ಶಿವಮೊಗ್ಗದ ಎರಡು ತಾಲ್ಲೂಕುಗಳಲ್ಲಿ ವಿಪರೀತವಾದ ಕಾಡಾನೆ ಕಾಟ!

Shimoga district, Shivamogga and Hosanagara taluks are the worst affected by wild elephants

ಶಿವಮೊಗ್ಗದ ಎರಡು ತಾಲ್ಲೂಕುಗಳಲ್ಲಿ ವಿಪರೀತವಾದ ಕಾಡಾನೆ ಕಾಟ!

KARNATAKA NEWS/ ONLINE / Malenadu today/ Nov 16, 2023 SHIVAMOGGA NEWS

Shivamogga | Malnenadutoday.com |  ಶಿವಮೊಗ್ಗ ಹಾಗೂ ಹೊಸನಗರ ತಾಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ಸುಮಾರು 15 ದಿನಗಳಿಂದ ಕಾಡಾನೆಗಳು ದಾಳಿ ನಡೆಸ್ತಿವೆ. ಕಾಡಾನೆಗಳ ಹಿಂಡು ಬೆಳೆ ನಾಶ ಮಾಡುತ್ತಿದ್ದು, ರೈತರು ಫಸಲು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ   

ಶಿವಮೊಗ್ಗ ತಾಲೂಕಿನ ಆಯನೂರು ಹೋಬಳಿಯ ಮಲೇಶಂಕರ, ಮಂಜರಿಕೊಪ್ಪ, ಕೂಡಿ, ಹುಬ್ಬನಹಳ್ಳಿ ಕೆರೆ, ಸಂಪಿಗೆಹಳ್ಳ ಮೊದಲಾದ ಕಡೆಗಳಲ್ಲಿ ನಿರಂತರವಾಗಿ ಬೆಳೆ ಹಾನಿ ಮಾಡುತ್ತಿವೆ. ನಾಲ್ಕು ಆನೆಗಳು ಜಮೀನಿಗೆ ನುಗ್ಗಿ ಹಾನಿ ಮಾಡಿವೆ. ಭತ್ತ ಹಾಗೂ ಮೆಕ್ಕೆಜೋಳವನ್ನು ಹಾಳು ಮಾಡಿವೆ.

READ : ವಾಂಖೆಡೆಯಲ್ಲಿ ಮೊಹಮ್ಮದ್ ಶಮಿ ವಿಲನ್ ಆಗುತ್ತಿದ್ರು! 7 ವಿಕೆಟ್ ಬೀಳಿಸಿದ ಶಮಿ ಬಾಯ್​ಗೆ ಎದುರಾಗಿದ್ದೇನು ಗೊತ್ತಾ?

ಇನ್ನೂ ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿ ಗುಬ್ಬಿಗಾ ಗ್ರಾಮದ ಹೊರಬೈಲು, ಗಾಮನಗದ್ದೆಯಲ್ಲಿನ ಹೊಲಗಳಿಗೆ ನುಗ್ಗಿ ಭತ್ತ ಹಾಗೂ ಮೆಕ್ಕೆಜೋಳ ಬೆಳೆ ನಾಶ ಮಾಡಿವೆ ಎಂದು ವರದಿಯಾಗಿದೆ.