SHIVAMOGGA| Dec 18, 2023 | ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ (B.Y. Raghavendra) ಮತ್ತೊಂದು ಅಪ್ಡೇಟ್ ನೀಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಈ ಬಗ್ಗೆ ಮಾತನಾಡಿದ ಅವರು ಇದೇ ಜನವರಿ 15 ರೊಳಗೆ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಕೆಲಸವೊಂದು ಪೂರ್ಣಗೊಳ್ಳಲಿದೆ ಎಂದಿದ್ದಾರೆ.
ಸಂಸದ ಬಿ.ವೈ.ರಾಘವೇಂದ್ರ
ಫೆ.27ರಂದು ಉದ್ಘಾಟನೆಗೊಂಡ ವಿಮಾನ ನಿಲ್ದಾಣದಿಂದ ಬೆಂಗಳೂರು, ಹೈದರಾಬಾದ್, ಗೋವಾ ಮತ್ತು ತಿರುಪತಿಗೆ ವಿಮಾನಯಾನ ಸೇವೆ ಆರಂಭಗೊಂಡಿದೆ.
ಜನವರಿಗೆ 15ರೊಳಗೆ ರಾತ್ರಿ ವೇಳೆಯಲ್ಲಿಯು ವಿಮಾನವನ್ನು ಇಳಿಸಲು ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರರವರು ಹೇಳಿದ್ದಾರೆ.
ಮಂಜು ಮುಸುಕಿದ ವಾತಾವರಣದಿಂದಾಗಿ ವಿಮಾನಗಳ ಹಾರಾಟ ಹಾಗೂ ಲ್ಯಾಂಡಿಂಗ್ಗೆ ಸಮಸ್ಯೆಯಾಗುತ್ತಿದೆ. ಈ ಸಂಬಂಧ ಕೇಂದ್ರ ಮಂತ್ರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ.
5 ಸಾವಿರ ಅಡಿಯಿಂದ ಕೆಳಗೆ ಕಾಣಿಸಲು ಅಗತ್ಯವಾಗಿ ಬೇಕಾಗಿದ್ದ ಉಪಕರಣಗಳು ಅಳವಡಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ರು
READ : ಶಿವಮೊಗ್ಗ ಸಿಟಿಯಲ್ಲಿಯೇ ತುಂಗಾ ನದಿಗೆ ನಾಲ್ಕನೇ ಸೇತುವೆ ನಿರ್ಮಾಣ! ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ
ಕುವೆಂಪು ವಿಮಾನ ನಿಲ್ದಾಣ
ಇನ್ನೂ ಇದೇ ವೇಳೆ ಕೇಂದ್ರ ಸರ್ಕಾರ, ಬರುವ 15 ದಿನಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ಎಂಬ ಹೆಸರನ್ನ ಅಧಿಕೃತಗೊಳಿಸಲಿದೆ ಎಂದು ಸಂಸದರು ಮಾಹಿತಿ ನೀಡಿದ್ರು..
ಕೆಳದಿ ಶಿವಪ್ಪ ನಾಯಕ ರೈಲು ನಿಲ್ದಾಣ
ಅಲ್ಲದೆ ಶಿವಮೊಗ್ಗ ನಗರ ರೈಲ್ವೆ ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕ ಹೆಸರು ಅಧಿಕೃತಗೊಳ್ಳಲಿದೆ ಎಂದು ತಿಳಿಸಿದ ಸಂಸದರು, ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
