ರಾಗಿಗುಡ್ಡದಲ್ಲಿ ನಿರ್ಮಾಣವಾಗಲಿದೆ 108 ಅಡಿ ಎತ್ತರದ ಶಿವನಮೂರ್ತಿ

Malenadu Today

MALENADUTODAY.COM | SHIVAMOGGA NEWS

ಶಿವಮೊಗ್ಗದ ರಾಗಿ ಗುಡ್ಡದ ಮೇಲೆ 108 ಅಡಿ ಎತ್ತರದ ಶಿವನ ಮೂರ್ತಿ ಸ್ಥಾಪನೆಯಾಗಲಿದೆ. ಈ ಸಂಬಂಧ ಸ್ಥಳೀಯ ವಿರೋಧದ ನಡುವೆ ಇವತ್ತು ಶಿವನ ಮೂರ್ತಿ ಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಭೂಮಿ ಪೂಜೆ ನೆರವೇರಿಸಿದರು. 

*ಶಿವಮೊಗ್ಗಕ್ಕೆ ಸಿಎಂ! ಯಾವೆಲ್ಲಾ ಅಭಿವೃದ್ಧಿ ಕಾಮಗಾರಿಗೆ ಸಿಗಲಿದೆ ಚಾಲನೆ! ವಿವರ ಇಲ್ಲಿದೆ ಓದಿ*

ರಾಗಿಗುಡ್ಡದಲ್ಲಿ ಕಾಮಗಾರಿಗಾಗಿ ದೇವಸ್ಥಾನ ಕೆಡವಲಾಗುತ್ತಿದೆ ಎಂದು ಆರೋಪಿಸಿದ್ದ ರಾಗಿಗುಡ್ಡ ಬ್ರಹ್ಮ ವಿಷ್ಣ ಮಹೇಶ್ವರ ಸೇವಾ ಟ್ರಸ್ಟ್ ಈ ಸಂಬಂಧ ನ್ಯಾಯಾಲಯದ ಮೊರೆಹೋಗಿತ್ತು. ಇದರ ನಡುವೆ ಇವತ್ತು ಸಿಎಂ ಬಸವರಾಜ ಬೊಮ್ಮಾಯಿ 108 ಅಡಿ ಎತ್ತರದ ಶಿವನಮೂರ್ತಿ ಉದ್ಘಾಟನೆಗೆ ಚಾಲನೆ ನೀಡಿದರು. ಇನ್ನೂ ಈ ವೇಳೆ  ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಸಚಿವರಾದ ಕೆ.ಸಿ.ನಾರಾಯಣಗೌಡ, ಆರಗ ಜ್ಞಾನೇಂದ್ರ, ಬೈರತಿ ಬಸವರಾಜ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಮತ್ತಿತರರು ಹಾಜರಿದ್ದರು.

ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article