ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು- ಸಂಚಾರಿ ಪಶು ಚಿಕಿತ್ಸಾ ಅಂಬುಲೆನ್ಸ್ ಯೋಜನೆ “ಇನ್ನು ನೆನಪು ಮಾತ್ರವೇ”

ಕಳೆದ ಮೂರು ತಿಂಗಳ ಹಿಂದೆ ಶೋ ರೂಂ ನಿಂದ ಬಿಡುಗಡೆಗೊಂಡು ಆಯಾ ಜಲ್ಲೆಯ, ಹೋಬಳಿ ತಾಲುಕು ವ್ಯಾಪ್ತಿಯ ಕಛೇರಿ ಸೇರಿದ ಅಂಬುಲೆನ್ಸ್ ಗಳು ಇನ್ನು ನೆನಪು ಮಾತ್ರ ಎಂಬಂತ ಸಂದೇಶ ರವಾನಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು- ಸಂಚಾರಿ ಪಶು ಚಿಕಿತ್ಸಾ ಅಂಬುಲೆನ್ಸ್ ಯೋಜನೆ “ಇನ್ನು ನೆನಪು ಮಾತ್ರವೇ”

ತುರ್ತು ಯೋಜನೆ ನೆನೆಗುದಿಗೆ

ರೈತರ ಜಾನುವಾರುಗಳ ತುರ್ತು ಸೇವೆಗೆ ಮನೆ ಬಾಗಿಲಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಜಾರಿಗೆ ಬಂದ ಯೋಜನೆ ನೆನೆಗುದಿಗೆ ಬಿದ್ದಿದೆ. ಕೇಂದ್ರ ಸರ್ಕಾರದ ಅನುದಾನದೊಂದಿಗೆ ಆರಂಭಿಸಿದ ಸಂಚಾರಿ ಪಶು ಚಿಕಿತ್ಸಾ ಅಂಬುಬುಲೆನ್ಸ್‌ ಗಳು ರಾಜ್ಯದೆಲ್ಲೆಡೆ ಚಾಲಕರು ಇಲ್ಲದೆ ಶೆಡ್ ಸೇರಿಕೊಂಡಿವೆ. ಕಳೆದ ಮೂರು ತಿಂಗಳ ಹಿಂದೆ ಶೋ ರೂಂ ನಿಂದ  ಬಿಡುಗಡೆಗೊಂಡು ಆಯಾ ಜಲ್ಲೆಯ, ಹೋಬಳಿ ತಾಲುಕು ವ್ಯಾಪ್ತಿಯ ಕಛೇರಿ ಸೇರಿದ ಅಂಬುಲೆನ್ಸ್ ಗಳು ಇನ್ನು ನೆನಪು ಮಾತ್ರ ಎಂಬಂತ ಸಂದೇಶ ರವಾನಿಸುತ್ತಿದೆ.

ಇದನ್ನು ಸಹ ಓದಿ : ರೈತರೇ ಎಚ್ಚರ, ಜೇಡಿಮಣ್ಣು ಕೊಟ್ಟು ಗೊಬ್ಬರ ಅಂತಾರೆ ...ಹುಷಾರ್..ಇಲ್ಲಿದೆ ನೋಡಿ ಸಾಕ್ಷಿ 

ಹೌದು ಕೇಂದ್ರ ಸರ್ಕಾರ ದೇಶಾದ್ಯಂತ 4000 ಸಂಚಾರಿ ಪಶು ಚಿಕಿತ್ಸಾ ವಾಹನ ಸೇವೆ ಆರಂಭಿಸಲು ಉದ್ದೇಶಿಸಿದ್ದು, ಕರ್ನಾಟಕಕ್ಕೆ 280  ಆಂಬುಲೆನ್ಸ್ ವಾಹನ ಮಂಜೂರು ಮಾಡಿತ್ತು. ಈ ಪೈಕಿ ಮೊದಲ ಹಂತದಲ್ಲಿ ಸುಸಜ್ಜಿತ 70 ವಾಹನಗಳನ್ನು ವಿಧಾನಸೌಧ  ಆವರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ಲೋಕಾರ್ಪಣೆ ಮಾಡಿದ್ದರು. ಅಂದು ಬಜೆಟ್ ನಲ್ಲಿ ಜೀವ ಪಡೆದ ಮಹತ್ವಾಕಾಂಕ್ಷಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳದೆ ಶೋ ರೂಂ ರಿಲೀಸ್ ವಾಹನಗಳು, ಇಲಾಖಾ ಕಚೇರಿ ಆವರಣದಲ್ಲಿ ಅನಾಥವಾಗಿವೆ..ಕೇವಲ ಪಶು ಸಂಗೋಪನಾ ಇಲಾಖೆಯ ಟೋಲ್‌ ಫ್ರೀ ಸಂಖ್ಯೆ 1962ಕ್ಕೆ ಕರೆ ಮಾಡಿದ್ರೆ ಸಾಕು, ಜಾನುವಾರು ಇದ್ದ ಸ್ಥಳದಲ್ಲೇ ಪಶು ವೈದ್ಯರ ಸೇವೆ ಲಭಿಸುತ್ತದೆ. ದನ, ಎಮ್ಮೆ, ಕುರಿ, ಮೇಕೆ, ಹಂದಿಗಳು ಅನಾರೋಗ್ಯ ಸೇರಿದಂತೆ ಬೇರೆ ರೀತಿಯ ಸಮಸ್ಯೆಗೆ ಸಿಲುಕಿದಾಗ ರೈತರು, ಸಾಕಣೆ ಮಾಡುವವರು, ಹೈನುಗಾರಿಕೆಯಲ್ಲಿ ತೊಡಗಿರುವವರು ಕರೆ ಮಾಡಿ ವಿಷಯ ತಿಳಿಸಿದರೆ, ಸಂಬಂಧಪಟ್ಟ ವೈದ್ಯರು ನೆರವಿಗೆ ಬರುತ್ತಾರೆ.

ಇದನ್ನು ಸಹ ಓದಿ : ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್​ - ಎಂಜಿಆರ್​ ಚೆನ್ನೈ ಸೆಂಟ್ರಲ್ ಸ್ಪೆಷಲ್​ ಟ್ರೈನ್​ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ

ರಾಜ್ಯ ಸರ್ಕಾರದ ಅನುದಾನದಿಂದ ಈಗಾಗಲೇ ಪಶು ಸಂಜೀವಿನಿ ಹೆಸರಿನಲ್ಲಿ ಜಾನುವಾರುಗಳಿಗೆ ತುರ್ತು ಸೇವೆ ನೀಡಲಾಗುತ್ತಿದೆಯಾದ್ರೂ, ಇದೇ ಮಾದರಿ ಸೇವೆಯನ್ನು ಹೊಸ ವಾಹನಗಳು ನೀಡಲಿವೆ ಎನ್ನಲಾಗಿತ್ತು. ಈ ಸಂಚಾರಿ ವಾಹನದಲ್ಲಿ ಒಬ್ಬ ವೈದ್ಯ, ಒಬ್ಬ ಸಹಾಯಕರು ಇರುತ್ತಾರೆ. ಚಿಕಿತ್ಸೆಗೆ ಬೇಕಾದ ಔಷಧಿ, ಪ್ರಾಥಮಿಕ ಚಿಕಿತ್ಸೆ, ಸಣ್ಣ ಆಪರೇಷನ್‌ ಮಾಡುವಂತಹ ಸೌಲಭ್ಯಗಳನ್ನು ಈ ವಾಹನ ಒಳಗೊಂಡಿರುತ್ತದೆ

ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ಇನ್ನು ಕೆಲವು ಜಿಲ್ಲೆಗಳಲ್ಲಿ ಆರ್.ಟಿ.ಓ ರಿಜಿಸ್ಟ್ರೇಷನ್ ಆಗಿಲ್ಲ.

ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ತರಾತುರಿಯಲ್ಲೇನೋ ಜಾರಿಗೆ ಬಂತು. ಆದರಂತೆ ರಾಜ್ಯಾದ್ಯಂತ ಹೊಸ ಅಂಬುಲೆನ್ಸ್ ವಾಹನಗಳು ರಸ್ತೆಗಿಳಿದು ಶೆಡ್ ಸೇರಿಕೊಂಡವು ನಿಜ. ಆದ್ರೆ ಕೆಲವು ಜಿಲ್ಲೆಗಳಲ್ಲಿ ಅಂಬುಲೆನ್ಸ್  ವಾಹನಗಳಿಗೆ ಇನ್ನು ರಿಜಿಸ್ಟ್ರೇಷನ್ ಕೂಡ ಆಗಿಲ್ಲ. ಪಶು ಸಂಗೋಪನಾ ಇಲಾಖೆಯವರು  ವಾಹನದ ವಿಮಾ ಮೊತ್ತವನ್ನು ರಾಜ್ಯ ಸರ್ಕಾರಿ ಸ್ವಾಮ್ಯದ ಕೆ.ಜಿ.ಐ.ಡಿಗೆ ಕೊಟ್ಟಿದೆ. ಆದರೆ ಇದುವರೆಗೂ ಅದಕ್ಕೆ ಸಂಬಂಧ ಪಟ್ಟಂತ ವಿಮಾ ಪಾಲಿಸಿ ಇಲಾಖೆಯ ಕೈ ಸೇರಿಲ್ಲ. ವಿಮಾ ಪಾಲಿಸಿ ಇಲ್ಲದೆ ಆರ್.ಟಿ.ಓ ಅಧಿಕಾರಿಗಳು ನೊಂದಣಿ ಮಾಡಲು ಸಾಧ್ಯವಾಗುತ್ತಿಲ್ಲ. ನೊಂದಣಿಗೆ ಅಗತ್ಯವಿರುವ ಶುಲ್ಕ ಪಾವತಿಸಲು ಪಶು ಸಂಗೋಪನಾ ಇಲಾಖೆ ಸಿದ್ದವಿದೆ.ಆದರೆ ಕೆ.ಜಿ.ಐ.ಡಿ ಅಸಹಕಾರದಿಂದಾಗಿ ಅದು ಕೈ ಗೂಡಿಲ್ಲ. 

ಇದನ್ನು ಸಹ ಓದಿ : ಶಿವಮೊಗ್ಗದ ಕಾಚಿನ ಕಟ್ಟೆ ಸಮೀಪ ಬೈಕ್​ ಕಾರು ಡಿಕ್ಕಿ/ ಸವಾರನ ಕಾಲು ಕಟ್

ಇನ್ನು ಹೊರಗುತ್ತಿಗೆಯಲ್ಲಿ ವೈದ್ಯರು ಸಿಬ್ಬಂದಿಗಳು ಹಾಗು ಚಾಲಕರ ನೇಮಕವಾಗಿಲ್ಲ.

ಇನ್ನು ಸಂಚಾರಿ ಆಂಬುಲೆನ್ಸ್ ನಲ್ಲಿ ಸೇವೆ ಸಲ್ಲಿಸುವ ವೈದ್ಯರು, ಹಾಗು ಸಹಾಯಕ ಹಾಗು ಆಂಬುಲೆನ್ಸ್ ಚಾಲಕರ ನೇಮಕವಾಗಿಲ್ಲ. ರಾಜ್ಯಾದ್ಯಂತ ಎರಡು ಬಾರಿ ಹೊರ ಗುತ್ತಿಗೆ ಆಧಾರದಲ್ಲಿ ಟೆಂಡರ್ ಕರೆದರೂ, ಅದು ಯಾಕೆ ಓಕೆ ಆಗಿಲ್ಲವೋ ಗೊತ್ತಿಲ್ಲ. ಟೆಂಡರ್ ಪ್ರಕ್ರೀಯೇ ಪೂರ್ಣಗೊಳ್ಳದ ಹೊರತು ಯೋಜನೆ ಜಾರಿಗೊಳ್ಳುವುದು ಕಷ್ಟಸಾಧ್ಯ. ಇದು ತಾರಾತುರಿಯ ಯೋಜನೆ ಅಲ್ಲದೆ ಮತ್ತೇನು ಅಲ್ಲ ಎಂಬುದು ಮೇಲ್ನೋಟಕ್ಕೆ ಸಾಭೀತಾಗುತ್ತದೆ. 

ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್​ಪೋಸ್ಟ್​ನಲ್ಲಿ 46 ಕೇಸ್​/ ಏನಿದು? ವಿವರ ನೋಡಿ

ಮೂಕ ಪ್ರಾಣಿಗಳಿಗೆ ಮನೆ ಬಾಗಿಲಲ್ಲಿ  ಚಿಕಿತ್ಸೆ ನೀಡಬೇಕೆಂಬ ಉದ್ದೇಶ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ. ಆದರೆ ಈ ಪೈಲಟ್ ಪ್ರಾಜೆಕ್ಟ್ ಕರ್ನಾಟಕ ರಾಜ್ಯದಲ್ಲಿಯೇ ಕಡೆಗಣಿಸಲ್ಪಟ್ಟಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಡಬಲ್ ಇಂಜಿನ್ ಸರ್ಕಾರದಲ್ಲಿ ಈ ಯೋಜನೆ ಈ ರೀತಿ ಕಡೆಗಣಿಸಲ್ಪಟ್ಟಿರುವುದಕ್ಕೆ ಜಾನುವಾರು ಮಾಲೀಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸರ್ಕಾರ ಪ್ರಧಾನಿಯವರ ಕನಸಿನ ಯೋಜನೆಯನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಬೇಕಿದೆ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?