Hunasodu blast story ಆರು ಮಂದಿ ಬಲಿ ಪಡೆದ ಆ ಸ್ಟೋಟದ ಸ್ಥಳಕ್ಕೆ ಇಂದಿಗೂ ಯಾರು ಹೋಗುತ್ತಿಲ್ಲವೇಕೆ? ಪ್ಯಾರಲಲ್ ಎನೆರ್ಜಿ ಕೆಲಸ ಮಾಡುತ್ತಿದ್ದಿಯಾ..? 

Hunasodu blast story Why is no one still going to the site of the blast where six people were killed? Are you working on parallel energy? 

Hunasodu blast story ಆರು ಮಂದಿ ಬಲಿ ಪಡೆದ ಆ ಸ್ಟೋಟದ ಸ್ಥಳಕ್ಕೆ ಇಂದಿಗೂ ಯಾರು ಹೋಗುತ್ತಿಲ್ಲವೇಕೆ?  ಪ್ಯಾರಲಲ್ ಎನೆರ್ಜಿ ಕೆಲಸ ಮಾಡುತ್ತಿದ್ದಿಯಾ..? 
Hunasodu blast story
  • ಆರು ಮಂದಿ ಬಲಿ ಪಡೆದ ಆ ಸ್ಟೋಟದ ಸ್ಥಳಕ್ಕೆ ಇಂದಿಗೂ ಯಾರು ಹೋಗುತ್ತಿಲ್ಲವೇಕೆ?
  • ದೇಶವನ್ನೇ ಬೆಚ್ಚಿ ಬೀಳಿಸಿದ ಹುಣಸೋಡು ಸ್ಪೋಟ ಪ್ರಕರಣದ ಆ ಪ್ರದೇಶದಲ್ಲಿ ಪ್ಯಾರಲಲ್ ಎನೆರ್ಜಿ ಕೆಲಸ ಮಾಡುತ್ತಿದ್ದಿಯಾ..? 
  • ಸುದ್ದಿಯ ಬೆನ್ನತ್ತಿ ಹೋದ ಟುಡೆಗೆ ಸಿಕ್ಕ ಮಾಹಿತಿ ರೋಚಕ..ಜೆಪಿ ಬರೆಯುತ್ತಾರೆ.

Whatsapp ನ ಲಿಂಕ್​  :   ಮಲೆನಾಡಿನ ವಿಶೇಷ ಸುದ್ದಿಗಳನ್ನ ನಿಮ್ಮ  ವಾಟ್ಸ್ಯಾಪ್​ನಲ್ಲಿ ನೋಡಲು ನಮ್ಮ ಗ್ರೂಪ್​  ಸೇರಿ

21-01-2021 ರ ಜನವರಿ ರಾತ್ರಿ 10.20 ಕ್ಕೆ ಶಿವಮೊಗ್ಗ ನಗರದ ಹೊರವಲಯದಲ್ಲಿ ಸಂಭವಿಸಿದ ಹುಣಸೋಡು ಸ್ಪೋಟ ಪ್ರಕರಣ ನೆನೆದರೆ..ಈಗಲೂ ಜನರು ಬೆಚ್ಚಿಬೀಳುತ್ತಾರೆ.

ಎಸ್.ಎಸ್ ಕ್ರಷರ್ ಕ್ವಾರಿಯ ಬಳಿ ಸ್ಪೋಟಕ ತುಂಬಿದ ಕ್ಯಾಂಟರ್ ಲಾರಿಯಿಂದ ಬೊಲೊರೊ ವಾಹನಕ್ಕೆ ಸ್ಪೋಟಕ ಸರಬರಾಜು ಮಾಡುವಾಗ ಉಂಟಾದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.

ಸ್ಪೋಟದ ತೀವೃತೆ ಆಗಸದೆತ್ತರಕ್ಕೇರಿ ಮಷ್ರೂಮ್ ಸ್ಪೋಟದ ಮಾದರಿಯಲ್ಲಿ ಸುಮಾರು 150 ಕಿಲೋಮೀಟರ್ ಸುತ್ತಮುತ್ತಲ ಜಿಲ್ಲೆಗಳಿಗೆ ಸ್ಪೋಟದ ಸದ್ದು ಅಪ್ಪಳಿಸಿತ್ತು. ಹುಣಸೋಡು ಸನಿಹದ ಮನೆಗಳ ಕಿಡಕಿ ಗಾಜುಗಳು ಪುಡಿಪುಡಿಯಾಗಿದ್ವು..

ಸ್ಪೋಟದ ತೀವೃತೆಗೆ ಆರು ಮಂದಿ ಕಾರ್ಮಿಕರು ಸಜೀವ ದಹನವಾಗಿ ಹೋದು...ಹುಣಸೋಡು ಗ್ರಾಮದಲ್ಲಿ ಹಲವರಿಗೆ ಗಂಭೀರ ಗಾಯಗಳಾದವು. ಹುಣಸೋಡು ಸ್ಟೋಟ ಘಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ರು.

Whatsapp ನ ಲಿಂಕ್​  :   ಮಲೆನಾಡಿನ ವಿಶೇಷ ಸುದ್ದಿಗಳನ್ನ ನಿಮ್ಮ  ವಾಟ್ಸ್ಯಾಪ್​ನಲ್ಲಿ ನೋಡಲು ನಮ್ಮ ಗ್ರೂಪ್​  ಸೇರಿ

ಪುಲ್ವಾಮ ದಾಳಿಯ ಸ್ಪೋಟಕ್ಕಿಂತಲೂ  ಹತ್ತು ಪಟ್ಟು ಹೆಚ್ಚು ಸ್ಪೋಟಕ

ಕ್ವಾರಿ ಸ್ಪೋಟದ ಸ್ಥಳದಲ್ಲಿದ್ದುದು ಪುಲ್ಬಾಮ ಧಾಳಿಗೆ ಉಗ್ರರು ಬಳಸಿದ್ದ ಸ್ಫೋಟಕಕ್ಕಿಂತ ಹತ್ತು ಪಟ್ಟು ಸ್ಪೋಟಕ ಸಾಮಗ್ರಿ ಎಂಬ ಆತಂಕದ ಸಂಗತಿ ಕೇಳಿದಾಗ ಜನರು ಬೆಚ್ಚಿಬಿದ್ರು.

ಸ್ಪೋಟಗೊಂಡ ವಾಹನದಲ್ಲಿ ಸುಮಾರು ಮೂರು ಸಾವಿರ ಕೆ.ಜಿ. ಜಿಲೆಟಿನ್ ಮತ್ತು ಡಿಟೋನೇಟರ್ ಅಮೋನಿಯಂ ನೈಟ್ರೇಟ್ ಜೆಲ್ ಗಳಿತ್ತು. ಪುಲ್ವಾಮ ಧಾಳಿ ವೇಳೆ ಮುನ್ನೂರು ಕೆ.ಜಿ. ಸ್ಪೋಟಕವನ್ನು ಉಗ್ರರು ಬಳಸಿದ್ದರು.

ಭಾರೀ ಪ್ರಮಾಣದ ಸ್ಪೋಟಕದ ವಾಹನ ಸ್ಪೋಟಿಸಿದ್ದರಿಂದಲೇ ಭಾರೀ ಪ್ರಮಾಣದ ಸ್ಪೋಟದ ಸದ್ದು ಘಟನಾ ಸ್ಥಳದಿಂದ 150 ಕಿ.ಮಿ. ದೂರದವರೆಗೆ ಕೇಳಿಬರಲು ಕಾರಣವಾಯಿತು.

Whatsapp ನ ಲಿಂಕ್​  :   ಮಲೆನಾಡಿನ ವಿಶೇಷ ಸುದ್ದಿಗಳನ್ನ ನಿಮ್ಮ  ವಾಟ್ಸ್ಯಾಪ್​ನಲ್ಲಿ ನೋಡಲು ನಮ್ಮ ಗ್ರೂಪ್​  ಸೇರಿ

Whatsapp ನ ಲಿಂಕ್​  :   ಮಲೆನಾಡಿನ ವಿಶೇಷ ಸುದ್ದಿಗಳನ್ನ ನಿಮ್ಮ  ವಾಟ್ಸ್ಯಾಪ್​ನಲ್ಲಿ ನೋಡಲು ನಮ್ಮ ಗ್ರೂಪ್​  ಸೇರಿ

ಸ್ಪೋಟದ ತೀವ್ತತೆ  ಸೆಟಲೈಟ್ ನಲ್ಲಿ ದಾಖಲು

ಹುಣಸೋಡು ಗ್ರಾಮದ ಎಸ್.ಎಸ್ ಕ್ರಷರ್ ನಲ್ಲಿ ಸಂಭವಿಸಿದ ಸ್ಟೋಟ ಸೆಟಲೈಟ್ ರೆಡಾರ್ ನಲ್ಲಿ ದಾಖಲಾಗಿತ್ತು..ಸೀಸ್ಮಾಲಜಿ ಮಿನಿಸ್ಟ್ರಿ ಆಫ್ ಅರ್ಥ್ ಸೈನ್ಸ್ ಗವರ್ನ್ ಮೆಂಚ್ (Seismology earth sciences govt of India) ಇದರ ಅಡಿಯಲ್ಲಿ ಬರುವ ನ್ಯಾಷನಲ್ ಸೆಂಟರ್ ಆಪ್ ಸೀಸ್ಮಾಲಜಿ(National centre of seismology) ವಿಭಾಗವು ಹುಣಸೋಡಿನಲ್ಲಿ ಸಂಭವಿಸಿದ ಸ್ಪೋಟಕ್ಕೆ Man made explosion detected ಎಂದು ದಾಖಲಿಸಿತು. ಆ ಸ್ಟೋಟದ ತೀವೃತೆಗೆ ಹುಣಸೋಡು ಸುತ್ತಮುತ್ತಲ ಜನತೆ ಭಯಭೀತರಾಗಿ ಹೋದ್ರು.

ಘಟನೆ ನಡೆದು ಎರಡುವರೆ ವರ್ಷಗಳಾದ್ರೂ ಸ್ಟೋಟ ಸಂಭವಿಸಿದ ಸ್ಥಳಕ್ಕೆ ಹುಣಸೋಡು ಸುತ್ತಮುತ್ತಲ ಗ್ರಾಮಸ್ಥರು ಯಾರು ಹೋಗುತ್ತಿಲ್ಲ. ಇಂದಿಗೂ ಗರಬಡಿದಂತೆ ನಿರ್ಜನವಾಗಿರುವ ಪ್ರದೇಶದಲ್ಲಿ ಯಾರೊಬ್ಬರು ಹೋಗುತ್ತಿಲ್ಲ ಎಂದರೆ ಕಾರಣವಿರಬೇಕು ಎಂದು ಸುದ್ದಿಯ ಬೆನ್ನಟ್ಟಿ ಹೋದಾಗ ಟುಡೆ ತಂಡಕ್ಕೆ ಜನರಲ್ಲಿರುವ ಆತಂಕ ದುಗುಡ ಭಯ ಎಲ್ಲವೂ ಅನಾವರಣವಾಯ್ತು.

 ಸ್ಟೋಟ ಸಂಭವಿಸಿದ ಸ್ಥಳದಲ್ಲಿ ಆವರಿಸಿದೆಯಾ ನೆಗೆಟಿವ್ ಎನೆರ್ಜಿ?

ಹೌದು ಹೀಗೊಂದು ಅನುಮಾನವನ್ನು ಗ್ರಾಮದ ಕೆಲವು ಹಿರಿಯ ಮುಖಂಡರು ವ್ಯಕ್ತಪಡಿಸಿದ್ದಾರೆ. ಹುಣಸೋಡು ಸ್ಪೋಟದಲ್ಲಿ ಆರು ಮಂದಿ ಸಜೀವವಾಗಿ ದಹನಗೊಂಡಿದ್ದಾರೆ.

ಅವರ ಆತ್ಮಗಳಿಗೆ ಶಾಂತಿ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ನಿಖರವಾಗಿ ಸತ್ತವರು ಎಷ್ಟೆಂಬ ಮಾಹಿತಿ ಕೂಡ ಇಲಾಖೆಗಿಲ್ಲ. ಸ್ಟೋಟ ಸ್ಥಳದಲ್ಲಿ ತೋಟ ಕಾಯುತ್ತಿದ್ದ ಹಿರಿಯ ವ್ಯಕ್ತಿ ಘಟನೆ ನಡೆದ ಮೂರೇ ತಿಂಗಳಲ್ಲಿ ಸಾವನ್ನಪ್ಪಿದ್ರು. ಇದು ಹುಣಸೋಡು ಸುತ್ತಮುತ್ತಲ ಜನರಲ್ಲಿ ಮತ್ತಷ್ಟು ಭಯ ಹೆಚ್ಚುವಂತೆ ಮಾಡಿತು.

Whatsapp ನ ಲಿಂಕ್​  :   ಮಲೆನಾಡಿನ ವಿಶೇಷ ಸುದ್ದಿಗಳನ್ನ ನಿಮ್ಮ  ವಾಟ್ಸ್ಯಾಪ್​ನಲ್ಲಿ ನೋಡಲು ನಮ್ಮ ಗ್ರೂಪ್​  ಸೇರಿ

ಸ್ಪೋಟ ಸಂಭವಿಸಿದ ಸನಿಹದ ಕ್ವಾರಿ ಬಂಡೆಗಳಲ್ಲಿ ದನಕರುಗಳು ಬಿದ್ದು ಸಾವನ್ನಪ್ಪಿವೆ. ಮದ್ಯಾಹ್ನ ಬೀಸುವ ಕರ್ಕಶ ಗಾಳಿ ಭಯವನ್ನಂಟು ಮಾಡುತ್ತದೆ. ಎಸ್.ಎಸ್ ಕ್ರಷರ್ ಸುತ್ತಮುತ್ತಲ ಪ್ರದೇಶ ನಿರ್ಜನ ಪ್ರದೇಶವಾಗಿ ಮಾರ್ಪಟ್ಟಿದೆ. ಹುಣಸೋಡು ಸುತ್ತಮುತ್ತಲ ಜನರು ಅಪ್ಪಿತಪ್ಪಿಯೂ ಆ ಸ್ಟೋಟ ಸಂಭವಿಸಿದ ಸ್ಥಳದತ್ತ ಹೋಗುತ್ತಿಲ್ಲ.

ಇಲ್ಲಿದೆ ನಮ್ಮTelegram ಟೆಲಿಗ್ರಾಂ ಗ್ರೂಪ್​ : ಕ್ಲಿಕ್ ಮಾಡಿ ಜಾಯಿನ್ ಆಗಿ | ವಿಶೇಷ ಸುದ್ದಿಗಳ ಜೊತೆಗೆ ವಿಭಿನ್ನ ಮಾಹಿತಿ ನೀಡುತ್ತೇವೆ

ಇನ್ನು ಸ್ಥಳಕ್ಕೆ ಹೋಗದಿರಲು ಮತ್ತೊಂದು ಕಾರಣವೂ ಇದೆ. ಹುಣಸೋಡು ಸುತ್ತಮುತ್ತಲ ಕ್ವಾರಿಗಳಲ್ಲಿ ಕಬ್ಬಿಣ ಮೋಟಾರುಗಳು ಕಳ್ಳತನ ಹೆಚ್ಚಿದೆ. ಅಲ್ಲಿ ಹೋದ್ರೆ..ಆ ಅಪವಾದೂ  ನಮ್ಮ ಮೇಲೆ ಬರುತ್ತೆ ಎಂಬ ಭಯಕ್ಕೆ ಕೆಲವರು ಹೋಗುತ್ತಿಲ್ಲ.

 ಹುಣಸೋಡು ಸ್ಪೋಟ ಸಂಭವಿಸಿದ ಸ್ಥಳ ಒಂದು ರೀತಿಯಲ್ಲಿ ಗ್ರಾಮಸ್ಥರಿಗೆ ಗು