ಕಾನೂನು ಉಲ್ಲಂಘಿಸುವವರಿಗೆ ಶಿವಮೊಗ್ಗ ಪೊಲೀಸ್ ಎಚ್ಚರಿಕೆ/ ಭದ್ರಾವತಿಯ ಮೂವರು/ ಹೊಸನಗರದ ಇಬ್ಬರು ಗಡಿಪಾರು!

Shivamogga police issues warning to violators of law/ Three from Bhadravathi, two from Hosanagara deported!/ Strict action taken by Shivamogga SP Mithun Kumar

ಕಾನೂನು ಉಲ್ಲಂಘಿಸುವವರಿಗೆ ಶಿವಮೊಗ್ಗ ಪೊಲೀಸ್ ಎಚ್ಚರಿಕೆ/ ಭದ್ರಾವತಿಯ ಮೂವರು/ ಹೊಸನಗರದ ಇಬ್ಬರು ಗಡಿಪಾರು!
ಕಾನೂನು ಉಲ್ಲಂಘಿಸುವವರಿಗೆ ಶಿವಮೊಗ್ಗ ಪೊಲೀಸ್ ಎಚ್ಚರಿಕೆ/ ಭದ್ರಾವತಿಯ ಮೂವರು/ ಹೊಸನಗರದ ಇಬ್ಬರು ಗಡಿಪಾರು!

ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಶಿವಮೊಗ್ಗ ಪೊಲೀಸ್ ಮತ್ತು ಜಿಲ್ಲಾಡಳಿತ ಶಾಂತಿ ಸುವ್ಯವಸ್ಥೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಅದರಲ್ಲಿಯು ಪದೇ ಪದೇ ಕಾನೂನು ಉಲ್ಲಂಘಿಸಿ, ಸಮಾಜದಲ್ಲಿ ಶಾಂತಿ ಭಂಗ ಮಾಡುತ್ತಿರುವವರನ್ನ ಮುಲಾಜಿಲ್ಲದೆ ಗಡಿಪಾರು ಮಾಡಲಾಗುತ್ತಿದೆ. ಇತ್ತೀಚೆಗೆ ಶಿಕಾರಿಪುರದ ಇಬ್ಬರನ್ನ ಗಡಿಪಾರು ಮಾಡಿದ ಬೆನ್ನಲ್ಲೆ, ಇದೀಗ ಭದ್ರಾವತಿಯಲ್ಲಿ ಮೂವರು ರೌಡಿಗಳಿಗೆ ಗಡಿಪಾರು ಮಾಡಿ ಉಪವಿಭಾಗಾಧಿಕಾರಿಗಳು ಆದೇಶ ಮಾಡಿದ್ದಾರೆ.

ಭದ್ರಾವತಿ ಟೌನ್ ಸೀಗೆಬಾಗಿಯ ಶೇಕ್ ಹುಸೇನ್ (39 ವರ್ಷ)  ಮತ್ತು ತನ್ವಿರ್ ಪಾಷಾ, (3 ವರ್ಷ) ಗಡಿಪಾರಾದ ರೌಡಿಗಳಾಗಿದ್ದಾರೆ. ಇವರುಗಳು ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಕೃತ್ಯಗಳನ್ನು ಎಸಗಿದ್ದಾರೆ. ಓಸಿ/ಮಟಕಾ ಜೂಜಾಟ ಆಡುವ ಮತ್ತು ಆಡಿಸುವ ಪ್ರವೃತ್ತಿ ಹೊಂದಿರುವ ಇವರು , ರೌಡಿ ಚಟುವಟಿಕೆಯಲ್ಲೂ ಸಹ ಭಾಗಿಯಾಗಿದ್ದಾರೆ.

ಭದ್ರಾವತಿ ಬಂಡಾರಳ್ಳಿಯ ಧನುಶ್ @ ಧನು, (23 ವರ್ಷ)  ಈತನು ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನ ಮಾಡುವುದು ಮತ್ತು ಸಾರ್ವಜನಿಕವಾಗಿ ಅಪಾಯಕಾರಿ ಆಯುಧಗಳನ್ನು ತೋರಿಸುತ್ತಾ ಜನರಲ್ಲಿ ಭೀತಿಯನ್ನುಂಟು ಮಾಡುವ ಮೂಲಕ ಸಾರ್ವಜನಿಕರ ಆಸ್ತಿ ಮತ್ತು ಜೀವ ಹಾನಿಪಡಿಸುವ ಅಪಾಯವಿದ್ದು, ಸದರಿ ಕೃತ್ಯಗಳನ್ನು ಯಾವುದೇ ಕಾನೂನಿನ ಭಯವಿಲ್ಲದೇ ಮುಂದುವರೆಸಿಕೊಂಡು ಬಂದಿದ್ದಾರೆ. 

ಶೇಕ್ ಹುಸೇನ್, ವಿರುದ್ಧ ಒಟ್ಟು 08 ಪ್ರಕರಣಗಳು ದಾಖಲಾಗಿದ್ದು, ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರೆಯಲಾಗಿದೆ. ಮತ್ತು ತನ್ವಿರ್ ಪಾಷಾನ  ವಿರುದ್ಧ ಒಟ್ಟು 16 ಪ್ರಕರಣಗಳು ದಾಖಲಾಗಿದ್ದು, ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರೆಯಲಾಗಿದೆ. ಮತ್ತು ಧನುಶ್ @ ಧನು  ವಿರುದ್ಧ ಒಟ್ಟು 03 ಪ್ರಕರಣಗಳು ದಾಖಲಾಗಿದ್ದು, ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರೆಯಲಾಗಿದೆ. 

ಇಲ್ಲಿಯವರೆಗೆ ಇವರುಗಳು ತಮ್ಮ ನಡವಳಿಕೆಯಲ್ಲಿ ಸುಧಾರಣೆ ಮಾಡಿಕೊಳ್ಳದೇ ತಮ್ಮ ಚಟುವಟಿಕೆಯನ್ನು ಮುಂದುವರೆಸಿಕೊಂಡು ಬಂದಿರುವುದರಿಂದ, ಕಾನೂನು ಬಾಹೀರ ಚಟುವಟಿಕೆಗಳನ್ನು ತಡೆಯುವ  ಸಲುವಾಗಿ 1) ಶೇಕ್ ಹುಸೇನ್, 2) ತನ್ವಿರ್ ಪಾಷಾ ಮತ್ತು 3)ಧನುಶ್ @ ಧನು ರವರುಗಳನ್ನು ಗಡಿಪಾರು ಮಾಡುವಂತೆ ಪೊಲೀಸ್ ವೃತ್ತ ನಿರೀಕ್ಷಕರು,  ಭದ್ರಾವತಿ ನಗರ ವೃತ್ತ ರವರು ನೀಡಿದ ವರದಿಯ ಮೇರೆಗೆ , ಶಿವಮೊಗ್ಗ ಉಪ ವಿಭಾಗದ ಉಪ ವಿಭಾಗೀಯ ದಂಡಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳು ರವರು ಮೂರು ಆರೋಪಿತರನ್ನು  ದಿನಾಂಕಃ-13-03-2023  ರಿಂದ ದಿನಾಂಕಃ- 13-03-2024 ರ ವರೆಗೆ ಒಂದು ವರ್ಷದ ಅವಧಿಗೆ ಚಿಕ್ಕ ಮಗಳೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಿದ್ದಾರೆ. 

Read/ ಕರ್ನಾಟಕ ವಿಧಾನಸಭಾ ಚುನಾವಣೆ-2023 ಕ್ಕೆ ದಿನಾಂಕ ಘೋಷಣೆ/ ಇಲ್ಲಿದೆ ಲೈವ್ ಅಪ್​ಡೇಟ್ಸ್​

ಹೊಸನಗರದಲ್ಲಿ ಇಬ್ಬರು ಗಡಿಪಾರು 

ಹೊಸನಗರ ತಾಲ್ಲೂಕ್  ನಂದ್ಯಾಳಕೊಪ್ಪ ಕಳೂರು ಗ್ರಾಮದ ಸುನೀಲ್ ಕುಮಾರ್ @ ಬಾಂಬ್ ಸುನೀಲ, (47 ವರ್ಷಃ , ಹಾಗು ಹೊಸನಗರ ತಾಲ್ಲೂಕು ವಾರಂಬಳ್ಳಿಯ ರಾಘವೇಂದ್ರ @ ವಾರಂಬಳ್ಳಿ ರಾಘು,(37 ವರ್ಷ) ಇವರುಗಳು ಸಹ ಸಮಾಜಕ್ಕೆ ಧಕ್ಕೆಯಾಗುವಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಲೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು  ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆಯಂತಹ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾರೆ.  

karnataka assembly election 2023/ ಇಂದಿನಿಂದಲೇ ನೀತಿ ಸಂಹಿತೆ ಜಾರಿ/ ಏನು ಮಾಡಬಹುದು? ಏನು ಸಾಧ್ಯವಿಲ್ಲ! ?

ಸುನಿಲ್ ಕುಮಾರ್ @ ಬಾಂಬ್ ಸುನಿಲ್ ಈತನ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿದ್ದು, ರಾಘವೇಂದ್ರನ ವಿರುದ್ಧ ಒಟ್ಟು 10 ಪ್ರಕರಣಗಳು ದಾಖಲಾಗಿರುತ್ತವೆ. ಆದರೂ ಸಹಾ ಇವರುಗಳು ತಮ್ಮ ನಡವಳಿಕೆಯಲ್ಲಿ ಸುಧಾರಣೆ ಮಾಡಿಕೊಳ್ಳದೇ ತಮ್ಮ ಚಟುವಟಿಕೆಯನ್ನು ಮುಂದುವರೆಸಿಕೊಂಡು ಬಂದಿರುವುದರಿಂದ, ಕಾನೂನು ಬಾಹೀರ ಚಟುವಟಿಕೆಗಳನ್ನು ತಡೆಯುವ  ಸಲುವಾಗಿ ಇವರನ್ನು ಗಡಿಪಾರು ಮಾಡುವಂತೆ ಹೊಸನಗಹರ ಪೊಲೀಸ್ ಉಪ ನಿರೀಕ್ಷಕರು, ನೀಡಿದ ವರದಿಯ ಮೇರೆಗೆ ಸಾಗರದ ಎಸಿಯವರು ಸುನಿಲ್ ಕುಮಾರ್ @ ಬಾಂಬ್ ಸುನಿಲನನ್ನು ದಿನಾಂಕಃ-03-03-2023  ರಿಂದ ದಿನಾಂಕಃ-03-03-2024 ರ ವರೆಗೆ ಒಂದು ವರ್ಷದ ಅವಧಿಗೆ ರಾಯಚೂರು ಜಿಲ್ಲೆಗೆ ಮತ್ತು ರಾಘವೇಂದ್ರ @ ವಾರಂಬಳ್ಳಿ ರಘುವನ್ನು ದಿನಾಂಕ:-03-03-2023 ರಿಂದ ದಿನಾಂಕಃ-03-03-2024 ರ ವರೆಗೆ ಒಂದು ವರ್ಷದ ಅವಧಿಗೆ ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಿದ್ದಾರೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road