karnataka assembly election 2023/ ಇಂದಿನಿಂದಲೇ ನೀತಿ ಸಂಹಿತೆ ಜಾರಿ/ ಏನು ಮಾಡಬಹುದು? ಏನು ಸಾಧ್ಯವಿಲ್ಲ! ?

Malenadu Today

ಕೇಂದ್ರ ಚುನಾವಣಾ ಆಯೋಗ ದೆಹಲಿಯ ವಿಜ್ಞಾನ ಭವನದಲ್ಲಿ ಇವತ್ತು ಸುದ್ದಿಗೋಷ್ಟಿಯನ್ನು ನಡೆಸಿ,  ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಿದೆ.  ಇನ್ನೂ ಚುನಾವಣೆಯು ಘೋಷಣೆಯಾದ ಬೆನ್ನಲ್ಲೆ, ಇವತ್ತೆ ನೀತಿ ಸಂಹಿತೆಯನ್ನು ಜಾರಿಯಾಗಿದೆ. ಈ  ಕ್ಷಣದಿಂದಲೇ ಚುನಾವಣಾ ಆಯೋಗದ ಹೈಪವರ್​ ಪಡೆದುಕೊಳ್ಳುತ್ತದೆ. ಸರ್ಕಾರ  ತನ್ನ ದೈನಂದಿನ ಆಡಳಿತವನ್ನು ನೋಡಿಕೊಳ್ಳುವುದಕ್ಕೆ ಸೀಮಿತವಾಗಲಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಯಾವುದೇ ಘೋಷಣೆಗಳನ್ನು ಮಾಡುವಂತಿರುವುದಿಲ್ಲ. ಈ ನಿಟ್ಟಿನಲ್ಲಿ ನೀತಿ ಸಂಹಿತೆಯ ಜಾರಿಯಿಂದಾಗಿ ಏನೇನು ಮಾಡಬಹುದು ಏನೇನು ಮಾಡಲಾಗದು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ಓದಿ

ಆಗುಂಬೆ ಆನೆ ಹಿಡಿಯಲು ಸಿಗದ ಪರ್ಮಿಶನ್ ತೀರ್ಥಹಳ್ಳಿ ಆನೆ ಸೆರೆಗೆ ಸಿಕ್ಕಿದ್ದೇಗೆ! 4 ದಿನದ ಆಪರೇಷನ್ ನಲ್ಲಿ ಉದ್ಭವವಾಗಿದೆ 5 ಪ್ರಶ್ನೆಗಳು! JP Story

ನೀತಿ ಸಂಹಿತೆ ಜಾರಿಯಾದರೆ

  • ಮುಖ್ಯವಾಗಿ ಶಾಸಕರು, ಸಚಿವರು, ನಿಗಮ ಮಂಡಳಿ ಅಧ್ಯಕ್ಷರು ಸದಸ್ಯರು ಸೇರಿದಂತೆ ಯಾವುದೇ ಸರ್ಕಾರಿ ಸಭೆ ನಡೆಸುವಂತಿಲ್ಲ. ಇಲಾಖೆ ಅಧಿಕಾರಿಗಳ ಸಭೆ ನಡೆಸುವಂತಿರುವುದಿಲ್ಲ. 
  • ಮತದಾರರಿಗೆ ಆಮಿಷವೊಡ್ಡುವಂತಹ ಯಾವುದೇ ವಸ್ತುಗಳನ್ನು ನೀಡುವಂತಿಲ್ಲ. ಸಭೆ ಸಮಾರಂಭವನ್ನು ಕೈಗೊಳ್ಳುವಾಗಲು ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. 
  • ನಾಯಕರ ಪ್ರಚಾರ, ಅಭ್ಯರ್ಥಿಗಳ ಪ್ರಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಲೆಕ್ಕ ನೀಡಬೇಕಾಗುತ್ತದೆ. ಅಭ್ಯರ್ಥಿಗಳು ಬಳಸುವ ವಾಹನಗಳಿಗೆ ಪಾಸ್​ ಪಡೆದುಕೊಳ್ಳಬೇಕು. 
  • ಯಾವುದೇ ಶಂಕುಸ್ಥಾಪನೆ, ಉದ್ಘಾಟನೆ, ಯೋಜನೆ ಘೋಷಣೆ, ಇತ್ಯಾದಿಗಳು ಸೇರಿದಂತೆ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. 
  • ಎಲ್ಲೆಡೆ ಹಾಕಿರುವ ಸರ್ಕಾರಿ ಕಾರ್ಯಕ್ರಮ , ಯೋಜನೆ ಹಾಗೂ ಇತರೇ ಫ್ಲೆಕ್ಸ್​ಗಳು ಬ್ಯಾನರ್​ಗಳನ್ನು ತೆರವುಗೊಳಿಸಲಾಗುತ್ತದೆ. 
  • ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯು ಚುನಾವಣಾ ಅಧಿಕಾರಿಯಾಗಿ ಚುನಾವಣೆಯನ್ನು ಸಸೂತ್ರವಾಗಿ ನಡೆಸುವ ಅಧಿಕಾರ ಹಾಗೂ ಜವಾಬ್ದಾರಿಯನ್ನು ಪಡೆದುಕೊಳ್ಳುತ್ತಾರೆ. 
  •  ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯಲ್ಲಿರುವ ನಿಯಮಗಳನ್ನು, ಅನ್ವಯ ಅಭ್ಯರ್ಥಿಗಳು , ಪಕ್ಷಗಳು , ನಾಯಕರು ಪಾಲನೆ ಮಾಡಬೇಕಾಗುತ್ತದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road ,shivamogga news,shivamogga,shivamogga airport,kannada news live,kannada news,shivamogga airport inauguration,shivamogga latest news,pm modi in shivamogga,latest kannada news,shivamogga mp,live news,shivamogga today news,shivamogga airport​,kannada live news,karnataka latest news,kannada latest news,pm modi inaugurate shivamogga airport,shivamogga new airport,latest news,karnataka news,breaking news,shivamogga news today

Share This Article