ಅಪಾರ್ಟ್ಮೆಂಟ್‌ನಲ್ಲಿ ರಿಲಯೆನ್ಸ್‌ & ಟಾಟಾ ಗೋಲ್ಡ್‌ ಬಿಸ್ಕೆಟ್‌ ಕಳ್ಳತನ|15 ಲಕ್ಷಕ್ಕೂ ಹೆಚ್ಚು ಮೌಲ್ಯದ ವಜ್ರಾಭರಣ ಕಳವು | ಬೆಡ್‌ರೂಂ ಘಟನೆಗೆ ಕಾರಣವೇ ನಿಗೂಢ

Diamond jewellery worth over Rs 15 lakh, including Reliance & Tata Gold biscuits, stolen from apartment

ಅಪಾರ್ಟ್ಮೆಂಟ್‌ನಲ್ಲಿ  ರಿಲಯೆನ್ಸ್‌ & ಟಾಟಾ ಗೋಲ್ಡ್‌ ಬಿಸ್ಕೆಟ್‌ ಕಳ್ಳತನ|15 ಲಕ್ಷಕ್ಕೂ ಹೆಚ್ಚು ಮೌಲ್ಯದ ವಜ್ರಾಭರಣ ಕಳವು | ಬೆಡ್‌ರೂಂ ಘಟನೆಗೆ ಕಾರಣವೇ ನಿಗೂಢ
Reliance & Tata Gold biscuits

Shivamogga Apr 17, 2024   ಶಿವಮೊಗ್ಗ ನಗರದ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ವಿಚಿತ್ರ ರೀತಿಯಲ್ಲಿ ಮನೆಗಳ್ಳತನ ಪ್ರಕರಣವೊಂದು ನಡೆದಿದೆ. ವಜ್ರ, ಚಿನ್ನ, ಬೆಳ್ಳಿ ಹಾಗೂ ಕ್ಯಾಶ್‌ ಇದ್ದ  ಸೂಟ್ಕೆಸ್‌ವೊಂದು ಅಪಾರ್ಟ್ಮೆಂಟ್‌ನಲ್ಲಿರುವ ಮನೆಯೊಂದರಲ್ಲಿ ಕಳ್ಳತನವಾಗಿದ್ದು ಈ ಸಂಬಂಧ ಕೇಸ್‌ ಸಹ ದಾಖಲಾಗಿದೆ. 

ಏನಿದು ಪ್ರಕರಣ

ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯ ಗುರುಪುರದಲ್ಲಿರುವ ಅಪಾರ್ಮೆಂಟ್‌ನಲ್ಲಿ ವಾಸವಿರುವ ಕುಟುಂಬವೊಂದು ತಮ್ಮಲ್ಲಿನ ಚಿನ್ನಾಭರಣ ಹಾಗೂ ಹಣವನ್ನು ಸೂಟ್ಕೆಸ್‌ವೊಂದರಲ್ಲಿ ಭದ್ರವಾಗಿಟ್ಟಿದ್ದರು.  ಕಳೆದ 13-03-2024 ರಂದು ತಮ್ಮ ಮನೆಯ ಬೆಡ್‌ರೂಂನಲ್ಲಿ ಸೂಟ್ಕೆಸ್‌ ಇರುವುದನ್ನ ಕುಟುಂಬಸ್ಥರು ಖಚಿತಪಡಿಸಿಕೊಂಡಿದ್ದರು. ಆದರೆ 13-04-2024 ರಂದು ಏತಕ್ಕೋ ಬೇಕಾಗಿ ಸೂಟ್ಕೆಸ್‌ನ್ನ ಹುಡುಕಿದರೆ ಬೆಡ್‌ರೂಂನಲ್ಲಿ ಅದು ಪತ್ತೆಯಾಗಿಲ್ಲ. ಈ ಒಂದು ತಿಂಗಳ ಅವಧಿಯಲ್ಲಿ ಏನಾಯ್ತೋ ಏನೋ ಗೊತ್ತಿಲ್ಲ. ಆದರೆ ಸುಮಾರು 15 ಲಕ್ಷಕ್ಕೂ ಅಧಿಕ ಮೌಲ್ಯ ಚಿನ್ನ, ವಜ್ರ, ಬೆಳ್ಳಿ ಮತ್ತು ಕ್ಯಾಶ್‌ ಕಳ್ಳತನವಾಗಿದೆ. ಇದೀಗ ಕುಟುಂಬಸ್ಥರು ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ ಮೊರೆಹೋಗಿದ್ದು ದೂರು ಕೊಟ್ಟಿದ್ದಾರೆ.