shivamogga Mar 16, 2024 Kumsi Police Station ,Ayanur, Shimoga ಒಣ ಹಾಕಿದ ಬಟ್ಟೆ ತೆಗೆದು ಮಡಚಿ ಬೀರುವಿನಲ್ಲಿ ಇಡಲು ಹೋಗಿದ್ದ ವೇಳೆ ಬೀರುವಿನಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿರುವ ವಿಷಯ ಗೊತ್ತಾಗಿ ಶಿವಮೊಗ್ಗದ ಕುಂಸಿ ಪೊಲೀಸ್ ಸ್ಟೇಷನ್ ಗೆ ವ್ಯಕ್ತಿಯೊಬ್ಬರು ದೂರುಕೊಟ್ಟಿದ್ದಾರೆ. ಈ ಸಂಬಂಧ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಆಯನೂರಿನಲ್ಲಿ ಘಟನೆ ನಡೆದಿದ್ದು, ಇಲ್ಲಿನ ನಿವಾಸಿಯೊಬ್ಬರು ಹಾನಗಲ್‌ಗೆ ಹೋಗಿ ಮನೆಗೆ ವಾಪಸ್ ಆಗಿದ್ದರು. ಮರುದಿನ ಅವರ ಪತ್ನಿ ಹೇಳಿದಂತೆ ಒಣ ಹಾಕಿದ್ದ ಬಟ್ಟೆ ಮಡಚಿ ಬೀರುವಿನಲ್ಲಿ ಇಡಲು ಹೋಗಿದ್ದಾರೆ. ಈ ವೇಳೆ ಬೀರುವಿನ ಲಾಕ್ ಓಪನ್ ಆಗಿರುವುದು ಕಾಣಿಸಿದೆ. ಅನುಮಾನಗೊಂಡು ಪರಿಶೀಲಿಸಿದ್ದಾರೆ. ಮನೆಯ ಹಂಚು ಸರಿಸಿರುವುದು ಕಂಡುಬಂದಿದೆ. ಅಲ್ಲದೆ ಬೀರುವಿನಲ್ಲಿದ್ದ ಒಟ್ಟು ಮೌಲ್ಯ 2,13,000/-ರೂ ಹಾಗು ನಗದು 30,000 ರೂಪಾಯಿ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
.
