Shivamogga police/ ಶಿವಮೊಗ್ಗ ಪೊಲೀಸ್ ಇಲಾಖೆಯ ಭರ್ಜರಿ ಬೇಟೆ/ ಒಂದೇ ದಿನ 50 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ, ಅಕ್ಕಿ, ಬಟ್ಟೆ, ಸೀರೆ, ಕುಕ್ಕರ್​, ತವಾ ಸೀಜ್​!

Shivamogga Police/ Shimoga Police Department's massive hunt/ Rice, clothes, sarees, cookers, tawa seizes worth more than Rs 50 lakh in a single day!

Shivamogga police/ ಶಿವಮೊಗ್ಗ ಪೊಲೀಸ್ ಇಲಾಖೆಯ ಭರ್ಜರಿ ಬೇಟೆ/ ಒಂದೇ ದಿನ 50 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ, ಅಕ್ಕಿ, ಬಟ್ಟೆ, ಸೀರೆ, ಕುಕ್ಕರ್​, ತವಾ ಸೀಜ್​!
Shivamogga police/ ಶಿವಮೊಗ್ಗ ಪೊಲೀಸ್ ಇಲಾಖೆಯ ಭರ್ಜರಿ ಬೇಟೆ/ ಒಂದೇ ದಿನ 50 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ, ಅಕ್ಕಿ, ಬಟ್ಟೆ, ಸೀರೆ, ಕುಕ್ಕರ್​, ತವಾ ಸೀಜ್​!

ರಾಜ್ಯ ವಿಧಾನಸಭಾ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಕೂಡ ಅಲರ್ಟ್ ಆಗಿದ್ದು, ಅಕ್ರಮ ವಸ್ತು ಸಾಗಾಟ ಹಾಗೂ ಹಣ ಸರಭರಾಜಿನ ಮೇಲೆ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಹಲವೆಡೆ ನಾಖಾಬಂಧಿ ಹಾಕಲಾಗಿದೆ. ಅಲ್ಲದೆ, 50 ಲಕ್ಷ ರೂಪಾಯಿಗೂ ಅಧಿಕ ಮೌಲ್ಯ ವಸ್ತುಗಳನ್ನ ವಶಕ್ಕೆ ಪಡೆದಿದೆ. 

ಈ ಸಂಬಂಧ ಪ್ರಕಟಣೆಯನ್ನು ಹೊರಡಿಸಿರುವ ಪೊಲೀಸ್​ ಇಲಾಖೆ  ಶಿವಮೊಗ್ಗ ಜಿಲ್ಲೆಯಾದ್ಯಂತ ನಾಖಾಬಂಧಿ (ಚೆಕ್ ಪೋಸ್ಟ್ ಗಳನ್ನು) ತೆರೆದು ವಾಹನಗಳ ತಪಾಸಣೆಯನ್ನು ನಡೆಸುತ್ತಿದ್ದು, ಸೂಕ್ತ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ ಈ ಕೆಳಕಂಡ ವಸ್ತುಗಳನ್ನು ಅಮಾನತು ಪಡೆಸಿಕೊಳ್ಳಲಾಗಿದೆ ಎಂದು ತಿಳಿಸಿದೆ. 

ಗೊಂಬೆ ಭವಿಷ್ಯದಲ್ಲಿ ರಾಜಕಾರಣದ ಬಲಾವಣೆಯ ಸುಳಿವು! ಬಿಎಸ್​ವೈರ ಅಧಿಕಾರದ ಬಗ್ಗೆಯು ತಿಳಿಸಿದ್ದ ಯುಗಾದಿ ಅಮಾವಾಸ್ಯೆಯ ಹೇಳಿಕೆ!

ಎಲ್ಲೆಲ್ಲಿ ಏನೇನು ಜಪ್ತಿ 

  • 1) ದಿನಾಂಕಃ 22-03-2023 ರಂದು ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ಅಂದಾಜು ಮೌಲ್ಯ 29,70,000/-  ರೂಗಳ ಒಟ್ಟು  1100 ಸಂಖ್ಯೆಯ ನಾನ್ ಸ್ಟಿಕ್ ದೋಸಾ ತವಾ ಗಳನ್ನು ವಶಪಡಿಸಿಕೊಳ್ಳಲಾಗಿದೆ.
  • 2) ದಿನಾಂಕಃ 22-03-2023  ರಂದು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ಅಂದಾಜು ಮೌಲ್ಯ 8,00,000/-  ರೂಗಳ ಒಟ್ಟು 30 ಟನ್ ತೂಕದ ಬೇಳೆ, ರವೆ, ಗೋಧಿ ಮತ್ತು ಇತರೆ ಆಹಾರ ಸಾಮಗ್ರಿಗಳು ತುಂಬಿದ್ದ 1,000/-  ಬ್ಯಾಗ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
  • 3) ದಿನಾಂಕಃ 22-03-2023  ರಂದು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ಅಂದಾಜು ಮೌಲ್ಯ 7,00,000/-  ರೂ ಗಳ ಒಟ್ಟು 10 ಟನ್ 504 ಕೆಜಿ ತೂಕದ  ಅಕ್ಕಿ ತುಂಬಿದ್ದ  404 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
  • 4) ದಿನಾಂಕಃ 22-03-2023 ರಂದು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಂಗ್ರಹಿಸಿಟ್ಟಿದ್ದ ಅಂದಾಜು ಮೌಲ್ಯ 10,00,000/-  ರೂ ಗಳ  ಬಟ್ಟೆ, ಸೀರೆ, ಇಡ್ಲಿ ಕುಕ್ಕರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದರೊಂದಿಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ, ದಿನಾಂಕ 22-03-2023  ರಂದು  ಅಂದಾಜು ಮೌಲ್ಯ 17,507/- ರೂಗಳ ಒಟ್ಟು 25 ಲೀಟರ್ 608 ಮಿಲಿ ಅಕ್ರಮ ಮದ್ಯವನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಒಟ್ಟು 8  ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದ  ಪೊಲೀಸ್ ಇಲಾಖೆ ತಿಳಿಸಿದೆ. 

ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

MALENADUTODAY.COM  |SHIVAMOGGA| #KANNADANEWSWEB

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today,Shivamogga Crime News ,Shivamogga Crime News   , ಶಿವಮೊಗ್ಗ ಕ್ರೈಂ ರಿಪೋರ್ಟ್, ಶಿವಮೊಗ್ಗ ಪೊಲೀಸ್, ಶಿವಮೊಗ್ಗ ಎಸ್​ಪಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್, ಶಿವಮೊಗ್ಗ ಕುಂಸಿ ಪೊಲೀಸರು