BIG NEWS /ಕಮ್ಮಿಯಾಯ್ತಾ ಜಿಲ್ಲಾ ಪಂಚಾಯತ್ ಕ್ಷೇತ್ರಗಳು? ಹೆಚ್ಚಾಯ್ತಾ ತಾಲ್ಲೂಕು ಪಂಚಾಯತ್​ ಕ್ಷೇತ್ರಗಳು? ಏನಿದೆ ಸೀಮಾ ನಿರ್ಣಯ ಆಯೋಗದ ಪಟ್ಟಿಯಲ್ಲಿ!

Are the zilla panchayat constituencies decreasing? Are there more taluk panchayat constituencies? What's on the delimitation commission's list? ಕಮ್ಮಿಯಾಯ್ತಾ ಜಿಲ್ಲಾ ಪಂಚಾಯತ್ ಕ್ಷೇತ್ರಗಳು? ಹೆಚ್ಚಾಯ್ತಾ ತಾಲ್ಲೂಕು ಪಂಚಾಯತ್​ ಕ್ಷೇತ್ರಗಳು? ಏನಿದೆ ಸೀಮಾ ನಿರ್ಣಯ ಆಯೋಗದ ಪಟ್ಟಿಯಲ್ಲಿ!

BIG NEWS /ಕಮ್ಮಿಯಾಯ್ತಾ ಜಿಲ್ಲಾ ಪಂಚಾಯತ್ ಕ್ಷೇತ್ರಗಳು? ಹೆಚ್ಚಾಯ್ತಾ ತಾಲ್ಲೂಕು ಪಂಚಾಯತ್​ ಕ್ಷೇತ್ರಗಳು? ಏನಿದೆ  ಸೀಮಾ ನಿರ್ಣಯ ಆಯೋಗದ ಪಟ್ಟಿಯಲ್ಲಿ!

KARNATAKA NEWS/ ONLINE / Malenadu today/ Aug 9, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್​ ವಿಂಗಡಣೆಯ ಕುರಿತಾಗಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಸ್ತುತ ವಿಚಾರದ ಸಂಬಂಧ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕಳೆದ 15-07-2023 ರಂದು ರವಾನೆ ಮಾಡಿರುವ ಮಾರ್ಗಸೂಚಿಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮಿತಿಯನ್ನು ಸಹ ನಿಗದಿಪಡಿಸಿದೆ. ಮಲೆನಾಡು ಟುಡೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಒಟ್ಟು 113 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಹಾಗೂ 31 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪರಿಷ್ಕೃತ ಲಿಸ್ಟ್​ನ್ನ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಹಾಗೂ ಮಾರ್ಗಸೂಚಿಗಳನ್ನು ನೀಡಿದೆ. ‘

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯನ್ನು ನಿರ್ಣಯಿಸುವ ಕುರಿತು ಸೀಮಾ ನಿರ್ಣಯ ಆಯೋಗ ಕಳುಹಿಸಿರುವ ಪತ್ರದಲ್ಲಿ  ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಸೀಮಾ ನಿರ್ಣಯವನ್ನು ಪುನರ್ ನಿಗದಿಪಡಿಸಲು ಉಲ್ಲೇಖ (3) ರಲ್ಲಿ ದಿನಾಂಕ 10.07.2023 ರಂದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸಲಾಗಿದೆ. ಉಲ್ಲೇಖ (4) ರ ಸೀಮಾ ನಿರ್ಣಯ ಆಯೋಗದ ಸಭೆಯಲ್ಲಿ ನಿಗದಿಪಡಿಸಿರುವ ಚುನಾಯಿತ ಸದಸ್ಯರ ಸಂಖ್ಯೆಗಳಿಗೆ ಅನುಗುಣವಾಗಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯಿಸಿ ಆಯೋಗಕ್ಕೆ 7 ದಿನಗಳೊಳಗೆ ಪ್ರಸ್ತಾವನೆಯನ್ನು ಸಲ್ಲಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. 

ಈ ಸಂಬಂಧ ಕೋಷ್ಟಕವೊಂದನ್ನ ನೀಡಿರುವ ಸೀಮಾ ನಿರ್ಣಯ ಆಯೋಗ,  ಪಟ್ಟಿಯಲ್ಲಿ ನೀಡಿರುವ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಸದಸ್ಯರ ಸಂಖ್ಯೆಗಳಿಗೆ ಅನುಗುಣವಾಗಿ, ಇದರೊಂದಿಗೆ ಲಗತ್ತಿಸಿರುವ ಪರಿಷ್ಕೃತ ಮಾರ್ಗಸೂಚಿಗಳನುಸಾರ ಸೀಮಾ/ಗಡಿ ನಿರ್ಣಯವನ್ನು ರಚಿಸತಕ್ಕದ್ದು. ತಮ್ಮ ಜಿಲ್ಲೆಯ ಸಾರ್ವಜನಿಕರು ಹಾಗೂ ಸ್ಥಳೀಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಯಾವುದಾದರೂ ಬದಲಾವಣೆ ಅವಶ್ಯಕತೆ ಇದ್ದಲ್ಲಿ ಅಥವಾ ಇಲ್ಲದಿದ್ದಲ್ಲಿ, ಉಲ್ಲೇಖ (6) ರ ಪತ್ರಗಳಲ್ಲಿ ನೀಡಿರುವ ನಿರ್ದೇಶನದಂತೆ, ನಿಗದಿತ ನಮೂನೆಯಲ್ಲಿ (ಅನುಬಂಧ 1,2,3 ಮತ್ತು 4 ರಲ್ಲಿ ಹಾಗೂ ನಕಾಶೆಯೊಂದಿಗೆ ಪರಿಷ್ಕೃತ ಪುಸ್ತಾವನೆಯನ್ನು 7 ದಿನಗಳೊಳಗೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ಸಲ್ಲಿಸಬೇಕೆಂದು ಸೂಚಿಸಿದೆ. 

ಸದ್ಯ ಈ ಸಂಬಂಧ ಸೀಮಾ ನಿರ್ಣಯ ಆಯೋಗಕ್ಕೆ ಯಾವುದೇ ಉತ್ತರ ಇದುವರೆಗೂ ರವಾನಿಸಿಲ್ಲ.  ಆದಾಗ್ಯು ಸೀಮಾ ನಿರ್ಣಯ ಆಯೋಗ ನೀಡಿರುವ ಮಾರ್ಗಸೂಚಿ ಅನ್ವಯ ಪುನರ್​ ವಿಂಗಡಣೆ ಪ್ರಕ್ರಿಯೆ ಕೈಗೊಳ್ಳುವಂತೆ ಆಯಾ ತಾಲ್ಲೂಕು ಆಡಳಿತಕ್ಕೆ ಜಿಲ್ಲಾಡಳಿತ ಸುಚಿಸಿದೆ ಎನ್ನಲಾಗಿದೆ.  ಬಹುತೇಕ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಸೀಮಾ ನಿರ್ಣಯ ಆಯೋಗ ನೀಡಿರುವ ಪಟ್ಟಿಗೆ ಅನುಗುಣವಾಗಿಯೇ ನಿರ್ಣಯವಾಗಲಿದೆ ಎನ್ನಲಾಗುತ್ತಿದೆ.ಸೀಮಾ ನಿರ್ಣಯ ಆಯೋಗ ನೀಡಿರುವ ಪಟ್ಟಿಯನ್ನು ಆಧರಿಸಿ ಹೇಳುವುದಾದರೆ, ಶಿವಮೊಗ್ಗ ಜಲ್ಲೆಯಲ್ಲಿ  ಜಿಲ್ಲಾ ಪಂಚಾಯತ್​ ಒಟ್ಟು ಕ್ಷೇತ್ರಗಳ ಸಂಖ್ಯೆ 35 ರಿಂದ 31 ಕ್ಕೆ ಇಳಿಕೆಯಾಗಲಿದೆ. ಇನ್ನೂ ತಾಲ್ಲೂಕು ಪಂಚಾಯತ್​ಗಳ ಒಟ್ಟು ಕ್ಷೇತ್ರಗಳ 90 ರಿಂದ 113 ಕ್ಷೇತ್ರಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ. 

ಸೀಮಾ ನಿರ್ಣಯ ಆಯೋಗದ ಮಾರ್ಗಸೂಚಿಯಲ್ಲಿ  ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಕ್ಷೇತ್ರಗಳ ಪುನರ್​ ವಿಂಗಡಣೆಯ ಪಟ್ಟಿ ಇಲ್ಲಿದೆ ಗಮನಿಸಬಹುದು!

 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು