ಮಾರಿಕಾಂಬಾ ದೇವಸ್ಥಾನಕ್ಕೆ ಹೋಗ್ತೀನಿ ಎಂದು ತೆರಳಿದ್ದ ವಿದ್ಯಾರ್ಥಿನಿ ಕಿಡ್ನ್ಯಾಪ್?‌ ಪಾರಿವಾಳದ ವಿಚಾರಕ್ಕೆ ಇಟ್ಟಿಗೆಯಿಂದ ಹಲ್ಲೆ

Student kidnapped while she was on her way to Marikamba temple? Man attacked with brick over pigeon issue

ಮಾರಿಕಾಂಬಾ ದೇವಸ್ಥಾನಕ್ಕೆ ಹೋಗ್ತೀನಿ ಎಂದು ತೆರಳಿದ್ದ ವಿದ್ಯಾರ್ಥಿನಿ ಕಿಡ್ನ್ಯಾಪ್?‌ ಪಾರಿವಾಳದ ವಿಚಾರಕ್ಕೆ ಇಟ್ಟಿಗೆಯಿಂದ ಹಲ್ಲೆ
Marikamba temple

shivamogga Mar 16, 2024  ಪಾರಿವಾಳ ಕದ್ದ ಆರೋಪ ಹೊರಿಸಿ ಹಲ್ಲೆ ಮಾಡಿದ ಸಂಬಂಧ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು  ಶಿಕಾರಿಪುರ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ Shikaripura Rural Police Station ನಲ್ಲಿ   IPC 1860 (U/s-504,324) ಅಡಿಯಲ್ಲಿ ಕೇಸ್‌ ದಾಖಲಾಗಿದೆ. 

ಇಲ್ಲಿನ ಗ್ರಾಮವೊಂದರ ದೇವಸ್ಥಾನದ ಬಳಿ ಪ್ರಕರಣದ ದೂರುದಾರರು ಕುರಿಬಿಟ್ಟುಕೊಂಡು ಕುಳಿತಿದ್ದಾಗ, ಅವರ ಬಳಿ ಬಂದ ಆರೋಪಿ ಪಾರಿವಾಳವೊಂದನ್ನ ತೋರಿಸಿ ಎಷ್ಟು ಪಾರಿವಾಳ ಕದ್ದೀದ್ದಿರಿ ಎಂದಿದ್ದಾರೆ. ಅದಕ್ಕೆ ದೂರುದಾರರು ನಾವು ಪಾರಿವಾಳ ತಿನ್ನುವವರಲ್ಲ ನಾವ್ಯಾಕೆ ಕದಿಯುತ್ತೇವೆ ಎಂದಿದ್ದಾರೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಆರೋಪಿ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಗಾಯಗೊಂಡ ದೂರುದಾರರನ್ನ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ಅಡ್ಮಿಟ್‌ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಈ ನಡುವೆ ಪ್ರಕರಣ ಸಂಬಂಧ ದೂರು ದಾಖಲಾಗಿದೆ.  

ಮಾರಿಜಾತ್ರೆಗೆ ಹೋಗಿ ಬರುತ್ತೇನೆ ಎಂದು ಹೋದವರು ನಾಪತ್ತೆ 

ಇನ್ನೊಂದೆಡೆ ಶಿವಮೊಗ್ಗದಲ್ಲಿ ಮಾರಿಜಾತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ವಿದ್ಯಾರ್ಥಿನಿಯೊಬ್ಬರು ಕಿಡ್ನ್ಯಾಪ್‌ ಆಗಿರುವ ಬಗ್ಗೆ ಪೋಷಕರು ಗಾಬರಿಗೊಂಡು ಪೊಲೀಸ್‌ ಸ್ಟೇಷನ್‌ ಒಂದರಲ್ಲಿ ದೂರು ದಾಖಲಿಸಿದ್ದಾರೆ.ಈ ಬಗ್ಗೆ  ಎಫ್‌ಐಆರ್‌ ದಾಖಲಾಗಿದೆ.  ಕೋಟೆ ಮಾರಿಕಾಂಬಾ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ರಾತ್ರಿ 11:00 ಗಂಟೆಯಾದರೂ ವಾಪಸ್ ಮನೆಗೆ ಬಂದಿಲ್ಲ. ಆ ಬಳಿಕ ವಿಚಾರಿಸಿದಾಗ ಆಕೆಯನ್ನು ಯುವಕನೊಬ್ಬ ಕಾರೊಂದರಲ್ಲಿ ಕಿಡ್ನ್ಯಾಪ್‌ ಮಾಡಿರುವ ಬಗ್ಗೆ ಪೋಷಕರು ದೂರು ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಕೇಸ್‌ ದಾಖಲಿಸಿದ್ದಾರೆ. .