ಹೊಸನಗರ-ಶಿವಮೊಗ್ಗ ರೋಡ್‌ನಲ್ಲಿ ರಸ್ತೆ ಮೇಲೆ ಉರುಳಿದ ಪೆಟ್ರೋಲ್‌ ಟ್ಯಾಂಕರ್!‌ ನಡೆದಿದ್ದೇನು?

Petrol tanker falls on Hosanagara-Shivamogga road What happened?

ಹೊಸನಗರ-ಶಿವಮೊಗ್ಗ ರೋಡ್‌ನಲ್ಲಿ ರಸ್ತೆ ಮೇಲೆ ಉರುಳಿದ ಪೆಟ್ರೋಲ್‌ ಟ್ಯಾಂಕರ್!‌ ನಡೆದಿದ್ದೇನು?
Petrol tanker ̧ Hosanagara-Shivamogga road ,

Shivamogga Mar 19, 2024 ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಅಮ್ಮನಘಟ್ಟ ಸಮೀಪ ಪೆಟ್ರೋಲ್‌ ಟ್ಯಾಂಕರ್‌ ಒಂದು ಮಗುಚಿ ಬಿದ್ದಿರುವ ಘಟನೆ ಸಂಭವಿಸಿದೆ.

hosanagara



ಹೊಸನಗರ-ಶಿವಮೊಗ್ಗ ರಸ್ತೆಯ ಟರ್ನಿಂಗ್‌ನಲ್ಲಿ ಇಂದು ಬೆಳಗಿನ ಜಾವ ಟ್ಯಾಂಕರ್‌ ಪಲ್ಟಿಯಾಗಿದೆ. ನಡುರಸ್ತೆಗೆ ವಾಲಿಕೊಂಡು ಬಿದ್ದಿದೆ. ಘಟನೆಯಲ್ಲಿ ಪೆಟ್ರೋಲ್‌ ಸೋರಿಕೆಯಾಗುವ ಆತಂಕವೂ ಎದುರಾಗಿತ್ತು. ಅಷ್ಟರಲ್ಲಿ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಸಂಭವನೀಯ ಅಪಾಯವನ್ನು ತಡೆದರು. 

hosanagara

ಮಂಗಳೂರಿನಿಂದ ಬಳ್ಳಾರಿ ಜಿಲ್ಲೆ  ಕೂಡ್ಲಿಗಿಗೆ  ಪೆಟ್ರೋಲ್‌ ಸಾಗಿಸುತ್ತಿದ್ದ ಲಾರಿ ಹೊಸನಗರ ತಲುಪಿದ ಬೆನ್ನಲ್ಲೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಅಲ್ಲದೆ ಘಟನೆಯಲ್ಲಿ ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ. 

hosanagara

ಹೊಸನಗರದಲ್ಲಿ ನಡೆದ ಘಟನೆ