ಶಿವಮೊಗ್ಗಕ್ಕೆ ನಿತಿನ್ ಗಡ್ಕರಿ! ಸಿಗಂದೂರು ಸೇತುವೆ, ನೆಲ್ಲಿಸರ ಕ್ಯಾಂಪ್‌-ತೀರ್ಥಹಳ್ಳಿ, ತ್ಯಾವರೆಕೊಪ್ಪ- ತಾಳಗುಪ್ಪ ಚತುಷ್ಪಥ ರಸ್ತೆ ಬಗ್ಗೆ ಸಂಸದರ ಮಹತ್ವದ ಹೇಳಿಕೆ

Nitin Gadkari to visit Shimoga Mp's important remarks on Sigandur Bridge, Nellisar Camp-Thirthahalli, Thyavarekoppa-Talaguppa four-lane road

ಶಿವಮೊಗ್ಗಕ್ಕೆ ನಿತಿನ್ ಗಡ್ಕರಿ! ಸಿಗಂದೂರು ಸೇತುವೆ, ನೆಲ್ಲಿಸರ ಕ್ಯಾಂಪ್‌-ತೀರ್ಥಹಳ್ಳಿ, ತ್ಯಾವರೆಕೊಪ್ಪ- ತಾಳಗುಪ್ಪ ಚತುಷ್ಪಥ ರಸ್ತೆ ಬಗ್ಗೆ ಸಂಸದರ ಮಹತ್ವದ ಹೇಳಿಕೆ

SHIVAMOGGA|  Dec 18, 2023  |   ಶಿವಮೊಗ್ಗದಲ್ಲಿ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ ಸಂಸದ ಬಿ.ವೈ.ರಾಘವೇಂದ್ರರವರು ಜಿಲ್ಲೆಗೆ ಶೀಘ್ರವೇ ಕೇಂದ್ರ ಸಚಿವ ನಿತಿನ್ ಗಡ್ಕರಿ (nitin gadkari)  ಭೇಟಿ ನೀಡುವ ಬಗ್ಗೆ ಮಾಹಿತಿ ನೀಡಿದ್ರು. ಸಂಸದರು ಮಾಧ್ಯಮಗಳ ಜೊತೆಗೆ ಹಂಚಿಕೊಂಡ ವಿವಿಧ ಕಾಮಗಾರಿಗಳ ಮಾಹಿತಿ ಇಲ್ಲಿದೆ/ 

ಜಿಲ್ಲೆಯಲ್ಲಿ ₹2,138 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಲಿದ್ದು, ಸದ್ಯದಲ್ಲಿಯೆ ಅವರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. 

ಈ ವೇಳೆ  ₹ 139 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಕೇಂದ್ರ ಸಚಿವರು ಉದ್ಘಾಟಿಸಲಿದ್ದಾರೆ ಎಂದು ಬಿ.ವೈ.ರಾಘವೇಂದ್ರವರು ತಿಳಿಸಿದ್ದಾರೆ. 

ಕಳಸವಳ್ಳಿ-ಸಿಗಂದೂರು ಸೇತುವೆ ಸಂಪರ್ಕ ರಸ್ತೆಗೆ ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದ ಬಿವೈಆರ್​ ಹಿನ್ನೀರು ಹೆಚ್ಚಿದ್ದರೂ, ಕಡಿಮೆ ಇದ್ದರೂ ಕಾಮಗಾರಿ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಸಚಿವರನ್ನೆ ಸ್ಥಳಕ್ಕೆ ಕರೆದೊಯ್ದು ಪರಿಶೀಲಿಸಲಾಗುವುದು ಎಂದಿದ್ಧಾರೆ. 

ನೆಲ್ಲಿಸರ ಕ್ಯಾಂಪ್‌ನಿಂದ ತೀರ್ಥಹಳ್ಳಿವರೆಗೆ ಹಾಗೂ ತ್ಯಾವರೆಕೊಪ್ಪದ ಹುಲಿ–ಸಿಂಹಧಾಮದಿಂದ ತಾಳಗುಪ್ಪದವರೆಗೆ ದ್ವಿಪಥ ರಸ್ತೆಗಳನ್ನು ಚತುಷ್ಪಥ ರಸ್ತೆಗಳನ್ನಾಗಿ ವಿಸ್ತರಿಸುವ ಕಾಮಗಾರಿಗೆ  ಶಂಕುಸ್ಥಾಪನೆ ನೆರವೇರಿಸಲಾಗುವುದು. 

ಜನವರಿ 15 ರೊಳಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಹತ್ವದ ಕೆಲಸ ಪೂರ್ಣ | ಸಂಸದ ಬಿ.ವೈ.ರಾಘವೇಂದ್ರ

ಬೈಂದೂರು-ರಾಣೆಬೆನ್ನೂರು ವಿಭಾಗದಲ್ಲಿ ₹ 19.77 ಕೋಟಿ ವೆಚ್ಚದಲ್ಲಿ ಸೇತುವೆಗಳು, ಶಿವಮೊಗ್ಗ-ಮಂಗಳೂರು ರಸ್ತೆಯಲ್ಲಿ ತುಂಗಾ ನದಿ ಸೇತುವೆ, ಶಿವಮೊಗ್ಗ-ಚಿತ್ರದುರ್ಗ ನಡುವಿನ ರೈಲ್ವೆ ಮೇಲ್ಸೇತುವೆ (ಡಿಸೆಂಬರ್ ಅಂತ್ಯದೊಳಗೆ ಪೂರ್ಣ), ಶಿವಮೊಗ್ಗ ಬೈಪಾಸ್‌ನಲ್ಲಿ ತುಂಗಾನದಿಗೆ ಸೇತುವೆ ಕಾಮಗಾರಿ ಮುಕ್ತಾಯಗೊಂಡು ಉದ್ಘಾಟನೆಗೆ ಸಿದ್ಧವಾಗಿವೆ ಎಂದು ತಿಳಿಸಿದ್ದಾರೆ. 

 

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 265 ಬಿಎಸ್‌ಎನ್‌ಎಲ್ ಟವರ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದರಲ್ಲಿ 100 ಟವರ್‌ಗಳನ್ನು 2024ರ ಏಪ್ರಿಲ್‌ನೊಳಗೆ ಅಳವಡಿಸುವಂತೆ ದೂರ ಸಂಪರ್ಕ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.