ಮತ್ತೂರು ರೋಡಲ್ಲಿ ಸ್ಕೂಲ್ ಬಸ್ ಅವಾಂತರ! ಸೈಕಲ್​ ಸಮೇತ ಕಾಲುವೆಗೆ ಬಿದ್ದ ಸವಾರ

An FIR has been registered in connection with an incident where a school bus collided with a bicycle on Mathur Road ಮತ್ತೂರು ರೋಡ್​ನಲ್ಲಿ ಸೈಕಲ್​ಗೆ ಶಾಲೆ ಬಸ್ ಡಿಕ್ಕಿ ಹೊಡೆದ ಘಟನೆಯೊಂದರ ಸಂಬಂಧ ಎಫ್ಐಆರ್ ದಾಖಲಾಗಿದೆ

ಮತ್ತೂರು ರೋಡಲ್ಲಿ ಸ್ಕೂಲ್ ಬಸ್ ಅವಾಂತರ! ಸೈಕಲ್​ ಸಮೇತ ಕಾಲುವೆಗೆ ಬಿದ್ದ ಸವಾರ

KARNATAKA NEWS/ ONLINE / Malenadu today/ Nov 9, 2023 SHIVAMOGGA NEWS

Shivamogga  | ಶಿವಮೊಗ್ಗದ ಮತ್ತೂರು-ಎನ್​ಟಿ ರೋಡ್​ನಲ್ಲಿ ಬಸ್​ವೊಂದು ಡಿಕ್ಕಿ ಹೊಡೆದ ಪರಿಣಾಮ ಸೈಕಲ್​ ಸವಾರ ಕಾಲುವೆಗೆ ಬಿದ್ದ ಘಟನೆ ನಡೆದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲಾಗಿದೆ. 

ಹಳೆಹೊನ್ನಾಪುರದಲ್ಲಿ ವ್ಯಕ್ತಿಯೊಬ್ಬರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಗಾಜನೂರು ನಿವಾಸಿಯೊಬ್ಬರು ಸಂಜೆ ನಾಲ್ಕು ಮುಕ್ಕಾಲರ ಹೊತ್ತಿಗೆ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ರು. ಈ ವೇಳೆ ಮತ್ತೂರಿನಿಂದ ತೀರ್ಥಹಳ್ಳಿ ರಸ್ತೆಗೆ ಹೋಗುವ ದಾರಿಯಲ್ಲಿ ಶಾಲೆ ಬಸ್​ವೊಂದನ್ನ ಅದರ ಡ್ರೈವರ್ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ. 

READ : ಹೊಳೆಹೊನ್ನೂರು ಸಮೀಪ ಪಲ್ಟಿಯಾಗಿ ಗದ್ದೆಗೆ ಉರುಳಿದ ಖಾಸಗಿ ಬಸ್!



ಅಲ್ಲದೆ, ದೂರುದಾರರ ಸೈಕಲ್​ಗೆ ಬಸ್​ ಡಿಕ್ಕಿ ಯಾಗಿದೆ. ಪರಿಣಾಮ ಸೈಕಲ್​ ಸಮೇತ ದೂರುದಾರರು ಕಾಲುವೆಗೆ ಬಿದ್ದಿದ್ದಾರೆ. ಘಟನೆ ನಡೆದ ಬೆನ್ನಲ್ಲೆ ಸ್ಥಳೀಯರು ಸೈಕಲ್​ ಸವಾರನನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಈ ಸಂಬಂಧ ಕೇಸ್ ದಾಖಲಾಗಿದೆ.