ತೀರ್ಥಹಳ್ಳಿಯಲ್ಲಿ ಕಾಣ ಸಿಕ್ಕಿತು ಅಪರೂಪದ ಕಾಡು ಪ್ರಾಣಿ! ಇಲ್ಲಿದೆ ನೋಡಿ ದೃಶ್ಯ!

A group of rare Dhole have been reported in Theerthahalli taluk ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಪರೂಪದ ಕೆನ್ನಾಯಿಗಳ ಗುಂಪು ಕಾಣಸಿಕ್ಕಿರುವ ಬಗ್ಗೆ ವರದಿಯಾಗಿದೆ

ತೀರ್ಥಹಳ್ಳಿಯಲ್ಲಿ ಕಾಣ ಸಿಕ್ಕಿತು ಅಪರೂಪದ ಕಾಡು ಪ್ರಾಣಿ! ಇಲ್ಲಿದೆ ನೋಡಿ ದೃಶ್ಯ!

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS 

ಕಾಡಿನ ಜೀವಿಗಳಿಲ್ಲಿ ತೀರಾ ಅಪರೂಪಕ್ಕೆ ಕಾರಣಿಸಿಕೊಳ್ಳುವ ಕೆನ್ನಾಯಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.  

ತಾಲೂಕಿನ ಹೊದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆಯಾಗಿದ್ದು ಮಾರೀಕೆರೆ ಅರಣ್ಯದ ಬಳಿ ಕೆನ್ನಾಯಿಗಳ ಗುಂಪನ್ನ ಕಂಡು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.  ಅತಿ ವಿರಳವಾದ ಕೆನ್ನಾಯಿಯ ಗುಂಪು ಕಾಣಿಸಿರುವುರು ಅರಣ್ಯ ಇಲಾಖೆ ಸಿಬ್ಬಂದಿಯ ಗಮನಕ್ಕೂ ಬಂದಿದೆ.  

ಅರಣ್ಯ ವೀಕ್ಷಕರಾದ ಪ್ರಜ್ವಲ್ ಇವರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಈ ಕೆನ್ನಾಯಿ ಗುಂಪು ಕಾಣಸಿಕ್ಕಿದೆ.  ಮಾರಿಕೆರೆ ದಡದಿಂದ ನಲ್ಲಿಸರ ಕಾಡಿನತ್ತ ಕೆನ್ನಾಯಿ ಗುಂಪು ಹಾದು ಹೋಗುತ್ತಿರುವುದನ್ನು ವಾಚರ್​ ಗಮನಿಸಿದ್ದು, ಆದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.  


ಇನ್ನಷ್ಟು ಸುದ್ದಿಗಳು