ಶಿವಮೊಗ್ಗಕ್ಕೆ ಸಿಎಂ! ಯಾವೆಲ್ಲಾ ಅಭಿವೃದ್ಧಿ ಕಾಮಗಾರಿಗೆ ಸಿಗಲಿದೆ ಚಾಲನೆ! ವಿವರ ಇಲ್ಲಿದೆ ಓದಿ!

CM to Shivamogga! What development work will be launched! Read the details here!

ಶಿವಮೊಗ್ಗಕ್ಕೆ ಸಿಎಂ! ಯಾವೆಲ್ಲಾ ಅಭಿವೃದ್ಧಿ ಕಾಮಗಾರಿಗೆ ಸಿಗಲಿದೆ ಚಾಲನೆ! ವಿವರ ಇಲ್ಲಿದೆ ಓದಿ!
ಶಿವಮೊಗ್ಗಕ್ಕೆ ಸಿಎಂ! ಯಾವೆಲ್ಲಾ ಅಭಿವೃದ್ಧಿ ಕಾಮಗಾರಿಗೆ ಸಿಗಲಿದೆ ಚಾಲನೆ! ವಿವರ ಇಲ್ಲಿದೆ ಓದಿ!

MALENADUTODAY.COM | SHIVAMOGGA NEWS 

ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಇವತ್ತು ಮಧ್ಯಾಹ್ನ 2 ಗಂಟೆಗೆ ಎನ್‍ಇಎಸ್ ಮೈದಾನದಲ್ಲಿ ಆಯೋಜಿಸಲಾಗಿರುವ   ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ/ಶಿಲಾನ್ಯಾಸ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಷ್ಟಕ್ಕೂ ಯಾವೆಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ ಎಂಬುದರ ವಿವರ ಇಲ್ಲಿದೆ ಓದಿ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಜೀವ್ ಗಾಂಧಿ ವಸತಿ ನಿಗಮದ ಸಹಯೋಗದೊಡನೆ ರಾಜ್ಯ ಸರ್ಕಾರದ ವಸತಿ ಯೋಜನೆಗಳ ಸಂಯೋಜನೆಯಡಿ ನಿರ್ಮಿಸುತ್ತಿರುವ 3000 ಜಿ+2 ಗುಂಪು ಮನೆಗಳಲ್ಲಿ ಪೂರ್ಣಗೊಂಡಿರುವ 288 ಮನೆಗಳ ಉದ್ಘಾಟನೆ ಮತ್ತು 700 ಫಲಾನುಭವಿಗಳಿಗೆ ಅಂತಿಮ ಹಂಚಿಕೆ ಪತ್ರ ವಿತರಣೆ. ರೂ.348 ಲಕ್ಷ ಅಂದಾಜು ಮೊತ್ತದ ಶಿವಮೊಗ್ಗ ನಗರದಲ್ಲಿ 02 ಕೆರೆಗಳ ಲೋಕಾರ್ಪಣೆ ಮತ್ತು ಉದ್ಯಾನವನಗಳಲ್ಲಿ ಅಳವಡಿಸಿರುವ ಹೊರಾಂಗಣ ಜಿಮ್ ಪ್ರಾಧಿಕಾರದ ವಾಣಿಜ್ಯ ಸಂಕೀರ್ಣದ 2ನೇ ಅಂತಸ್ತಿನ ಕಟ್ಟಡ. ರೂ.2530 ಲಕ್ಷ ಮೊತ್ತದ ಶಿವಮೊಗ್ಗ ನಗರದ ಸಿಸಿ/ಕಾಂಕ್ರಿಟ್ ರಸ್ತೆ ಅಭಿವೃದ್ದಿ ಕಾಮಗಾರಿ. ರೂ.174 ಲಕ್ಷ ಮೊತ್ತದ ಸ್ಮಾರ್ಟ್ ಎಜುಕೇಷನ್ ಪ್ರಾಜೆಕ್ಟ್(23 ಶಾಲೆಗಳ) ಫೇಸ್-2. 

ಮೆಕ್ಕೆಜೋಳದ ಕಳೆಗೆ ಬೆಂಕಿ : ವ್ಯಕ್ತಿ ಸಾವು! ಮಗನನ್ನ ಕರೆದುಕೊಂಡು ಅತಿಥಿ ಶಿಕ್ಷಕಿ ನಾಪತ್ತೆ!

ರೂ.5800 ಲಕ್ಷದ ಕೇಂದ್ರ ಪುರಸ್ಕøತ ಅಮೃತ್ ಯೋಜನೆಯಡಿ ಶಿವಮೊಗ್ಗ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಮತ್ತು ಪುರಲೆ ಗ್ರಾಮದ ಹತ್ತಿರ 5.13 ಎಂಎಲ್‍ಡಿ ಸಾಮಥ್ರ್ಯದ ಎಸ್‍ಬಿಆರ್ ತಂತ್ರಜ್ಞಾನದ ಮಲಿನ ನೀರು ಶುದ್ದೀಕರಣ ಘಟಕ. ರೂ.700 ಲಕ್ಷದ ಅಮೃತ್ ಯೋಜನೆಯಡಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಮತ್ತು ಕೋಟೆ ರಸ್ತೆಯ ಬಿಸಿ ಲೇಡಿಸ್ ಹಾಸ್ಟೆಲ್ ಹತ್ತಿರ ಕಾಮಗಾರಿ ವೆಟ್-ವೆಲ್‍ಕಮ್ ಪಂಪು ಮನೆ. ರೂ.115 ಲಕ್ಷ ವೆಚ್ಚದ ನಗರದ 3ನೇ ಹಂತದ ಸಮಗ್ರ ಒಳಚರಂಡಿ ಯೋಜನೆಯಡಿ ಆಟೋ ಕಾಂಪ್ಲೆಕ್ಸ್ ಹತ್ತಿರ ಮತ್ತು ಸೀಗೆಹಟ್ಟಿ ಹತ್ತಿರ ವೆಟ್-ವೆಲ್ ಕಮ್ ಪಂಪು ಮನೆ. ರೂ.420 ಲಕ್ಷ ವೆಚ್ಚದ ಕೇಂದ್ರ ಪುರಸ್ಕøತ ಅಮೃತ್-1ಯೋಜನೆಯಡಿ ಶಿವಮೊಗ್ಗ ನಗರದ ನೀರು ಸರಬರಾಜು ವ್ಯವಸ್ಥೆ, ಪಂಪಿಂಗ್ ಮೆಷನರಿ ಅಳವಡಿಕೆ ಮತ್ತು ಹಳೇ ಶಿಥಿಲಾವಸ್ಥೆಯಲ್ಲಿರುವ 2 ಸಂಖ್ಯೆ ಟ್ಯಾಂಕ್ ತೆರವುಗೊಳಿಸುವ ಕಾಮಗಾರಿ. ರೂ.292 ಲಕ್ಷ ವೆಚ್ಚದ ಸರ್ಕಾರಿ ಪದವಿಪೂರ್ವ ಕಾಲೇಜು ಶಿವಮೊಗ್ಗ 12 ಕೊಠಡಿ ಮತ್ತು 04 ಶೌಚಾಲಯ. ರೂ. 700 ಲಕ್ಷದ ಶಿವಮೊಗ್ಗ ನಗರ, ಮಹಾಗಣಪತಿ ಸೇವಾ ಪ್ರತಿಷ್ಟಾನ ದೇವಾಲಯದಲ್ಲಿ ಪ್ರವಾಸಿ ತಾಣದ ಅಭಿವೃದ್ದಿ, ದ್ವಾದಶ ಜ್ಯೋತಿರ್ಲಿಂಗ ಮತ್ತು ಬಯಲು ರಂಗ ಮಂದಿರ ನಿರ್ಮಾಣ ಕಾಮಗಾರಿ. 

ಇವತ್ತು ಶಿವಮೊಗ್ಗಕ್ಕೆ ಸಿಎಂ ಬಸವರಾಜ ಬೊಮ್ಮಾಯಿರವರ ಮಹತ್ವದ ಭೇಟಿ ! ಏನೇನಿರಲಿದೆ ಕಾರ್ಯಕ್ರಮ ! ವಿವರ ಇಲ್ಲಿದೆ

ರೂ.1541.28 ಲಕ್ಷದ ಶಿವಮೊಗ್ಗ ಸರ್ಕಾರಿ ಆಯುರ್ವೇದ ವೈದ್ಯಕೀಯ ಮತ್ತು ಬೋಧನಾ ಆಸ್ಪತ್ರೆ, ಶಿವಮೊಗ್ಗ ಕಟ್ಟಡದ ಹೆಚ್ಚುವರಿ ಕಾಮಗಾರಿ ಹಾಗೂ ಇಲ್ಲಿನ ಮಹಿಳಾ ವಿದ್ಯಾರ್ಥಿಗಳ ವಸತಿ ನಿಲಯ. ರೂ.211 ಲಕ್ಷದ ಆರ್‍ಎಡಿಎಫ್-24 ಯೋಜನೆಯಡಿ ಮಂಜೂರಾಗಿರುವ ಪಶುಪಾಲನಾ ಇಲಾಖೆಯ ಕುವೆಂಪು ಬಡಾವಣೆಯಲ್ಲಿ ಪಾಲಿಕ್ಲಿನಿಕ್ ನೂತನ ಕಟ್ಟಡ ನಿರ್ಮಾಣ ಕಾಮಗಾರಿ. ರೂ.65 ಲಕ್ಷದ ನಗರದ ವಾರ್ಡ್ ನಂ 12, 17, 23, 24 ರಲ್ಲಿ ಉದ್ಘಾಟನೆಗೆ ಸಿದ್ದವಿರುವ ಅಂಗನವಾಡಿ ಕಟ್ಟಡಗಳು. ರೂ.405 ಲಕ್ಷ ಶಿವಮೊಗ್ಗ ನಗರದ ವಿವಿಧ ಭಾಗದಲ್ಲಿ ನಿರ್ಮಿಸಿದ ಸಮುದಾಯ ಭವನಗಳು. ರೂ.75 ಲಕ್ಷದ ಅಂಗನವಾಡಿ ಕಟ್ಟಡಗಳು, ರೂ.50 ಲಕ್ಷದ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಲಸಿಕಾ ಉಗ್ರಾಣ ಕೇಂದ್ರದ ಕಟ್ಟಡ. ರೂ.350 ಲಕ್ಷ ವೆಚ್ಚದ ಶಿವಮೊಗ್ಗ ನಗರದ ಊರುಗಡೂರಿನಲ್ಲಿ ನಿರ್ಮಿಸಿರುವ ಜಿಲ್ಲಾ ವಾಲ್ಮೀಕಿ ಭವನ.

ಅಂದಾಜು 2160 ಲಕ್ಷ ವೆಚ್ಚದ ಶಿವಮೊಗ್ಗ ನಗರದಲ್ಲಿನ ಅಂಗನವಾಡಿ ಕಟ್ಟಡ/ ಸರ್ಕಾರಿ ಶಾಲೆಯ ಅಭಿವೃದ್ಧಿ/ ಸ್ಮಶಾನ ಕಾಂಪೌಂಡ್/ ರಸ್ತೆ ಮತ್ತು ಬಾಕ್ಸ್ ಚರಂಡಿ/ ಬಡಾವಣೆಯಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿ. 645.92 ಲಕ್ಷ ವೆಚ್ಚದ ಶಿವಮೊಗ್ಗ ನಗರದಲ್ಲಿನ ವಿವಿಧ ವಾರ್ಡ್ ಗಳಲ್ಲಿ ರಸ್ತೆ, ಚರಂಡಿ ಮತ್ತು ಪಾರ್ಕ್ ಅಭಿವೃದ್ಧಿ ಕಾಮಗಾರಿ. 107 ಲಕ್ಷ ವೆಚ್ಚದ ಶಿವಮೊಗ್ಗ ನಗರ ವಸತಿ ಬಡಾವಣೆಗಳಲ್ಲಿ ಉದ್ಯಾನವನ ಅಭಿವೃದ್ಧಿ ಮತ್ತು ವ್ಯಾಯಾಮ ಸಾಮಾಗ್ರಿ ಅಳವಡಿಸುವ ಕಾಮಗಾರಿ. 1950 ಲಕ್ಷ ವೆಚ್ಚದ ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿ, ವಿದ್ಯಾರ್ಥಿ ನಿಲಯ ನಿರ್ಮಾಣ. 1515 ಲಕ್ಷ ವೆಚ್ಚದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದ ಅನ್ವಯ ಶಿವಮೊಗ್ಗ ನಗರದ ತುಂಗಾ ನದಿಗೆ ಸೇರುತ್ತಿರುವ ಮಲಿನ ನೀರನ್ನು ಪ್ರತಿಬಂಧಿಸುವುದು ಮತ್ತು ತಿರುಗಿಸುವ ಕಾಮಗಾರಿ. 100 ಲಕ್ಷ ವೆಚ್ಚದ ಶಿವಮೊಗ್ಗ ನಗರದ ವಾರ್ಡ್ ನಂ: 06,08,12,27,30 ರಲ್ಲಿ ಅಂಗನವಾಡಿ ಕಟ್ಟಡ ಶಂಕು ಸ್ಥಾಪನೆ. 780.5 ಲಕ್ಷ ವೆಚ್ಚದ ಶಿವಮೊಗ್ಗ ನಗರ ಸರ್ಕಾರಿ ಶಾಲೆ ಕೊಠಡಿ ನಿರ್ಮಾಣ. 785 ಲಕ್ಷ ವೆಚ್ಚದ ಬಯಲು ರಂಗಮಂದಿರ, ಸಮುದಾಯ ಭವನ, ಸಭಾ ಭವನ, ಸ್ಪೋಟ್ರ್ಸ್ ಕ್ಲಬ್ ನಿರ್ಮಾಣ ಕಾಮಗಾರಿ. 326.32 ಲಕ್ಷ ವೆಚ್ಚದ ಶ್ರೀಮತಿ ಇಂದಿರಾಗಾಂಧಿ ಮಹಿಳಾ ನಸಿರ್ಂಗ್ ವಿದ್ಯಾರ್ಥಿ ನಿಲಯದ ಸ್ವಂತ ಕಟ್ಟಡದ ಶಂಕುಸ್ಥಾಪನಾ ಸಮಾರಂಭ, ಸಾನ್ವಿ ಬಡಾವಣೆ, ಬೊಮ್ಮನಕಟ್ಟೆ, ಶಿವಮೊಗ್ಗ ಅಂದಾಜು. 150 ಲಕ್ಷ ವೆಚ್ಚದ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ರಿಜಿನಲ್ ಲಸಿಕಾ ಉಗ್ರಾಣ ಕೇಂದ್ರದ ಕಟ್ಟಡ ನಿರ್ಮಾಣ. 1062.50 ಲಕ್ಷ ವೆಚ್ಚದ ಶಿವಮೊಗ್ಗ ನಗರದ ವಿವಿಧ ವಾರ್ಡ್‍ಗಳಲ್ಲಿ ರಸ್ತೆ, ಬಾಕ್ಸ್ ಚರಂಡಿ ನಿರ್ಮಾಣ.

ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com