ಬೆಂಗಳೂರಿನಿಂದ ತೀರ್ಥಹಳ್ಳಿಗೆ ಬಂದ ಇಬ್ಬರು ತುಂಗಾ ನದಿಯಲ್ಲಿ ನಾಪತ್ತೆ! ನಡೆದಿದ್ದೇನು?

Two people who had come to Tirthahalli from Bangalore went missing in Tunga riverಬೆಂಗಳೂರಿನಿಂದ ತೀರ್ಥಹಳ್ಳಿಗೆ ಬಂದಿದ್ದ ಇಬ್ಬರು ತುಂಗಾ ನದಿಯಲ್ಲಿ ನಾಪತ್ತೆಯಾಗಿದ್ದಾರೆ

ಬೆಂಗಳೂರಿನಿಂದ  ತೀರ್ಥಹಳ್ಳಿಗೆ ಬಂದ ಇಬ್ಬರು ತುಂಗಾ ನದಿಯಲ್ಲಿ ನಾಪತ್ತೆ! ನಡೆದಿದ್ದೇನು?

KARNATAKA NEWS/ ONLINE / Malenadu today/ Sep 11, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿಗೆ ಪ್ರವಾಸಕ್ಕೆ ಬಂದಿದ್ದ ಮೂವರು ಯುವಕರ ಪೈಕಿ ಇಬ್ಬರು ತುಂಗಾ  ನದಿಯಲ್ಲಿ ಕಾಣೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ಮುಂದುವರಿದಿದೆ 

ಏನಿದು ಘಟನೆ 

ಬೆಂಗಳೂರು (Bangalore) ಮಾಗಡಿ ರಸ್ತೆಯ ನಿವಾಸಿಗಳಾದ 27 ವರ್ಷದ ಗೌತಮ್ ಹಾಗೂ 8 ನೇ ಮೈಲಿಕಲ್ಲು ನಿವಾಸಿ 25 ವರ್ಷದ ಸಂಜಯ್​ ನಾಪತ್ತೆಯಾದವರು. ಸದ್ಯ ಲಭ್ಯವಾದ ಮಾಹಿತಿ ಪ್ರಕಾರ, ಮಂಗಳೂರಿನ ಈಶ್ವರ್ ಮಲ್ಪೆಯವರ ಹುಡುಕಾಟದ ಫಲವಾಗಿ ಇಂದು ಬೆಳಗ್ಗೆ ಗೌತಮ್ ರವರ ಮೃತದೇಹ ಪತ್ತೆಯಾಗಿದೆ. 

ಈ ಇಬ್ಬರು  ನೆಲಮಂಗಲ ಲಕ್ಕನಹಳ್ಳಿ ನಿವಾಸಿ ಗಿರೀಶ್​ ಜೊತೆಯಲ್ಲಿ ತೀರ್ಥಹಳ್ಳಿಗೆ ಬಂದಿದ್ದರು. ತೀರ್ಥಹಳ್ಳಿಯ ವಿವಿದೆಡೆ ತಿರುಗಾಡಿ ನಿನ್ನೆ ಮಧ್ಯಾಹ್ನ ಇಲ್ಲಿನ ಭೀಮನಕಟ್ಟೆ  ಸಮೀಪ ತುಂಗಾನದಿಯಲ್ಲಿ ಈಜಲು ತೆರಳಿದ್ದರು.ಈ ವೇಳೆ ಸಂಜಯ್ ಹಾಗೂ ಗೌತಮ್​ ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟವೂ ಆರಂಭವಾಗಿದ್ದು ತಜ್ಞ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸ್ತಿದ್ದಾರೆ. ಸದ್ಯ ಗೌತಮ್​ ರ ಶವ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇನ್ನೊಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ

ಕಳೆದ ಶುಕ್ರವಾರವೇ ಶಿವಮೊಗ್ಗಕ್ಕೆ ಬಂದಿದ್ದ ಮೂವರು ಆಲ್ಟೋ ಕಾರಿನಲ್ಲಿ ಕುಪ್ಪಳ್ಳಿ, ಸೇರಿದಂತೆ ತೀರ್ಥಹಳ್ಳಿ ಪ್ರಸಿದ್ಧ ಸ್ಥಳಗಳಿಗೆ ತೆರಳಿ ಕಮ್ಮರಡಿಯಲ್ಲಿ ಉಳಿದುಕೊಂಡಿದ್ದರು. ಭೀಮನಕಟ್ಟೆಯ ಬಳಿ ಈಜಲು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ. 


ಇನ್ನಷ್ಟು ಸುದ್ದಿಗಳು