ಶಿವಮೊಗ್ಗ | ಅಪ್ರಾಪ್ತೆಗೆ ಕಿರುಕುಳ | ಅನ್ಯಕೋಮಿನ ಯುವಕನ ವಿರುದ್ಧ ಫೋಕ್ಸೋ ಕೇಸ್‌

Shimoga | Molesting a minor | POCSO case filed against youth from another community

ಶಿವಮೊಗ್ಗ | ಅಪ್ರಾಪ್ತೆಗೆ ಕಿರುಕುಳ | ಅನ್ಯಕೋಮಿನ ಯುವಕನ ವಿರುದ್ಧ ಫೋಕ್ಸೋ ಕೇಸ್‌
POCSO case

SHIVAMOGGA | MALENADUTODAY NEWS | May 24, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಪೊಲೀಸ್‌ ಸ್ಟೇಷನ್‌ ಒಂದರಲ್ಲಿ  ಪೋಕ್ಸೋ ಪ್ರಕರಣವೊಂದು ದಾಖಲಾಗಿದೆ. ಯುವತಿಯೊಬ್ಬಳನ್ನು ಹಿಂಬಾಲಿಸಿ ಆಕೆಯನ್ನ ಚುಡಾಯಿಸಿ ಕಿರುಕುಳ ನೀಡುತ್ತಿದ್ದ ಆರೋಪದ ಅಡಿಯಲ್ಲಿ ಅನ್ಯಕೋಮಿನ ಯುವಕನೊಬ್ಬನನ್ನ ಪೋಕ್ಸೋ ಕೇಸ್‌ನಲ್ಲಿ ಅರೆಸ್ಟ್‌ ಮಾಡಿ ಜೈಲಿಗೆ ಕಳುಹಿಸಲಾಗಿದೆ. ಆತನ ವಿರುದ್ಧ ಕೇಳಿಬರುತ್ತಿರುವ  ಎರಡನೇ ಆರೋಪ ಇದಾಗಿದೆ ಎಂದು ಹೇಳಲಾಗಿದ್ದು ಪೋಕ್ಸೋ ಅಡಿಯ ಪ್ರಕರಣವಾದ್ದರಿಂದ ಎಲ್ಲಾ ರೀತಿ ವೈಯಕ್ತಿಕ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗಿದೆ. 

ಉಳಿದಂತೆ, ತೀರ್ಥಹಳ್ಳಿ ತಾಲ್ಲೂಕು ಗ್ರಾಮವೊಂದರ ಅಪ್ರಾಪ್ತೆಯನ್ನ ಪದೇಪದೇ ಹಿಂಬಾಲಿಸುತ್ತಿದ್ದ ಯುವಕ ಆಕೆಗೆ ಕಿರುಕುಳ ನೀಡುತ್ತಿದ್ದ ಎಂದು ದೂರಲಾಗಿದೆ. ಆ ಸಂಬಂಧ ಅಪ್ರಾಪ್ತೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಜಡ್ಜ್‌ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಆಕೆಯ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.