ಶಿವಮೊಗ್ಗ ಜಿಲ್ಲೆ ಹೊಸನಗರದ ಯಡೂರು ಸಮೀಪ ಬರುವ ಅಬ್ಬಿ ಫಾಲ್ಸ್ನಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾರೆ. ಈಜಲು ಹೋಗಿದ್ದ ಯುವಕ ನೀರು ಪಾಲಾಗಿದ್ದಾನೆ. ಇವತ್ತು ಮಧ್ಯಾಹ್ನ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮತ್ತೊಂದು ಚುನಾವಣೆಗೆ ದಿನಾಂಕ ನಿಗದಿ/ ವಿವರ ಇಲ್ಲಿದೆ
ತೀರ್ಥಹಳ್ಳಿ ಮೂಲದ ಮೂಲದ ಮೂವರು ಅಬ್ಬಿಫಾಲ್ಸ್ ನೋಡಲು ಬಂದಿದ್ದರು. ಈ ವೇಳೆ ಫಾಲ್ಸ್ನ ಕೆಳಗಡೆ ಈಜಲು ಮುಂದಾಗಿದ್ದಾರೆ. ಈ ಪೈಕಿ ಓರ್ವ ಈಜಲು ನೀರಿಗೆ ಇಳಿದವನು ಮುಳುಗಿದ್ಧಾನೆ. ಇನ್ನೂ ವಿಷಯ ಗೊತ್ತಾಗುತ್ತಲೇ ಸ್ಥಳೀಯರು ಹಾಗೂ ಪೊಲೀಸರು ಫಾಲ್ಸ್ನಲ್ಲಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಮಗುವಿನ ಚಿಕಿತ್ಸೆಗೆಂದು ಬಂದವರು ಕಾಣೆಯಾಗಿದ್ದಾರೆ/ ಇವರ ಸುಳಿವು ಸಿಕ್ಕರೆ ಮಾಹಿತಿ ನೀಡಿ
ಕೆಲಹೊತ್ತಿನ ಹುಡುಕಾಟದ ನಂತರ ಯುವಕ ಶವವಾಗಿ ಪತ್ತೆಯಾಗಿದ್ದು, , ಆತನನ್ನು ರಿಷಬ್ ಎಂದು ಗುರುತಿಸಲಾಗಿದೆ. ತೀರ್ಥಹಳ್ಳಿಯಲ್ಲಿ ಡಿಪ್ಲೋಮೋ ಓದುತ್ತಿದ್ದಾನೆ ಎಂದು ಗೊತ್ತಾಗಿದ್ದು, ಸದ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
