾಗಿಲ್ಲ. ಹೊರಗುತ್ತಿಗೆಯಲ್ಲಿರುವ ಸಿಬ್ಬಂದಿಗಳ ಗೋಳನ್ನು ಕೇಳುವವರಿಲ್ಲ. ಕನಿಷ್ಠ ವೇತನ ಪಡೆಯುವ ಇವರುಗಳು ಕಾಡಿನ ಮೇಲಿನ ಪ್ರೇಮಕ್ಕೆ, ಇವರು ಇಂದಿಗೂ ನಿಷ್ಠೆಯಿಂದಲೇ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರಣ್ಯ ವೀಕ್ಷಕರು , ಅರಣ್ಯ ರಕ್ಷಕರು, ವನಪಾಲಕರಿಗೆ, ಕಾಡಿನಲ್ಲಿ ಎದುರಿಸುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಹಿರಿಯ ಅಧಿಕಾರಿಗಳು, ಒಂದು ಅಧ್ಯಯನ ಮತ್ತು ಸಂಶೋದನೆಗೆ ಒತ್ತು ನೀಡಬೇಕಿದೆ.

ಕಾಡುಗಳ್ಳರನ್ನು ಎದುರಿಸಲು ಆಧುನಿಕ ವೆಪನ್ಸ್ ಗಳು ಇಲಾಖೆಗೆ ಬೇಕಾಗಿದೆ. ಕಾಡಿನಲ್ಲಿ ಸಂಪರ್ಕಕ್ಕಾಗಿ ಇಲಾಖೆಗೆ ಸ್ಯಾಟಲೈಟ್ ಫೋನ್ ಅಗತ್ಯತೆ ಇದೆ, ಈಗಲೂ ಕಾಡಿನಲ್ಲಿ ಮೊಬೈಲ್ ವಾಕಿಟಾಕಿ ಸಂಪರ್ಕ ಸಾಧಿಸಲು ಸಾಧ್ಯವಿಲ್ಲ. ಹತ್ತಾರು ಮಂದಿ ಕಾಡುಗಳ್ಳರ ಮದ್ಯೆ ಬೆರಳಿಣಿಕೆಯಷ್ಟು ಸಿಬ್ಬಂದಿಗಳು ಹೋರಾಡಲು ಸಾಧ್ಯವಿಲ್ಲ.

ದುರ್ಗಮ ಕಾಡಿನಲ್ಲಿ ಸ್ಯಾಟ್​ಲೈಟ್​ ಫೋನ್​ಗಳ ಅವಶ್ಯಕತೆ ಇದೆ

ದುರ್ಗಮ ಕಾಡಿನಲ್ಲಿ ಸಂಚಾರಕ್ಕೆ ಜೀಪು, ವೆಪವ್ಸ್, ಪೋನ್, ಗಟ್ಟಿಮುಟ್ಟಾದ ಶೂಗಳು, ಸೇರಿದಂತೆ ಅಗತ್ಯ ವಸ್ತುಗಳನ್ನು ಹಾಗು ಹಣದ ನೆರವನ್ನು ನೀಡಬೇಕಿದೆ. ಆನೆ ಮೇಲೆ ಕೆಲಸ ಮಾಡುವ ಸಿಬ್ಬಂದಿಗಳಿಗೆ ಬೇಕಾದ ನೆರವನ್ನು ನೀಡಬೇಕಿದೆ. ಕರ್ತವ್ಯದಲ್ಲಿ ಇವರು ಸಾವನ್ನಪ್ಪಿದರೆ, ಇವರಿಗೆ ಇಲಾಖೆಯಿಂದ ಇನ್ಸುರೆನ್ಸ್ ಇಲ್ಲ ಎಂಬುದೇ ವಿಪರ್ಯಾಸ.

ಕೇವಲ ಅರಣ್ಯ ಹುತಾತ್ಮರನ್ನು ಪ್ರತೀ ವರ್ಷ ನೆನೆದರೆ, ಸಾಲದು,ಈಗ ಕಾಡಿನಲ್ಲಿ ಜೀವಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಕೆಳಹಂತದ ಅಧಿಕಾರಿ ಸಿಬ್ಬಂದಿಗಳಿಗೆ ಅಗತ್ಯ ನೆರವು ನೀಡಿದರೆ, ಹುತಾತ್ಮರಾದ ಜೀವಗಳ ಆತ್ಮಕ್ಕೂ ಶಾಂತಿ ಸಿಕ್ಕಂತಾಗುತ್ತದೆ ಅಲ್ಲವೇ..?ಇದನ್ನು ಐಎಫ್ಎಸ್ ರಾಜಕುಮಾರರು ಅರ್ಥ ಮಾಡಿಕೊಳ್ಳಬಲ್ಲರೇ ಎಂಬುದು ಸಧ್ಯಕ್ಕಿರುವ ಪ್ರಶ್ನೆಯಾಗಿದೆ.